ನವದೆಹಲಿ: ಡ್ರಗ್ ಪಾರ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಅನನ್ಯಾ ಪಾಂಡೆ ಅವರನ್ನು ಎನ್‍ಸಿಬಿ (NCB) ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು, ಇಂದೂ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದರು.
ಎನ್‍ಸಿಬಿ ಸಮನ್ಸ್ ಹಿನ್ನಲೆಯಲ್ಲಿ ಇಂದು ಅನನ್ಯಾ ಪಾಂಡೆ ಮುಂಬೈನಲ್ಲಿರುವ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಇಂದು ಸುಧೀರ್ಘ ವಿಚಾರಣೆ ನಡೆಯುವ ಸಾಧ್ಯತೆ ಇದ್ದು, ಆರ್ಯನ್ ಖಾನ್ ಜೊತೆಗಿನ ಸಂಬಂಧ ಕುರಿತು ಅಧಿಕಾರಿಗಳು ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಆರ್ಯನ್ ಖಾನ್ ಮತ್ತು ಅನನ್ಯಾ ಪಾಂಡೆ ನಡುವೆ ಮಾದಕ ವಸ್ತುಗಳ ಹಂಚಿಕೆ ಸಂಬಂಧ ವ್ಯಾಟ್ಸಪ್‍ನಲ್ಲಿ ಚಾಟ್ ನಡೆದಿದೆ ಎನ್ನಲಾಗಿದೆ. ಈ ಹಿಂದೆ ಎನ್‍ಸಿಬಿ ಅಧಿಕಾರಿಗಳು ಇದೇ ವ್ಯಾಟ್ಸಪ್ ಚಾಟ್ ಅನ್ನೇ ಪ್ರಮುಖ ಸಾಕ್ಷಿಯನ್ನಾಗಿಸಿಕೊಂಡು ಕೋರ್ಟ್‍ನಲ್ಲಿ ವಾದ ಮಂಡಿಸಿತ್ತು. ಇದನ್ನೂ ಓದಿ: ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್
Advertisement
Advertisement
ಈ ಸಾಕ್ಷ್ಯಗಳ ಮೇಲೆ ವಿಚಾರಣೆ ಮುಂದುವರಿಸಿರುವ ಎನ್‍ಸಿಬಿ ಅಧಿಕಾರಿಗಳು ಅನನ್ಯಾ ಪಾಂಡೆಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಆರ್ಯನ್ ಖಾನ್ ಜೊತೆಗಿನ ವ್ಯಾಟ್ಸಪ್ ಮಾತುಕತೆಯಲ್ಲಿ ಗಾಂಜಾ ಬಗ್ಗೆ ಪ್ರಸ್ತಾಪಿಸಲಾಗಿದ್ದು ಆರ್ಯನ್ ಖಾನ್ ಬಾಲಿವುಡ್ ನ ಪ್ರಮುಖ ಜನರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ
Advertisement
Advertisement
ಈ ಹಿಂದೆ ಕೋರ್ಟ್‍ನಲ್ಲಿವಾದ ಮಂಡಿಸಿದ್ದ ಎನ್‍ಸಿಬಿ ಪರ ವಕೀಲರು, ಆರ್ಯನ್ ಖಾನ್ ಅಂತರಾಷ್ಟ್ರೀಯ ಡ್ರಗ್ ಪೆಡ್ಲರ್ ಜೊತೆಗೆ ಸಂಪರ್ಕ ಹೊಂದಿದ್ದಾರೆ. ಅವರಿಂದ ಮಾಧಕ ವಸ್ತುಗಳನ್ನು ಖರೀದಿಸಿ ಬಾಲಿವುಡ್ ಮಂದಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಸದ್ಯ ಇದೇ ಅಂಶಗಳನ್ನು ಆಧರಿಸಿ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್ – ಶಾರೂಖ್ ನಿವಾಸದ ಮೇಲೆ ಎನ್‍ಸಿಬಿ ದಾಳಿ