ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ (Anchor Anushree) ಸದಾ ಒಂದಲ್ಲಾ ಒಂದು ವಿಷ್ಯವಾಗಿ ಸುದ್ದಿಯಲ್ಲಿರುತ್ತಾರೆ. ತಮ್ಮ ವಿಭಿನ್ನ ನಿರೂಪಣೆ ಮೂಲಕ ಕರ್ನಾಟಕ ಜನತೆಯ ಮನಗೆದ್ದಿದ್ದಾರೆ. ಇಂದಿಗೂ ನಟಿಗೆ ಮದುವೆಯ ಬಗ್ಗೆ ಪ್ರಶ್ನೆ ಎದುರಾಗುತ್ತಲೇ ಬಂದಿದೆ. ಇದೀಗ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಅನುಶ್ರೀಗೆ ಮದುವೆಗೆ ಪ್ರಪೋಸಲ್ (Wedding Praposal) ಅರಸಿ ಬಂದಿದೆ. ಈ ವೇಳೆ ಅನುಶ್ರೀ, ತಮ್ಮ ಶೈಲಿಯಲ್ಲಿ ಉತ್ತರ ನೀಡಿದ್ದರು.
ಚಂದನವನದಲ್ಲಿ ಸದ್ಯ ಸಖತ್ ಸದ್ದು ಮಾಡ್ತಿರುವ ವಿಚಾರ ಅಂದ್ರೆ `ಚಿಕ್ಕಬಳ್ಳಾಪುರ ಉತ್ಸವ’ (Chikkaballapura Utsava). ಈ ಕಾರ್ಯಕ್ರಮಕ್ಕೆ ಚಿತ್ರರಂಗದ ದಂಡೇ ಬಂದಿದೆ. ಈ ವೇಳೆ ಯುವಕನೊಬ್ಬ ಅನುಶ್ರೀಗೆ ಮದುವೆ ಪ್ರಪೋಸಲ್ ಆಫರ್ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಯುವಕ ಅನುಶ್ರೀಯನ್ನು ಮದುವೆಯಾಗಲು ನಾನು ರೆಡಿ ಎಂದು ಕುರ್ಚಿ ಮೇಲತ್ತಿ ನಿಂತು ಕೈ ಬೀಸಿದ್ದ. ಇದನ್ನು ಕಂಡ ಅನುಶ್ರೀ ಏಯ್ ಕೂತ್ಕೊಳೋ. ತಲೆಯಲ್ಲಿ ಕೂದಲಿಲ್ಲ ನೀನು ನನ್ನನ್ನು ಮದುವೆ ಆಗ್ತೀಯಾ? ಎಂದು ಕಾಲೆಳೆದಿದ್ದಾರೆ. ಯುವಕನ ಪ್ರಪೋಸಲ್ ಅನ್ನ ನಟಿ ನಿರಾಕರಿಸಿದ್ದಾರೆ. ಇದನ್ನೂ ಓದಿ: ಪ್ರೀತಿಯ ಬಗ್ಗೆ ಸೀಕ್ರೆಟ್ ಬಿಚ್ಚಿಟ್ರು ನಟಿ ರಜಿನಿ: ಮದುವೆ ಯಾವಾಗ ಅಂತಿದ್ದಾರೆ ಫ್ಯಾನ್ಸ್

Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k



