ಮೇ 13ರಂದು ನಡೆದ ಆಂಧ್ರಪ್ರದೇಶದ (Andhra Pradesh) ಚುನಾವಣೆಯಲ್ಲಿ ಪವನ್ ಕಲ್ಯಾಣ್ (Pawan Kalyan) ಪೀಠಾಪುರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 1,32,725 ಮತಗಳನ್ನು ಪಡೆಯುವ ಮೂಲಕ ಪವನ್ ಕಲ್ಯಾಣ್ ಗೆಲುವು ಸಾಧಸಿದಿದ್ದಾರೆ. ಗೆಲುವನ್ನು ಪವನ್ ಗೆ ಅವರ ಪತ್ನಿ ಆರತಿ ಎತ್ತಿ ಸ್ವಾಗತಿಸಿದ್ದಾರೆ.
Advertisement
ತೆಲುಗಿನ ಖ್ಯಾತ ನಟ, ಜನಸೇನಾ ಪಾರ್ಟಿ ಮುಖ್ಯಸ್ಥ ಪವನ್ ಕಲ್ಯಾಣ್ ಬೆಂಬಲಕ್ಕೆ ತೆಲುಗಿನ ಹೆಸರಾಂತ ನಟ ಅಲ್ಲು ಅರ್ಜುನ್ (Allu Arjun) ಬೆಂಬಲಕ್ಕೆ ನಿಂತಿದ್ದರು. ಪವನ್ ಕಲ್ಯಾಣ್ ಗೆಲುವಿಗೆ ಶ್ರಮಿಸುವುದಾಗಿ ಅವರು ಹೇಳಿಕೊಂಡಿದ್ದರು. ಪವನ್ ಅವರ ಸಮಾಜಸೇವೆಯನ್ನೂ ಅವರು ಶ್ಲ್ಯಾಘಿಸಿದ್ದರು. ನಟ ನಾನಿ ಸೇರಿದಂತೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಪವನ್ ಕಲ್ಯಾಣ್ ಪರ ಮತಯಾಚನೆ ಮಾಡುವ ಮೂಲಕ ಚುನಾವಣಾ ಕಣವನ್ನು ರಂಗೇರಿಸಿದ್ದರು.
Advertisement
Advertisement
ಆಂಧ್ರಪ್ರದೇಶದಲ್ಲಿ ಚುನಾವಣೆ ಕಾವು ಜೋರಾಗಿದೆ. ದಿನಕ್ಕೊಂದು ತಿರುವನ್ನೂ ಅದು ಪಡೆದುಕೊಳ್ಳುತ್ತಿತ್ತು. ಅದರಲ್ಲೂ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೋಲಿಗಾಗಿ ಸರ್ವ ಪಕ್ಷಗಳು ಒಂದಾಗಿದ್ದವು. ಮೈತ್ರಿ ಪಕ್ಷಗಳನ್ನು ಬಲ ಪಡಿಸೋಕೆ ಏನೆಲ್ಲ ಕಸರತ್ತುಗಳನ್ನು ಮಾಡಲಾಗಿತ್ತು. ಜಗನ್ ಮೋಹನ್ ರೆಡ್ಡಿ ಪಕ್ಷವನ್ನು ಸೋಲಿಸಲು ಒಂದು ಕಡೆ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ (Jana Sena) ಟೊಂಕ ಕಟ್ಟಿ ನಿಂತಿದ್ದರೆ, ಅದರ ಬೆಂಬಲಕ್ಕೆ ಹೆಸರಾಂತ ನಟ ಚಿರಂಜೀವಿ ಕೂಡ ಇರುವುದಾಗಿ ಘೋಷಣೆ ಮಾಡಿದ್ದರು.