ಬೆಂಗಳೂರು: ಅನನ್ಯ ಭಟ್ ಮಿಸ್ಸಿಂಗ್ ಕೇಸ್‌ನ (Ananya Bhat Missing Case) ರಾಜ್ಯ ಸರ್ಕಾರ ಎಸ್‌ಐಟಿಗೆ (SIT) ವರ್ಗಾವಣೆ ಮಾಡಿತ್ತು. ಈ ಸಂಬಂಧ ತನಿಖೆಗಿಳಿದ ಅಧಿಕಾರಿಗಳು, ದೂರಿಗೆ ಸಂಬಂಧಪಟ್ಟ ಅಗತ್ಯ ದಾಖಲೆಗಳೊಂದಿಗೆ ಎಸ್‌ಐಟಿ ಕಚೇರಿಗೆ ಹಾಜರಾಗುವಂತೆ ದೂರುದಾರೆ ಸುಜಾತ ಭಟ್‌ಗೆ ನೋಟಿಸ್ ನೀಡಿದ್ದರು. ಆದರೆ ಮೊದಲನೇ ನೋಟಿಸ್‌ಗೆ ಸುಜಾತ ಭಟ್ (Sujatha Bhat) ಯಾವುದೇ ಉತ್ತರ ನೀಡಿಲ್ಲ. ಹಾಗಾಗಿ ಎಸ್‌ಐಟಿ ಅಧಿಕಾರಿಗಳು, ಎರಡನೇ ನೋಟಿಸ್ ನೀಡಿ ಹಾಜರಾಗುವಂತೆ ಸೂಚಿಸಿದ್ದಾರೆ.
ಈ ಬಾರಿ ಸುಜಾತ ಭಟ್ ನಂಗೆ ಅನಾರೋಗ್ಯ ಇದೆ, ಜೊತೆಗೆ ಜೀವ ಭಯವಿದೆ ನಾನು ಬರೋಕೆ ಆಗಲ್ಲ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲದೇ ಅನನ್ಯ ಭಟ್ ನನ್ನ ಮಗಳು ಅನ್ನೋದಕ್ಕೆ ಇಲ್ಲಿಯವರೆಗೆ ಯಾವುದೇ ದಾಖಲೆ ನೀಡಿಲ್ಲ. ಇದನ್ನೂ ಓದಿ: ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿ ಆಡಲ್ಲ: ಸಚಿವ ಮನ್ಸುಖ್ ಮಾಂಡವಿಯಾ
ಈ ಮಧ್ಯೆ ಖಾಸಗಿ ಚಾನಲ್‌ವೊಂದಕ್ಕೆ ಮಾತಾಡಿ ನನ್ನ ದೂರು ಸುಳ್ಳು, ನಂಗೆ ಅನನ್ಯ ಭಟ್ ಅನ್ನೋ ಮಗಳು ಇಲ್ಲ ಅಂತಾ ಹೇಳಿಕೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಬಿಎನ್‌ಎಸ್ 180 ಅಡಿಯಲ್ಲಿ ಮನೆಗೆ ಬಂದು ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯದ ಹಲವೆಡೆ ಮಳೆ ಅವಾಂತರ – ಬೆಳೆ ನಾಶ, ಹೈರಾಣಾದ ಅನ್ನದಾತ