Connect with us

Bengaluru City

ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ ನಿರೂಪಕಿ ಅನುಶ್ರೀ

Published

on

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅಂತಾನೇ ಗುರುತಿಸಿಕೊಳ್ಳುವ ಅನುಶ್ರೀ ನಿರೂಪಣೆ ವೇಳೆ ಒಂದು ಕ್ಷಣ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಖಾಸಗಿ ವಾಹಿನಿಯ ಡಾನ್ಸಿಂಗ್ ರಿಯಾಲಿಟಿ ಶೋ ಕಾರ್ಯಕ್ರಮದ ನಿರೂಪಣೆ ಮಾಡುವುದು ಎಲ್ಲರಿಗೂ ಗೊತ್ತಿದೆ. ಶನಿವಾರ ಪ್ರಸಾರವಾದ ಸಂಚಿಕೆಯಲ್ಲಿ ತಮ್ಮ ಮುದ್ದು ಸಹೋದರನನ್ನು ನೆನಪಿಸಿಕೊಂಡು ಕಣ್ಣೀರು ಸುರಿಸಿದ್ದಾರೆ.

ಸ್ವರ್ಧಿಗಳಾದ ಸೂರಜ್, ಶ್ರಾವ್ಯಾ ಮತ್ತು ಡ್ಯಾನ್ಸ್ ಮಾಸ್ಟರ್ ರುದ್ರ ಮೂವರು ಜಾಲಿಡೇಸ್ ಸಿನಿಮಾದ ಸ್ನೇಹತ್ವ ಸಾರುವ ಹಾಡಿಗೆ ಮನಮೋಹಕವಾಗಿ ಹೆಜ್ಜೆ ಹಾಕಿದ್ದರು. ಡ್ಯಾನ್ಸ್ ಮಧ್ಯೆ ತೀರ್ಪುಗಾರರ ನೆಚ್ಚಿನ ಸ್ನೇಹಿತರ ಫೋಟೋ ಸಹ ತೋರಿಸಿದರು. ರಕ್ಷಿತಾರ ಸ್ನೇಹಿತೆ ಪ್ರಶಾಂತಿ, ವಿಜಯ್ ರಾಘವೇಂದ್ರ ಗೆಳೆಯ ಕುಮಾರ್, ಅರ್ಜುನ್ ಜನ್ಯಾರ ಗೆಳೆಯ ಪ್ರಕಾಶ್ ಎಲ್ಲರ ಫೋಟೋಗಳನ್ನು ಡಿಸ್ ಪ್ಲೇ ಮಾಡಲಾಯಿತು. ಕೊನೆಗೆ ಅನುಶ್ರೀಯವರ ಫ್ರೆಂಡ್ ಬದಲಾಗಿ ತಮ್ಮ ಅಭಿಜಿತ್ ಫೋಟೋ ತೋರಿಸಲಾಯಿತು.

ತೀರ್ಪುಗಾರರು ಎಲ್ಲರೂ ತಮ್ಮ ಸ್ನೇಹದ ಬಗ್ಗೆ ಹೇಳಿಕೊಂಡರು. ಕೊನೆಗೆ ಅನುಶ್ರೀ ತಮ್ಮನ ಬಗ್ಗೆ ಕೇಳಲಾಯಿತು. ಆ ವೇಳೆ ಭಾವುಕಾರದ ಅನುಶ್ರೀ, ಇವನು ನನ್ನ ಕನಸು, ತುಂಬಾ ವರ್ಷಗಳ ಹಿಂದೆ ಸೂಟ್‍ಕೇಸ್ ಹಿಡಿದುಕೊಂಡು ಬೆಂಗಳೂರಿಗೆ ಬಂದೆ. ನಾನು ಇಲ್ಲಿ ದುಡಿಯುತ್ತಿದ್ದರೆ, ಅಲ್ಲಿ ಅವನು ನನ್ನ ತಾಯಿಯನ್ನು 13 ವರ್ಷಗಳಿಂದ ಚೆನ್ನಾಗಿ ನೋಡಿಕೊಂಡಿದ್ದಾನೆ. ನಾನು ಏನು ಮಾಡಲು ಸಾಧ್ಯವಾಗಿಲ್ಲವೋ, ಅವೆಲ್ಲವನ್ನು ಅವನು ಇಂದು ಸಾಧಿಸಿದ್ದಾನೆ. ಒಳ್ಳೆಯ ಅಂಕಗಳೊಂದಿಗೆ ತೇರ್ಗಡೆಯಾಗಿ ತನ್ನ ಕಾಲ ಮೇಲೆ ನಿಂತುಕೊಂಡಿದ್ದಾನೆ. ದೇವರು ನನಗೆ ನೀಡಿರುವ ಎಲ್ಲ ಆಯಸ್ಸನ್ನು ಆತನಿಗೆ ನೀಡಲಿ ಎಂದು ಕೇಳಿಕೊಂಡು ಒಂದು ಕ್ಷಣ ಭಾವುಕರಾದ್ರು.

ಕಾರ್ಯಕ್ರಮಗಳಲ್ಲಿ ತಮ್ಮ ಪಟಾಕಿ ಮಾತುಗಳಿಂದ ಎಲ್ಲರನ್ನು ನಗಿಸುವ ಅನುಶ್ರೀ ಕಣ್ಣೀರು ಹಾಕಿದ್ದರಿಂದ ಒಂದು ಕ್ಷಣ ತೀರ್ಪುಗಾರರು ಸೇರಿದಂತೆ ವೀಕ್ಷಕರು ಸಹ ಭಾವುಕರಾದರು. ಅದರಂತೆ ನಟಿ ರಕ್ಷಿತಾ ತಮ್ಮ ಸ್ನೇಹದ ಗೆಳೆತಿ ಪ್ರಶಾಂತಿಯವರ ಬಗ್ಗೆ ಹೇಳುವಾಗ ಕಣ್ಣಂಚಲಿ ಕಣ್ಣೀರು ಬಂತು.

1 Comment

1 Comment

    Leave a Reply

    Your email address will not be published. Required fields are marked *