ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ (Ananya Panday) ನಟಿಸಿದ ಚೊಚ್ಚಲ ಚಿತ್ರದಿಂದ ಇದುವರೆಗೂ ಸಕ್ಸಸ್ ಎಂಬುದೇ ಸಿಕ್ಕಿಲ್ಲ. ನೆಪೋ ಕಿಡ್ ಎಂದು ಟ್ರೋಲ್ ಆಗುವುದರ ಜೊತೆ ಬಾಡಿ ಶೇಮಿಂಗ್‌ಗೆ (Body Shaming) ಒಳಗಾಗಿದ್ದು ಇದೆ. ಇದೀಗ ಸಂದರ್ಶನವೊಂದರಲ್ಲಿ ಬಾಡಿ ಶೇಮಿಂಗ್ ಮಾಡಿದ್ದರ ಕೆಟ್ಟ ಕಾಮೆಂಟ್‌ಗಳ ಬಗ್ಗೆ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಬಿಕಿನಿಯಲ್ಲಿ ಬೀಚ್ ಬಳಿ ನಟಿ ಖುಷಿ ಕಪೂರ್ ಚಿಲ್
ಸಂದರ್ಶನವೊಂದರಲ್ಲಿ ಅನನ್ಯಾ ಮಾತನಾಡಿ, ನನಗೆ ಆಗ 18 ಅಥವಾ 19 ವರ್ಷವಿರಬಹುದು. ನಾನು ಹೊರಗೆ ಕ್ಯಾಮೆರಾ ಮುಂದೆ ಗುರುತಿಸಿಕೊಳ್ಳಲು ಆರಂಭಿಸಿದ್ದೆ. ಆಗ ನಾನು ತೆಳ್ಳಗಿರುವ ಬಗ್ಗೆ ಎಲ್ಲರೂ ಟೀಕಿಸುತ್ತಿದ್ದರು. ನಿಮ್ಮದು ಕೋಳಿ ಕಾಲುಗಳು, ಬೆಂಕಿ ಕಡ್ಡಿಯಂತೆ ಕಾಣುತ್ತೀರಿ ಎಂದು ಎಲ್ಲರೂ ಟೀಕಿಸುತ್ತಿದ್ದರು. ನಿಮಗೆ ಎದೆಯ ಭಾಗ, ಹಿಂಭಾಗ ಏನು ಇಲ್ಲ ಎಂದು ಗೇಲಿ ಮಾಡುತ್ತಿದ್ದರು ಎಂದು ಹಳೆಯ ಕಹಿ ಅನುಭವಗಳನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: Cannes Film Festival 2025: ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಕನ್ನಡತಿ ದಿಶಾ ಮದನ್
ಬಾಲಿವುಡ್ ನಟ ಚಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ ಅವರು ಸ್ಟುಡೆಂಟ್ ಆಫ್ ದಿ ಇಯರ್ 2 ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಿತರಾದರು. ನಟಿಸಿದ ಮೊದಲ ಸಿನಿಮಾನೇ ಅಟ್ಟರ್ ಫ್ಲಾಪ್ ಆಗಿತ್ತು. ಪತಿ ಪತ್ನಿ ಔರ್ ವೋ, ಲೈಗರ್, ಗೆಹರಾಯಿಯಾ ಸಿನಿಮಾಗಳು ಕೂಡ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ಹೀಗಾಗಿನೇ ಸ್ಟಾರ್ ಕಿಡ್, ನೆಪೋ ಕಿಡ್ ಎಂದು ಹೆಚ್ಚಾಗಿ ನಟಿ ಟ್ರೋಲ್ ಆಗುತ್ತಲೇ ಇರುತ್ತಾರೆ.
ಇತ್ತೀಚೆಗೆ ಅಕ್ಷಯ್ ಕುಮಾರ್ (Akshay Kumar) ಜೊತೆ ನಟಿಸಿದ ‘ಕೇಸರಿ ಚಾಪ್ಟರ್ 2’ಗೆ (Kesari Chapter 2) ಮೆಚ್ಚುಗೆ ವ್ಯಕ್ತವಾಗಿತ್ತು. ಇವು ಸಿನಿಮಾಗಳಿಗಿಂತ ಕೇಸರಿ ಚಿತ್ರದಲ್ಲಿನ ಅನನ್ಯಾ ಪಾತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇಲ್ಲಿಂದ ಅವರ ಸಿನಿ ಕೆರಿಯರ್‌ಗೆ ಟರ್ನಿಂಗ್ ಪಾಯಿಂಟ್ ಸಿಗುತ್ತಾ ಕಾದುನೋಡಬೇಕಿದೆ.