ದೈವ ದರ್ಶನ ಪಡೆದ ನಿರೂಪಕಿ ಅನುಶ್ರೀ

Public TV
1 Min Read
anushree 1

ಸ್ಯಾಂಡಲ್‌ವುಡ್ (Sandalwood) ನಟಿ ಕಮ್ ನಿರೂಪಕಿ ಅನುಶ್ರೀ (Anushree) ಮತ್ತೆ ಸುದ್ದಿಯಲ್ಲಿದ್ದಾರೆ. ರಿಯಾಲಿಟಿ ಶೋ ನಿರೂಪಣೆ ಶೂಟಿಂಗ್ ಕೊಂಚ ಬ್ರೇಕ್ ನೀಡಿ ದೈವ ಕೋಲದಲ್ಲಿ ಭಾಗಿಯಾಗಿದ್ದಾರೆ. ಈ ಕುರಿತ ಫೋಟೋವನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

anushreeತಮ್ಮದೇ ಭಿನ್ನ ಶೈಲಿಯ ನಿರೂಪಣೆ ಮೂಲಕ ಗಮನ ಸೆಳೆದಿರುವ ಅನುಶ್ರೀ ಕೊಂಚ ಬಿಡುವು ಮಾಡಿಕೊಂಡು ದೈವ ಕೋಲದಲ್ಲಿ ಭಾಗಿಯಾಗಿದ್ದಾರೆ. ಮೂಲತಃ ಕರಾವಳಿ ಭಾಗದವರೇ ಆಗಿರುವ ಅನುಶ್ರೀ ದೈವದ ಆರಾಧನೆ ಮಾಡುತ್ತಾರೆ. ಇದೀಗ `777 ಚಾರ್ಲಿ’ (777 Charlie) ನಿರ್ದೇಶಕ ಕಿರಣ್ (Director Kiran) ಅವರ ಮನೆಯಲ್ಲಿ ದೈವ ಕೋಲ (Daiva Kola) ಮಾಡಲಾಗಿತ್ತು. ಈ ವೇಳೆ ಅನುಶ್ರೀ ಮತ್ತು ನಟಿ ಸಂಗೀತಾ (Sangeetha) ಕೂಡ ಭಾಗಿಯಾಗಿದ್ದಾರೆ.

ನಿರ್ದೇಶಕ ಕಿರಣ್ ಅವರ ಕಾಸರಗೋಡು ಮನೆಯಲ್ಲಿ ದೈಲ ಕೋಲ ನಡೆದಿದೆ. ಈ ವೇಳೆ ಅನುಶ್ರೀ ಕೂಡ ಭಾಗಿಯಾಗಿ ಪೂಜೆ ಸಲ್ಲಿಸಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ದೈವದ ಬಳಿ ಕೇಳಿದ್ದಾರೆ. ಕೊರಗಜ್ಜನಿಗೆ ಕೋಲ ಸೇವೆ ನೀಡಿದ್ದಾರೆ. ಇದನ್ನೂ ಓದಿ: ‘ದಸರಾ’ ಸಿನಿಮಾ ಟೀಸರ್ ಬಿಡುಗಡೆ ಮಾಡಲಿದ್ದಾರೆ ಸೂಪರ್ ಸ್ಟಾರ್ಸ್

anushree 1

ದೈವ ಕೋಲದ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಸುಂದರ ಹಾಗೂ ದೈವಿಕ ಕ್ಷಣಗಳು, ಕಾಸರಗೋಡು ಮಲ್ಲಮೂಲೆ ದೇವಸ್ಥಾನದಲ್ಲಿ ಎಂದು ನಟಿ ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ಸದ್ದು ಮಾಡ್ತಿದೆ. ಈ ಪೋಸ್ಟ್ ನೋಡುತ್ತಲೇ ಕೆಲ ನೆಟ್ಟಿಗರು ಮದುವೆಯ ಸಿಹಿ ಸುದ್ದಿ ಯಾವಾಗ ಎಂದು ಕಾಮೆಂಟ್ ಮಾಡ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *