ಮದ್ವೆಯಾದ ಒಂದೇ ತಿಂಗಳಿಗೆ ಪತಿ ಶವವಾಗಿ ಪತ್ತೆ – ಬ್ಯಾಂಕ್ ಉದ್ಯೋಗಿ ಜೊತೆಗಿನ ಅಫೇರ್ ಕಾರಣ; ರಹಸ್ಯ ಬಯಲು

Public TV
3 Min Read
Andhra Kurnool Murder

– ಒಬ್ಬನ ಜೊತೆಗೆ ತಾಯಿ ಮಗಳ ಕಳ್ಳಸಂಬಂಧ; ಮೃತನ ಪತ್ನಿ, ಅತ್ತೆ ಪೊಲೀಸ್ ವಶಕ್ಕೆ
– ಪ್ರಿಯಕರನಿಗೆ 2,000ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದ ಪತ್ನಿ

ಅಮರಾವತಿ: ದೇಶ್ಯಾದ್ಯಂತ ಸುದ್ದಿಯಲ್ಲಿದ್ದ ಮೇಘಾಲಯ ಹನಿಮೂನ್ ಹತ್ಯೆ (Honeymoon Murder) ಘಟನೆ ಮಾಸುವ ಮುನ್ನವೇ ಆಂಧ್ರಪ್ರದೇಶದ (Andhra Pradesh) ಕರ್ನೂಲ್ (Karnool) ಜಿಲ್ಲೆಯಲ್ಲಿ ಅಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಮದುವೆಯಾದ ಒಂದೇ ತಿಂಗಳಿಗೆ ಪತಿ ಶವವಾಗಿ ಪತ್ತೆಯಾಗಿದ್ದು, ಪತ್ನಿ ಹಾಗೂ ಆಕೆಯ ತಾಯಿ ಸಂಚುರೂಪಿಸಿ ಕೊಲೆ ಮಾಡಿರುವುದಾಗಿ ತನಿಖೆಯಲ್ಲಿ ಬಯಲಾಗಿದೆ. ತೆಲಂಗಾಣದ (Telangana) ಜೋಗುಳಂಬ ಗಡ್ವಾಲ್ ಜಿಲ್ಲೆಯ ನಿವಾಸಿ ತೇಜೇಶ್ವರ್ (32) ಮೃತ ಪತಿ, ಖಾಸಗಿ ಕಂಪನಿಯೊಂದರಲ್ಲಿ ಭೂಮಾಪನಾಧಿಕಾರಿಯಾಗಿ ಹಾಗೂ ನೃತ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಐಶ್ವರ್ಯ ಹಂತಕಿ ಪತ್ನಿ ಹಾಗೂ ಆಕೆಯ ತಾಯಿಯನ್ನು ಸುಜಾತಾ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಕದನ ಭೂಮಿಯಿಂದ ಓಡಿಹೋಗಲ್ಲ, ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ: ಬಿಆರ್ ಪಾಟೀಲ್

ಮೇ 18ರಂದು ಮೃತ ತೇಜೇಶ್ವರ್ ಹಾಗೂ ಐಶ್ವರ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜೂ.17ರಂದು ತೇಜೇಶ್ವರ್ ನಾಪತ್ತೆಯಾಗಿರುವುದಾಗಿ ದೂರು ದಾಖಲಾಗಿತ್ತು. ದೂರಿನ ಆಧಾರದ ಮೇಲೆ ತನಿಖೆಗಿಳಿದ ಪೊಲೀಸರು, ಕರ್ನೂಲ್ ನಗರದ ಸುಮಾರು 30-40 ಕಿ.ಮೀ ದೂರದಲ್ಲಿರುವ ಪಣ್ಯಂ ಮಂಡಲದ ಸುಗಲಿಮೆಟ್ಟುವಿನಲ್ಲಿ ಆತನ ಮೃತದೇಹವನ್ನು ಪತ್ತೆಹಚ್ಚಿದ್ದರು. ದೇಹದ ಮೇಲೆ ಚಾಕುವಿನಿಂದಾದ ಗಾಯದ ಗುರುತು, ಕುತ್ತಿಗೆ ಸೀಳಿದ ಗಾಯಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಮೃತ ತೇಜೇಶ್ವರ್ ಕುಟುಂಬಸ್ಥರ ಮಾಹಿತಿ ಪ್ರಕಾರ, ಐಶ್ವರ್ಯ ತಾಯಿ ಕರ್ನೂಲ್‌ನ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಬ್ಯಾಂಕ್‌ನ ಓರ್ವ ಸಿಬ್ಬಂದಿಯೊಂದಿಗೆ ಐಶ್ವರ್ಯ ಅಕ್ರಮ ಸಂಬಂಧ ಹೊಂದಿದ್ದಳು. ಅದೇ ಸಮಯದಲ್ಲಿ ಆಕೆ ತೇಜೇಶ್ವರ್ ಜೊತೆಗೂ ಸಂಬಂಧ ಹೊಂದಿದ್ದಳು. ಬಳಿಕ ಎರಡು ಕುಟುಂಬಗಳ ಒಪ್ಪಿಗೆಯ ನಂತರ ಕಳೆದ ಫೆಬ್ರವರಿಯಲ್ಲಿ ಮದುವೆ ನಿಶ್ಚಯಿಸಲಾಗಿತ್ತು. ಆದರೆ ಅದೇ ವೇಳೆ ಐಶ್ವರ್ಯ ಕಾಣೆಯಾದಳು. ಓಡಿಹೋಗಿರಬಹುದು ಅಂದುಕೊಂಡಿದ್ದೆವು, ಆದರೆ ಸ್ವಲ್ಪ ದಿನಗಳ ನಂತರ ಮನೆಗೆ ಮರಳಿದ ಐಶ್ವರ್ಯ, ನನ್ನ ಸ್ನೇಹಿತೆಯೊಬ್ಬಳು ವರದಕ್ಷಿಣೆ ಕಿರುಕುಳದಿಂದ ಬಳಲುತ್ತಿದ್ದಳು. ಆಕೆಯನ್ನು ಭೇಟಿಯಾಗಲು ಹೋಗಿದ್ದೆ ಅಂತ ಹೇಳಿದ್ದಳು. ಬಳಿಕ ನಾನು ತೇಜೇಶ್ವರ್‌ನ್ನನ್ನ ಪ್ರೀತಿಸುತ್ತಿದ್ದೇನೆ ಅವನನ್ನೇ ಮದುವೆಯಾಗುತ್ತೇನೆ ಎಂದಿದ್ದಳು. ನಾವು ತೇಜೇಶ್ವರ್‌ಗೆ ಆಕೆಯೊಂದಿಗೆ ಮದ್ವೆ ಬೇಡ ಅಂತಲೇ ಹೇಳಿದ್ದೆವು. ಆದ್ರೆ ಮಗ ನಮ್ಮ ಮಾತು ಕೇಳದಿದ್ದರಿಂದ ಮೇ ತಿಂಗಳಲ್ಲಿ ಮದುವೆ ನಿಶ್ಚಯಿಸಲಾಯಿತು ಎಂದರು.

ಮದುವೆಯಾದ ಬಳಿಕ ತೇಜೇಶ್ವರ್‌ಗೆ ತನ್ನ ಪತ್ನಿಯ ಮೇಲೆ ಹಲವು ಬಾರಿ ಅನುಮಾನ ಉಂಟಾಗಿತ್ತು. ಆಕೆ ಪದೇ ಪದೇ ಫೋನ್‌ನಲ್ಲಿ ಮಾತಾಡುತ್ತಿರುವುದನ್ನು ಆತ ಗಮನಿಸಿದ್ದ ಎಂದು ತಿಳಿಸಿದ್ದಾರೆ. ಕುಟುಂಬಸ್ಥರ ಆರೋಪದ ಆಧಾರದ ಮೇಲೆ ಹಂತಕಿ ಐಶ್ವರ್ಯ ಹಾಗೂ ಆಕೆಯ ತಾಯಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ತನಿಖೆ ವೇಳೆ, ಬ್ಯಾಂಕ್‌ನ ಓರ್ವ ಸಿಬ್ಬಂದಿಯೊಂದಿಗೆ ತಾಯಿ ಹಾಗೂ ಮಗಳು ಇಬ್ಬರೂ ಕೂಡ ಸಂಬಂಧ ಹೊಂದಿದ್ದರು. ಕಾಲ್ ಹಿಸ್ಟರಿ ತೆಗೆಸಿದಾಗ ಬ್ಯಾಂಕ್ ಸಿಬ್ಬಂದಿಗೆ ಐಶ್ವರ್ಯ 2,000ಕ್ಕೂ ಹೆಚ್ಚು ಬಾರಿ ಕರೆ ಮಾಡಿರುವುದಾಗಿ ಬೆಳಕಿಗೆ ಬಂದಿದೆ. ಜೊತೆಗೆ ಆತನೇ ತೇಜೇಶ್ವರ್‌ನನ್ನು ಕೊಲೆ ಮಾಡಲು ಬಾಡಿಗೆ ಹಂತಕರನ್ನು ನಿಯೋಜಿಸಿದ್ದ. ಅಷ್ಟೇ ಅಲ್ಲದೇ ಕಾರನ್ನು ಕಳುಹಿಸಿ, 10 ಎಕರೆ ಭೂಮಿಯ ಸಮೀಕ್ಷೆ ನಡೆಸಬೇಕು ಎಂದು ನಂಬಿಸಿ, ಕರೆದೊಯ್ದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ತಾಯಿ ಹಾಗೂ ಮಗಳು ಇಬ್ಬರು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಸದ್ಯ ಈ ಕೃತ್ಯದಲ್ಲಿ ಭಾಗಿಯಾಗಿರುವ ಬ್ಯಾಂಕ್ ಸಿಬ್ಬಂದಿ ಹಾಗೂ ಇತರ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಬೆಳಕಿಗೆ ಬರಲಿದೆ.

ಇದಕ್ಕೂ ಮುನ್ನ ಮೇಘಾಯಲಕ್ಕೆ ಹನಿಮೂನ್‌ಗೆ ಹೋಗಿದ್ದಾಗ ಪತ್ನಿ ಸೋನಮ್ ರಘುವಂಶಿ ಪ್ರಿಯಕರನೊಂದಿಗೆ ಸೇರಿ ತನ್ನ ಪತಿ ರಾಜಾ ರಘುವಂಶಿಯನ್ನು ಕೊಲೆ ಮಾಡಿದ್ದಳು.ಇದನ್ನೂ ಓದಿ: ಆನೇಕಲ್‌ | ಹಾಡಹಗಲೇ ಮೈಕೈ ಮುಟ್ಟಿ ಯುವತಿಗೆ ಲೈಂಗಿಕ ಕಿರುಕುಳ – ಐವರ ವಿರುದ್ಧ ದೂರು

Share This Article