ಎಲ್ರೂ ನೋಡ್ತಾ ಇರ್ಬೇಕಿದ್ರೆ, ಆಕೆಯನ್ನ ಇಗ್ನೋರ್ ಮಾಡುವಂತಿರಬೇಕಂತೆ ಅನು `ಚಿನ್ನು’

Public TV
3 Min Read
ANU 1

ಈ ಹಿಂದೆ ಹೇಳಿದ್ದಂತೆ ನನಗೆ ತುಂಬಾ ಬೆಳ್ಳಗಿರುವ ಹುಡುಗರು ಇಷ್ಟ ಆಗಲ್ಲ. ಯಾಕೆಂದ್ರ ನಾನು ಅಷ್ಟಾಗಿ ಬೆಳ್ಳಗಿಲ್ಲ. ಹುಡುಗ ನೋಡೊದಕ್ಕೆ ಎಲ್ಲರಿಕ್ಕಿಂತಲೂ ಭಿನ್ನವಾಗಿಯೇ ಇರಬೇಕು. ಎಲ್ಲರೂ ನನ್ನನ್ನೇ ನೋಡ್ತಿದ್ದರೆ, ಆತ ನನ್ನನ್ನು ಇಗ್ನೋರ್ ಮಾಡುವಂತಿರಬೇಕು. ಉದಾಹರಣೆಗೆ ಹಿಂದಿಯ ‘ಕಭಿ ಖುಷಿ ಕಭಿ ಗಮ್’ ಸಿನಿಮಾದಲ್ಲಿಯಂತೆ ಕರೀನಾ ಕಪೂರ್ ಹೇಳುವ ಹಾಗೆ ಯಾರವನು ನನ್ನನ್ನೇ ನೋಡ್ತಿಲ್ಲ ಅನ್ನುವಂತಿರಬೇಕು ಅಂತ ನಿರೂಪಕಿ ಅನುಶ್ರೀ ಹೇಳಿದ್ದಾರೆ.

ಹಿಂದೆಲ್ಲಾ ಗಾಳಿ ಬೀಸುತ್ತೆ.. ಒಂದು ರೀತಿ ಎಲ್ಲ ನಿಧಾನಕ್ಕೆ ಚಲಿಸುವಂತೆ ಫೀಲ್ ಆಗುತ್ತೆ.. ನಾನು ಅವನನ್ನ ನೋಡಿದಾಗ ದಿಢೀರ್ ಅಂತಾ ನಾಚಿಕೆ ಬರಬೇಕು.. ಈ ರೀತಿಯಲ್ಲಿ ಯಾರನ್ನು ನೋಡಿದಾಗ ಆಗುತ್ತೆ ಅವನೇ ನನ್ನ `ಚಿನ್ನು’ ಎಂದು ಮನದಾಳದ ಮಾತನ್ನು ಪಬ್ಲಿಕ್ ಟಿವಿ ನಡೆಸಿದ ಸಂದರ್ಶನದ ವೇಳೆ ರಿವೀಲ್ ಮಾಡಿದ್ರು.

vlcsnap 2018 09 14 09h21m49s141

ಇದೂವರೆಗೂ ಯಾರನ್ನು ನೋಡಿದರೂ ಆ ರೀತಿಯ ನಾಚಿಕೆ ಬಂದಿಲ್ಲ. ಏನ್ಮಾಡೋದು ಸಿಂಗಲ್ ಆಗಿದ್ದೇನೆ. ಗೊತ್ತಿಲ್ಲದೇ ಮುಖದಲ್ಲಿ ಒಂದು ರೀತಿಯ ನಾಚಿಕೆ ಬರಬೇಕು. ಹಿಂದೆ ಹೇಳುವ ಹಾಗೆ ಕಾಲಿನ ಹೆಬ್ಬೆರಳು ನೆಲ ಉಜ್ಜುವಂತೆ ಆಗಬೇಕು ಅನ್ನುವ ಫೀಲ್ ಆಗ್ಬೇಕು ಅಂತ ಹೇಳಿ ನಕ್ಕು ಬಿಟ್ಟರು.

ಅಮ್ಮ ಮನೆಯಲ್ಲಿ ಗಂಡು ನೋಡಲಾ ಅಂತಾ ಹೇಳಿದ್ರು. ನನಗೂ ಜ್ಯೂಸ್, ಕಾಫಿ ಕಪ್ ಹಿಡಿದುಕೊಂಡು ಬರುವ ಅನುಭವ ಆಗಲಿ ಅಂತಾ ಹೇಳಿದ್ದೆ. ಒಂದು ಸಾರಿ ಇದನ್ನ ನನ್ನ ಫ್ರೆಂಡ್ ಗೆ ಹೇಳಿದಾಗ, ನಿನ್ನನ್ನು ನೋಡೋದಕ್ಕೆ 20 ಜನರು ಬಂದ್ರೆ ನೀನು ಸರ್ವರ್ ರೀತಿ ಆಗ್ತೀಯಾ ಅಂತಾ ಹೇಳಿದರು. ಹಾಗಾಗಿ ಆ ಪ್ಲಾನ್ ಕ್ಯಾನ್ಸಲ್ ಮಾಡಿದ್ದೀನಿ ಅಂದ್ರು.

ANUSHREE 6

ಎಲ್ಲರಿಗೂ ಜ್ಯೂಸ್, ಉಪ್ಪಿಟ್ಟು ಕೊಡುತ್ತಿರೋದು ಆಗುತ್ತದೆ. ಅಂತಾ ಅಮ್ಮನಿಗೆ ಹೇಳಿ ಆ ಪ್ರೋಗ್ರಾಮ್ ಕ್ಯಾನ್ಸಲ್ ಮಾಡಿದ್ದೀನಿ. ಮಗಳಿಗೆ ಒಂದು ಕೆರಿಯರ್ ಇದೆ ಅಂತಾ ಅಮ್ಮನೂ ಒಪ್ಪಿಕೊಂಡಿದ್ದಾರೆ. ಹುಡುಗಿಯರಿಗೆ ಮದುವೆ ಜೀವನದ ಪ್ರಮುಖ ಘಟ್ಟ ಅನ್ನೋದು ಸ್ವಲ್ಪ ಬದಲಾಗಿದೆ. ಇಂದು ಹಲವರು ತಡವಾಗಿ ಮದುವೆ ಆಗುತ್ತಾರೆ. ಅದನ್ನು ಇಂದು ತುಂಬಾ ಜನ ಒಪ್ಪಿಕೊಂಡಿದ್ದಾರೆ ಅಂತ ಹೇಳಿದ್ರು. ಇದನ್ನೂ ಓದಿ: ನಟ ಶಂಕರ್ ನಾಗ್ ಅವರೇ ನನಗೆ ಸ್ಫೂರ್ತಿ ಅಂದ್ರು ಆ್ಯಂಕರ್ ಅನುಶ್ರೀ!

ಇದೂವರೆಗೂ ನನಗೆ ಒಬ್ಬರೂ ಪ್ರಪೋಸ್ ಮಾಡಿಲ್ಲ. ಒಂದು ಸಲ ನನ್ನ ಫ್ರೆಂಡ್ಸ್ ಜೊತೆ `ಯಾಕೆ ಯಾರು ನನಗೆ ಪ್ರಪೋಸ್ ಮಾಡಲ್ಲ? ನಾನು ನೋಡೊದಕ್ಕೆ ಚೆನ್ನಾಗಿ ಇಲ್ವಾ?’ ಅಂತಾ ಕೇಳಿದ್ದಕ್ಕೆ ಸೋಶಿಯಲ್ ಆಗಿ ಎಲ್ಲರ ಜೊತೆ ಬೆರೆಯಬೇಕು ಅಂತಾ ಹೇಳಿದ್ರು. ಒಂದು ಸಾರಿ ಎಲ್ಲರ ಜೊತೆ ಪಬ್ ಗೆ ಹೋಗಿದ್ದಾಗ ಅಲ್ಲಿ ಫುಲ್ ಕತ್ತಲು. ಇದರಿಂದ ಗಾಬರಿಗೊಂಡ ನಾನು ಬಳಿಕ ಅಲ್ಲಿಗೆ ಹೋಗಲೇ ಇಲ್ಲ. ಹೀಗಾಗಿ ಶೂಟಿಂಗ್ ಮುಗಿದ ಕೂಡಲೇ ಮನೆಗೆ ಬಂದು ಬಿಡುತ್ತೇನೆ ಅಷ್ಟೇ ನನ್ನ ಜೀವನ ಅಂದ್ರು.

Anushree

ಒಮ್ಮೆ ಒಬ್ಬ ಮಹಿಳೆ ತನ್ನ ಮಗನ ಫೋಟೋ, ಜಾತಕ, ಉದ್ಯೋಗ ಮಾಹಿತಿ ಬರೆದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯರಿಗೆ ಪತ್ರ ಬರೆದಿದ್ದರು. ಇದನ್ನು ಅನುಶ್ರೀ ಅವರಿಗೆ ತಲುಪಿಸಬೇಕೆಂದು ಪತ್ರದಲ್ಲಿ ಬರೆದಿದ್ದರು. ಅರ್ಜುನ್ ಸರ್ ಬಂದು, ಮೇಡಂ ಪತ್ರ ನೋಡಿ ಅಂತಾ ಕೊಟ್ಟರು. ಒಂದು ಕ್ಷಣ ತುಂಬಾ ನಗು ಬಂತು. ಎಲ್ಲೋ ದೂರದಲ್ಲಿರುವ ತಾಯಿ ನನ್ನಲ್ಲಿ ಅವರ ಸೊಸೆ ಆಗುವ ಗುಣಲಕ್ಷಣ ನೋಡಿದ್ದಾರೆ ಅಂದ್ರೆ ನನಗೆ ತುಂಬಾ ಹೆಮ್ಮೆ ಆಗುತ್ತದೆ. ಕಾರ್ಯಕ್ರಮಗಳ ಮೂಲಕ ನಾನು ಜನರಿಗೆ ಎಷ್ಟು ಹತ್ತಿರ ಅಗಿದ್ದೀನಿ ಎಂಬುದು ಪತ್ರದ ಮೂಲಕ ತಿಳಿಯಿತು ಅಂತ ಹೇಳಿದ್ರು.  ಇದನ್ನೂ ಓದಿ: ಈ ಬಂಧ ‘ಅನು’ಬಂಧ- ಮಾತಿನ ಮಲ್ಲಿಯ ಮನದಾಳದ ಮಾತು

ANUSHREE 10

ಸ್ಕೂಲ್ ಟೈಮಲ್ಲಿ ತುಂಬಾನೇ ಪ್ರಪೋಸ್ ಬರುತ್ತಿತ್ತು. ಆದ್ರೆ ನಿರೂಪಕಿ ಆದ್ಮೇಲೆ ಒಂದು ಲೆಟರ್ ಸಹ ಬಂದಿಲ್ಲ. ಪರಿಚಯದಲ್ಲಿ ಗಂಡು ನೋಡಲಾ ಅಂತಾ ಅಮ್ಮ ಹೇಳ್ತಾ ಇರ್ತಾರೆ. ಆದ್ರೆ ಆಗಬೇಕಾದ ಸಮಯದಲ್ಲಿ ಎಲ್ಲವೂ ನಡೆಯುತ್ತದೆ ಅಂತಾ ಹೇಳಿದ್ದೀನಿ ಅಂತ ತನ್ನ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=tjMufAL6i9U

Share This Article
Leave a Comment

Leave a Reply

Your email address will not be published. Required fields are marked *