ಅಂದರ್ ಬಾಹರ್ ಆಡುತ್ತಿದ್ದ 9 ಜನರ ಬಂಧನ, 5 ಬೈಕ್ ವಶ

Public TV
0 Min Read
cng andhar bahar

ಚಾಮರಾಜನಗರ: ರಸ್ತೆಬದಿ ಜೂಜಾಡುತ್ತಿದ್ದ 9 ಮಂದಿಯನ್ನು ಸಿಇಎನ್ ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಹನೂರು ಹೊರವಲಯದಲ್ಲಿ ನಡೆದಿದೆ.

ಮಾದೇಶ್, ಶಿವಮಲ್ಲು, ಕುಮಾರ್, ಜಡೇಸ್ವಾಮಿ, ಮಹೇಶ್ ಕುಮಾರ್, ಬಸವರಾಜು, ರಾಜು, ಸಿದ್ದು, ರವಿ ಬಂಧಿತರು. ರಸ್ತೆ ಬದಿ ಅಂದರ್- ಬಾಹರ್ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಇಎನ್ ಪಿಐ ಮಹದೇವ ಶೆಟ್ಟಿ ನೇತೃತ್ವದ ತಂಡ ದಾಳಿ ನಡೆಸಿ ಜೂಜುಕೋರರನ್ನು ಬಂಧಿಸಿ ಹನೂರು ಪೊಲೀಸರ ವಶಕ್ಕೆ ನೀಡಿದ್ದಾರೆ.

WhatsApp Image 2019 12 17 at 7.22.12 PM

ಆಟಕ್ಕಿಟ್ಟಿದ್ದ 39 ಸಾವಿರ ರೂ. ನಗದು, 5 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪರಾರಿಯಾಗಿರುವ ಹಲವರ ಪತ್ತೆಗೆ ಬಲೆ ಬೀಸಲಾಗಿದೆ. ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *