ಬೆಂಗಳೂರು: ಕಾಂಗ್ರೆಸ್ ಜೊತೆ ಮೈತ್ರಿಗೆ ಮುಂದಾಗಿರುವ ಆಂಧ್ರಪ್ರದೇಶದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಇಂದು ಬೆಂಗಳೂರಿಗೆ ಆಗಮಿಸಲಿದ್ದು, ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಮಾತುಕತೆ ನಡೆಸಲು ಚಂದ್ರಬಾಬು ನಾಯ್ಡು ಆಗಮಿಸುತ್ತಿದ್ದು, ಇಬ್ಬರ ನಾಯಕರ ಭೇಟಿ ತೀವ್ರ ಕುತೂಹಲ ಮೂಡಿಸಿದೆ. ಈಗಾಗಲೇ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಜೆಡಿಎಎಸ್ ವರಿಷ್ಠರಿಂದ ಸಲಹೆ ಪಡೆಯಲು ಚಂದ್ರಬಾಬು ನಾಯ್ಡು ಆಗಮಿಸುತ್ತಿದ್ದಾರೆ ಎನ್ನಲಾಗಿದೆ.
Advertisement
Advertisement
ಇದೇ ವೇಳೆ ಜನಾರ್ದನ ರೆಡ್ದಿಗಾಗಿ ಸಿಸಿಬಿ ಪೊಲಿಸರು ಶೋಧ ನಡೆಸುತ್ತಿರುವುದರಿಂದ ಕರ್ನಾಟಕ ಸಿಎಂ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಉಳಿದಂತೆ ಕರ್ನಾಟಕ ಪಂಚಕ್ಷೇತ್ರಗಳ ಉಪಚುನಾವಣೆಯ ಬಳಿಕ ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ ವೇಳೆಯೂ ಚಂದ್ರಬಾಬು ನಾಯ್ಡು ಮಾಜಿ ಪ್ರಧಾನಿ ದೇವೇಗೌಡ ಶುಭಾಶಾಯ ತಿಳಿಸಿದ್ದರು. ಇದನ್ನು ಓದಿ: ದೇಶ ಉಳಿಸಲು ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದೇವೆ: ಚಂದ್ರಬಾಬು ನಾಯ್ಡು
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv