ಹೋರಾಟದ ಮೂಲಕವೇ ಗೆದ್ದು ಆಂಧ್ರ ಪ್ರದೇಶದ ಸಿಎಂ ಹುದ್ದೆ ಅಲಂಕರಿಸಿರುವ ಜಗನ್ ಮೋಹನ್ ರೆಡ್ಡಿ (Jagan Mohan Reddy) ಕುರಿತಾಗಿ ಸಿನಿಮಾವೊಂದು ಮೂಡಿ ಬರಲಿದೆ. ಈಗಾಗಲೇ ಚಿತ್ರಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು, ಚಿತ್ರಕ್ಕೆ ‘ಯಾತ್ರಾ 2’ ಎಂದು ಹೆಸರಿಡಲಾಗಿದೆ. ತೆಲುಗು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದ್ದರೂ ಜಗನ್ ಪಾತ್ರ ಮಾಡುವುದು ತಮಿಳಿನ ಹೆಸರಾಂತ ನಟ ಎಂದು ಹೇಳಲಾಗುತ್ತಿದೆ.
ಜಗನ್ ತಂದೆ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ್ ರೆಡ್ಡಿ (Rajashekhar Reddy) ಅವರ ಬಯೋಪಿಕ್ (Biopic) ಕೂಡ ಈ ಹಿಂದೆ ರಿಲೀಸ್ ಆಗಿತ್ತು. ಆ ಚಿತ್ರಕ್ಕೆ ‘ಯಾತ್ರಾ’ ಎಂದು ಹೆಸರಿಡಲಾಗಿತ್ತು. ಮಗನ ಚಿತ್ರಕ್ಕೆ ‘ಯಾತ್ರಾ 2’ ಎಂದು ಹೆಸರಿಟ್ಟಿರುವುದಾಗಿ ನಿರ್ದೇಶಕ ಮಹಿ ವಿ ರಾಘವ್ (Mahi V Raghav) ತಿಳಿಸಿದ್ದಾರೆ. ಯಾತ್ರಾ ಸಿನಿಮಾವನ್ನು ಇವರೇ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ಮತ್ತು ವೈಎಸ್ ಆರ್ ವಿರೋಧಿಗಳು ವಿರೋಧಿಸಿದ್ದರು. ಇದನ್ನೂ ಓದಿ:‘ಭಜರಂಗಿ’ ಹೆಸರಿನಲ್ಲಿ ನಟಿಸಿ, ಬಜರಂಗದಳದ ನಿಷೇಧದ ಬಗ್ಗೆ ನಿಮ್ಮ ನಡೆಯೇನು? ಶಿವಣ್ಣಗೆ ಸಂಬರ್ಗಿ ಕೌಂಟರ್
- Advertisement
- Advertisement
ಜಗನ್ ಬಯೋಪಿಕ್ ತೆಲುಗಿನಲ್ಲಿ ಮೂಡಿ ಬರುತ್ತಿರುವ ತಮಿಳಿನ ನಟರೊಬ್ಬರು ಜಗನ್ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ತಮಿಳಿನ ನಟ ಜೀವ (Jeeva) ಈ ಸಿನಿಮಾದ ಹೀರೋ ಎಂದು ಹೇಳಲಾಗುತ್ತಿದೆ. ಈ ಕುರಿತು ಚಿತ್ರತಂಡ ಅಧಿಕೃತ ಮಾಹಿತಿ ನೀಡದೇ ಇದ್ದರೂ, ಜೀವ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಅಲ್ಲದೇ, ಜೀವ ಜೊತೆ ನಿರ್ದೇಶಕರು ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗುತ್ತಿದೆ.
ವೈಎಸ್ ಆರ್ ಪಾತ್ರವನ್ನು ಮಮ್ಮುಟ್ಟಿ ನಿರ್ವಹಿಸಿದ್ದರು. ನಲವತ್ತು ಕೋಟಿಗೂ ಅಧಿಕ ಲಾಭ ಚಿತ್ರಕ್ಕೆ ಬಂದಿತ್ತು. ಈ ಬಾರಿಯೂ ಅಂಥದ್ದೊಂದು ರೆಸ್ಪಾನ್ಸ್ ಸಿಗಲಿದೆ ಎಂದು ಹೇಳಲಾಗುತ್ತಿದೆ. ಮುಂಬರುವ ವಿಧಾನ ಸಭೆ ಚುನಾವಣೆಗೂ ಮುನ್ನ ಚಿತ್ರ ತಯಾರಾಗಿ, ಬಿಡುಗಡೆ ಮಾಡುವ ಪ್ಲ್ಯಾನ್ ಕೂಡ ಹಾಕಿಕೊಳ್ಳಲಾಗಿದೆಯಂತೆ.