ಉಡುಪಿ: ರಾಕೇಶ್ (Rakesh Poojary) ನಮ್ಮೂರಿನ ಹುಡುಗ. ಬಾಯಿ ತುಂಬಾ ಅಕ್ಕಾ ಅಕ್ಕಾ ಅಂತ ಕರೀತಿದ್ದ. ನನ್ನ ತಮ್ಮನ ಹಾಗೆ ನಮ್ಮ ಕಣ್ಣಮುಂದೆ ಚೆನ್ನಾಗಿ ಬೆಳೆದ ಹುಡುಗ ಇನ್ನಿಲ್ಲವೆಂದರೆ ನಂಬಲಾಗುತ್ತಿಲ್ಲ ಎಂದು ನಿರೂಪಕಿ, ನಟಿ ಅನುಶ್ರೀ (Anchor Anushree) ಬೇಸರ ವ್ಯಕ್ತಪಡಿಸಿದರು.
ಉಡುಪಿಯ ಕೆಮ್ಮಣ್ಣು ಗುಡೆಯಲ್ಲಿ ರಾಕೇಶ್ ಪೂಜಾರಿ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ ನಂತರ ಅವರು ಮಾತನಾಡಿದರು. ತಮಾಷೆಗೂ ಯಾರ ಮನಸ್ಸನ್ನು ನೋಯಿಸದ ಹುಡುಗ ರಾಕೇಶ್. ಒಳ್ಳೆಯವರಿಗೆ ಕಾಲ ಇಲ್ಲ. ತಾಯಿ ಮತ್ತು ತಂಗಿಗೆ ನಾವೆಲ್ಲಾ ಶಕ್ತಿಯಾಗಿ ನಿಲ್ಲಬೇಕು. ಅವರ ನಗು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಡಿಂಪಲ್ ಡಿಂಪಲ್ ಎಂದು ಡ್ಯಾನ್ಸ್ ಮಾಡುತ್ತಿದ್ದದ್ದು ಕಣ್ಮುಂದೆ ಬರುತ್ತಿದೆ. ಅರ್ಜುನ್ ಜನ್ಯ ಅವರ ಮಿಮಿಕ್ರಿ ಅಷ್ಟು ಚೆನ್ನಾಗಿ ಮಾಡುತ್ತಿದ್ದ. ಯಾವಾಗಲೂ ಲವಲವಿಕೆಯಿಂದ ಇರುತ್ತಿದ್ದ ವ್ಯಕ್ತಿ ಎಂದು ಸ್ಮರಿಸಿದರು. ಇದನ್ನೂ ಓದಿ: ಉಡುಪಿಯಲ್ಲಿ ನೆರವೇರಿದ ರಾಕೇಶ್ ಪೂಜಾರಿ ಅಂತ್ಯಕ್ರಿಯೆ
ಅರ್ಧ ದಿನದಲ್ಲಿ ಸ್ಕಿಟ್‌ನ ಎಲ್ಲ ಡೈಲಾಗ್‌ಗಳನ್ನು ಕಲಿತು ನಟಿಸುತ್ತಿದ್ದ ಕಲಾವಿದ ಆತ. ಕಾಂತಾರದಲ್ಲಿ ಅವಕಾಶ ಸಿಕ್ಕಿರುವುದು ಒಂದೊಳ್ಳೆ ಅವಕಾಶವಾಗಿತ್ತು. ಯಾವತ್ತೂ ನಮ್ಮದೇ ಕ್ಯಾರಾವ್ಯಾನ್‌ನಲ್ಲಿದ್ದು, ನಮ್ಮ ಜೊತೆ ಊಟ ಮಾಡುತ್ತಿದ್ದ. ಅಣ್ಣತಮ್ಮಂದಿರ ಹಾಗೆ ಜೊತೆಗೆ ಇದ್ದ ನನ್ನ ತಮ್ಮ ಇಲ್ಲ ಅನ್ನೋದು ನೋವು ತಂದಿದೆ ಎಂದರು. ಇದನ್ನೂ ಓದಿ: ರಾಕೇಶ್ ಅಕಾಲಿಕ ಮರಣ ನೋವು ತಂದಿದೆ: ಯೋಗರಾಜ್ ಭಟ್