ಹೈದರಾಬಾದ್: ಆಂಧ್ರಪ್ರದೇಶ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಸಹೋದರಿ ಹಾಗೂ ಯುವಜನ ಶ್ರಮಿಕ ರೈತತೆಲಂಗಾಣ ಪಕ್ಷ ಮುಖ್ಯಸ್ಥೆ ವೈ.ಎಸ್. ಶರ್ಮಿಳಾ ಅವರು ತೆಲಂಗಾಣ ರಾಜ್ಯಾದ್ಯಂತ ಪ್ರಜಾ ಪ್ರಸ್ಥಾನಂ ಪಾದಯಾತ್ರೆ ಮಾಡುವ ವೇಳೆ ಜೇನು ನೋಣಗಳು ದಾಳಿ ನಡೆಸಿದ ವೀಡಿಯೋ ವೈರಲ್ ಆಗುತ್ತಿದೆ.
ಶರ್ಮಿಳಾ ದುರ್ಷಗಾನಿಪಲ್ಲಿ ಗ್ರಾಮದ ಮರದ ಕೆಳಗೆ ನಿಂತು ಜನರೊಂದಿಗೆ ಸಂವಾದ ನಡೆಸುತ್ತಿದ್ದರು. ಈ ವೇಳೆ ಅದೇ ಮರಕ್ಕೆ ಗೂಡುಕಟ್ಟಿದ ಜೇನು ದಾಳಿ ನಡೆಸಿದೆ. ಒಮ್ಮೆಲೆ ಜೇನಿನ ಶಬ್ದ ಕೇಳಿ ಅಲ್ಲಿ ನೆರೆದಿದ್ದವರೆಲ್ಲರೂ ಆತಂಕಕ್ಕೊಳಗಾಗಿದ್ದಾರೆ.
Advertisement
Advertisement
ಆದರೆ ಶರ್ಮಿಳಾ ಅವರ ಭದ್ರತಾ ಸಿಬ್ಬಂದಿ ಎಚ್ಚರದಿಂದ ಅವರನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಶರ್ಮಿಳಾರನ್ನು ರಕ್ಷಿಸಲು ಅಲ್ಲಿದ್ದವರೆಲ್ಲ ಟವೆ ಲ್‍ಗಳನ್ನು ಬೀಸಿ, ಜೇನುನೊಣಗಳನ್ನು ದೂರ ಓಡಿಸಲು ಪ್ರಯತ್ನಿಸಿದ್ದಾರೆ. ಇದೇ ಸಂದರ್ಭದಲ್ಲಿ ಪಕ್ಷದ ಕೆಲ ಕಾರ್ಯಕರ್ತರಿಗೆ ಜೇನು ಕಚ್ಚಿದೆ. ಇದನ್ನೂ ಓದಿ: 2025ರ ವೇಳೆಗೆ ಭಾರತದಲ್ಲಿ ತಲೆ ಎತ್ತಲಿವೆ 220 ವಿಮಾನ ನಿಲ್ದಾಣ: ಸಿಂಧಿಯಾ
Advertisement
ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್)ವನ್ನು ಖಂಡಿಸಿ ಮತ್ತು ಸಿಎಂ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರ ಬಂಗಾರು ತೆಲಂಗಾಣ ತರುವುದಾಗಿ ಭರವಸೆ ನೀಡಿ ನ್ಯಾಯ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಶರ್ಮಿಳಾ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಗಣಿಗಾರಿಕೆ ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠ ರಚನೆ – ಸುಪ್ರೀಂಕೋರ್ಟ್