ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡೆಬಂಬಳಿ ಗ್ರಾಮದಲ್ಲಿ ವಿಶಾಲವಾದ ಮನೆಗಳನ್ನು ನೀವು ಕಾಣಬಹುದು. ಈ ಗ್ರಾಮದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮನೆಗಳು ಹಳೆ ಕಾಲದ ಮಾದರಿಯಲ್ಲಿವೆ. ಅಂದಿನಿಂದ ಇಂದಿನವರೆಗೂ ಈ ಮನೆಗಳಲ್ಲಿ ಜನವಾಸ ಮಾಡುತ್ತಿದ್ದಾರೆ. ಈ ಮನೆಗಳು ನಮಗೆ 400 ವರ್ಷದ ಹಿಂದಿನ ಜನರ ನಾಗರಿಕತೆಯನ್ನು ತಿಳಿಸಿಕೊಡುತ್ತವೆ. ಆಗಿನ ಕಾಲದಲ್ಲಿ ನಿಜಕ್ಕೂ ಎಷ್ಟು ಬುದ್ಧಿವಂತ ಜನ ಇದ್ದರು ಅವರು ಜಾಣ್ಮೆ ಎಂತಹದ್ದು ಎಂಬುದಕ್ಕೆ ಸಾಕ್ಷಿಯಾಗಿವೆ.
Advertisement
ಈ ಮನೆಗಳು ಸುಮಾರು 1 ರಿಂದ 2 ಎಕರೆ ವಿಶಾಲವಾಗಿದ್ದು, ಎರಡು ಅಂತಸ್ತಿನ ಕಟ್ಟಡಗಳಾಗಿವೆ. ಕಟ್ಟಿಗೆ, ಕಲ್ಲು ಮತ್ತು ಮಣ್ಣನ್ನು ಬಳಸಿ ಈ ಮನೆಗಳನ್ನು ಕಟ್ಟಲಾಗಿದೆ. ಮನೆ ಒಳಗಡೆ ಸುಮಾರು ವಿಶಾಲವಾದ ಅಡುಗೆ ಮನೆ, ಸ್ನಾನ ಗೃಹ, ಪಡಸಾಲೆ, ದೇವರ ಮನೆ ಮತ್ತು ಕೊಟ್ಟಿಗೆ ನಿರ್ಮಾಣ ಮಾಡಿರುವ ರೀತಿ ಎಂತಹವರಿಗೂ ನಿಬ್ಬೆರಗು ಮೂಡಿಸುತ್ತದೆ. ಆದ್ರೆ ಸದ್ಯ ಇವುಗಳಿಗೆ ಸಂರಕ್ಷಣವಾಗಿಡಲು ಇಲ್ಲಿ ವಾಸಿಸುವ ಕುಟುಂಬಗಳು ನಿರಾಶಕ್ತಿ ತೋರುತ್ತಿರುವ ಹಿನ್ನೆಲೆ ಈ ಮನೆಗಳು ಈಗ ವಿನಾಶದ ಅಂಚಿನಲ್ಲಿವೆ.
Advertisement
Advertisement
ಈ ಮನೆಗಳನ್ನು ಸುರಪುರ ಅರಸಕಾಲದಲ್ಲಿ ನಿರ್ಮಾಣ ಮಾಡಲಾಗಿದೆ ಎನ್ನಲಾಗಿದೆ. ಇನ್ನೂ ಆಗಿನ ಕಾಲದಲ್ಲಿ ಪೊಲೀಸ್ ಪಾಟೀಲ್ ಆಳ್ವಿಕೆ ಇದ್ದು, ಅವರಿಗಾಗಿ ಈ ಮನೆಗಳನ್ನು ನಿರ್ಮಿಸಲಾಗಿದೆ. ಮನೆ ಒಳಗಿನ ಬಾವಿ ಮತ್ತು ಹೊರ ಬಾವಿಗಳಿವೆ. ಆ ಬಾವಿಯ ನೀರನ್ನು ಒಳಗೆ ಹಾಕಲು ಆಗಿನ ಕಾಲದಲ್ಲಿ ಬಳಸಿದ ತಂತ್ರಜ್ಞಾನ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ವಿಶ್ರಾಂತಿ ಗೃಹ, ಕಳ್ಳರನ್ನು ಬಂಧಿಸುವ ಕೋಣೆ, ಮತ್ತು ಅಪಾಯ ಎದುರಾದಾಗ ಬಚ್ಚಿಟ್ಟುಕೊಳ್ಳಲು ಆಗಿನ ಕಾಲದಲ್ಲಿ ಜನರ ಬಳಸುತ್ತಿದ್ದ ತಂತ್ರಗಾರಿಕೆ ನಿಜಕ್ಕೂ ಮೈ ಜುಮ್ ಎನ್ನಿಸುತ್ತದೆ. ಇಂದಿಗೂ ಸಹ ಈ ಮನೆಯಲ್ಲಿ ಜನ ವಾಸಿಸುತ್ತಿದ್ದಾರೆ.
Advertisement
ತಮಗೆ ಬೇಕಾದ ರೀತಿಯಲ್ಲಿ ಕೆಲವೊಂದನ್ನು ಮಾರ್ಪಾಡು ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಈ ಮನೆಗಳನ್ನು ಬಿಟ್ಟು ಬೇರೆ ಕಡೆ ಸೆಟ್ಲ್ ಆಗಿದ್ದಾರೆ. ಈ ಮನೆಗಳ ವಿನ್ಯಾಸದ ಬಗ್ಗೆ ಅಧ್ಯಯನ ಮಾಡಲೆಂದು ದೇಶ ವಿದೇಶದಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಇಲ್ಲಿಗೆ ಭೇಟಿ ನೀಡುತ್ತಾರೆ. ಸುಮಾರು ಒಂದು ವಾರ ಇಲ್ಲಿಯೇ ಇದ್ದು ಆಗಿನ ಕಾಲದ ಜನರ ಮನೆ ನಿರ್ಮಾಣದ ತಂತ್ರಜ್ಞಾನವನ್ನು ಕಣ್ಣತುಂಬಿ ಕೊಂಡು, ಅದನ್ನು ಕಲಿಯಲು ಯತ್ನಿಸುತ್ತಾರೆ.