ಹೈದರಾಬಾದ್: ಆನ್‍ಲೈನ್‍ನಲ್ಲಿ ಆ್ಯಪ್ (Online Loan App) ಮೂಲಕ ಸಾಲ ನೀಡಿದವರ ಕಿರುಕುಳ ಸಹಿಸಲಾಗದೇ ದಂಪತಿ(Couple) ತಮ್ಮ ಪುತ್ರಿಯ ಹುಟ್ಟುಹಬ್ಬದ ದಿನದಂದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
Advertisement
ಮೃತರನ್ನು ಕೊಲ್ಲಿ ದುರ್ಗಾರಾವ್ ಹಾಗೂ ರಮ್ಯಾ ಲಕ್ಷ್ಮಿ ಎಂದು ಗುರುತಿಸಲಾಗಿದೆ. ಕೊಲ್ಲಿ ದುರ್ಗಾರಾವ್ ಅವರು ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಲಬ್ಬರ್ತಿ ಮೂಲದವರಾಗಿದ್ದು, 10 ವರ್ಷಗಳ ಹಿಂದೆ ಜೀವನೋಪಾಯ ಅರಸಿ ರಾಜಮಹೇಂದ್ರವರಂಗೆ ಬಂದಿದ್ದರು. ಆರು ವರ್ಷಗಳ ಹಿಂದೆ ರಮ್ಯಾ ಲಕ್ಷ್ಮಿಯನ್ನು ಮದುವೆಯಾಗಿದ್ದರು. ಈ ದಂಪತಿಗೆ 4 ವರ್ಷದ ನಾಗ ಸಾಯಿ ಹಾಗೂ 2 ವರ್ಷದ ಲಿಕಿತಾ ಶ್ರೀ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು.
Advertisement
Advertisement
ಪೇಂಟರ್ ಆಗಿ ದುರ್ಗಾರಾವ್ ಹಾಗೂ ಟೈಲರ್ ಆಗಿ ರಮ್ಯಾ ಲಕ್ಷ್ಮಿ ಕಾರ್ಯನಿರ್ವಹಿಸುತ್ತಿದ್ದರು. ಕುಟುಂಬದಲ್ಲಿನ ಹಣಕಾಸಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಈ ದಂಪತಿ ಎರಡು ಆನ್‍ಲೈನ್ ಲೋನ್ ಅಪ್ಲಿಕೇಶನ್‍ಗಳಿಂದ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರು. ಸಕಾಲದಲ್ಲಿ ಸಾಲ ಮರುಪಾವತಿ ಮಾಡದ ಕಾರಣ ಸಾಲ ನೀಡಿದವರು ಕಿರುಕುಳ ನೀಡಲು ಆರಂಭಿಸಿದರು. ದಂಪತಿ ಸಾಲದ ಮೊತ್ತದ ಸ್ವಲ್ಪ ಭಾಗವನ್ನು ಮಾತ್ರ ಮರುಪಾವತಿಸಿದರು. ಆದರೆ ಅವರು ಸಾಲ ಪಡೆದ ಪೂರ್ಣ ಮೊತ್ತವನ್ನು ಪಾವತಿಸಲು ಸಾಧ್ಯವಾಗಲಿಲ್ಲ.
Advertisement
ನಂತರ ಆನ್‍ಲೈನ್ ಲೋನ್ ಆ್ಯಪ್ ಕಂಪನಿಯು ದಂಪತಿಗೆ ಹೆಚ್ಚಿನ ಹಣ ನೀಡುವಂತೆ ಬೇಡಿಕೆಯಿಡಲು ಪ್ರಾರಂಭಿಸಿತು ಮತ್ತು ರಮ್ಯಾ ಲಕ್ಷ್ಮಿ ಅವರ ಅಸಭ್ಯ, ಮಾರ್ಫ್ (Morphed Picture) ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿತ್ತು. ಇದನ್ನೂ ಓದಿ: ಆತ್ಮಹತ್ಯೆ ಮಾಡ್ಕೊಂಡ ರೈತನ ಬಗ್ಗೆ ಹಗುರ, ಅವಾಚ್ಯ ಪದ ಬಳಸಿದ ಕೆ.ಬಿ ಕೋಳಿವಾಡ
ಹೇಗಾದರೂ ಹೆಚ್ಚು ಹಣ (Money) ವನ್ನು ಸಂಪಾದಿಸಲೇ ಬೇಕು ಎಂಬ ಕಾರಣಕ್ಕೆ ದುರ್ಗಾ ರಾವ್ ಅವರು 10 ದಿನಗಳ ಹಿಂದೆ ಡೆಲಿವರಿ ಬಾಯ್(Deliver Boy) ಆಗಿ ಹೆಚ್ಚುವರಿ ಕೆಲಸವನ್ನು ಮಾಡುತ್ತಿದ್ದರು ಮತ್ತು ತಮ್ಮ ಕೈಲಾದಷ್ಟು ಹಣವನ್ನು ಸಂಪಾದಿಸಿದರು. ಇದನ್ನೂ ಓದಿ: ಉಗ್ರರ ತವರು ನೆಲ ಪಾಕಿಸ್ತಾನಕ್ಕೆ ಅಮೆರಿಕದಿಂದ 3,500 ಕೋಟಿ ಸೇನಾ ನೆರವು
ಈ ನಡುವೆ ಆನ್‍ಲೈನ್ ಸಾಲದ ಆ್ಯಪ್ ಕಂಪನಿಯು ರಮ್ಯಾ ಲಕ್ಷ್ಮಿ ಅವರ ಮಾರ್ಫ್ ಮಾಡಿದ ಫೋಟೋಗಳನ್ನು ವಾಟ್ಸಾಪ್ ಮೂಲಕ ಕಳುಹಿಸುವ ಮೂಲಕ ಬೆದರಿಕೆಯೊಡ್ಡಿದೆ. ಎರಡು ದಿನಗಳಲ್ಲಿ ಪೂರ್ಣ ಸಾಲವನ್ನು ಮರುಪಾವತಿಸದೇ ಇದ್ದರೆ ಶೀಘ್ರದಲ್ಲೇ ಆಕೆಯ ಮಾರ್ಫ್ ಮಾಡಿದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ದಂಪತಿಗೆ ಎಚ್ಚರಿಕೆ ನೀಡಿದೆ.
ನಂತರ ಸೆಪ್ಟೆಂಬರ್ 5 ರಂದು ದಂಪತಿ ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ಟೂರಿಗೆ ಪ್ರಯಾಣ ಬೆಳೆಸಿದರು. ನಗರದ ಗೋದಾವರಿ ನದಿಯ ಬಂಡ್‍ನಲ್ಲಿರುವ ಹೋಟೆಲ್‍ನಲ್ಲಿ ತಂಗಿದ್ದರು. ಈ ವೇಳೆ ಮಧ್ಯರಾತ್ರಿ ರಮ್ಯಾ ತನ್ನ ಸೋದರಸಂಬಂಧಿಗೆ ಕರೆ ಮಾಡಿ ತಾನು ಮತ್ತು ತನ್ನ ಪತಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದು, ತಮ್ಮ ಇಬ್ಬರೂ ಮಕ್ಕಳನ್ನು ನೋಡಿಕೊಳ್ಳುವಂತರ ಮನವಿ ಮಾಡಿದ್ದಾರೆ.
ಕೂಡಲೇ ರಮ್ಯಾ ಸೋದರ ಸಂಬಂಧಿ ಇತರ ಸಂಬಂಧಿಕರಿಗೆ ಮಾಹಿತಿ ನೀಡಿ ಹೋಟೆಲ್‍ಗೆ ತಲುಪಿದಾಗ ದಂಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ದಂಪತಿ ಸಾವನ್ನಪ್ಪಿದ್ದು, ಇಬ್ಬರೂ ವಿಷ ಸೇವಿಸಿದ್ದಾರೆ ಎಂಬ ಸತ್ಯ ತಿಳಿದು ಬಂದಿದೆ. ಇದೀಗ ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.