ಬೆಂಗಳೂರು: ಅನಂತಕುಮಾರ್ ಅಕ್ಕರೆಯ ಅಕ್ಕ ಇನ್ನಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
ತೇಜಸ್ವಿನಿ ತಮ್ಮ ಟ್ವಿಟ್ಟರಿನಲ್ಲಿ ಅನಂತಕುಮಾರ್ ಅವರು ಸುಷ್ಮಾ ಅವರ ಕಾಲಿಗೆ ಬೀಳುವ ಫೋಟೋ ಹಾಕಿ ಅದಕ್ಕೆ, “ಭಾರತದ ಅತ್ಯಂತ ಪ್ರೀತಿಯ ಹಾಗೂ ಎತ್ತರದ ನಾಯಕರಲ್ಲಿ ಒಬ್ಬರಾದ ಸುಷ್ಮಾ ಸ್ವರಾಜ್ ಅವರ ಆಕಾಲಿಕ ನಿಧನಕ್ಕೆ ತೀವ್ರ ದುಃಖವನ್ನುಂಟು ಮಾಡಿದೆ. ನಾನು ಅವರಿಗೆ ಸಂತಾಪವನ್ನು ಸೂಚಿಸುತ್ತೇನೆ. ಅವರ ದೊಡ್ಡ ಪರಂಪರೆ ನಮಗೆ ಸ್ಫೂರ್ತಿ ನೀಡುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
Advertisement
ಅನಂತಕುಮಾರ್ ರ ಅಕ್ಕರೆಯ ಅಕ್ಕ ಇನ್ನಿಲ್ಲ!
Deeply saddened at the untimely demise of Sushma Swaraj ji, one of India's most beloved & tallest leaders.
I offer my heartfelt condolences.
Her great legacy will continue to inspire us. #SushmaSwaraj #Ananthkumar pic.twitter.com/nyNpTQiuuH
— Tejaswini AnanthKumar (@Tej_AnanthKumar) August 6, 2019
Advertisement
ಅಲ್ಲದೆ ಮತ್ತೊಂದು ಟ್ವೀಟ್‍ನಲ್ಲಿ, “ಅನಂತಕುಮಾರ್ ಅವರಿಗೂ ಹಾಗೂ ಸುಷ್ಮಾ ಸ್ವರಾಜ್ ಅವರಿಗೂ ಅಭಾವಿಪ(ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್) ದ ದಿನದಿಂದಲೇ ಪರಿಚಯ. ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸುವಂತೆ ಮನವಿ ಮಾಡಿದ್ದರಲ್ಲಿ ಅನಂತಕುಮಾರ್ ಅವರದು ಬಹು ದೊಡ್ಡ ಪಾತ್ರ. ಅವರಿಗೆ ಕನ್ನಡದಲ್ಲಿ ಭಾಷಣ ಬರೆದು ಕೊಡುತ್ತಿದ್ದರು. ಪ್ರತಿ ವರಮಹಾಲಕ್ಷ್ಮಿಗೆ ನಮ್ಮ ಮನೆಗೆ ಬಂದು ನಂತರ ಬಳ್ಳಾರಿಗೆ ಹೋಗುತ್ತಿದ್ದರು” ಎಂದು ಟ್ವೀಟ್ ಮಾಡುವ ಮೂಲಕ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.
Advertisement
ಅನಂತಕುಮಾರ್ ರಗೂ ಸುಷ್ಮಾ ಸ್ವರಾಜ್ ಗೂ ಅಭಾವಿಪ ದ ದಿನದಿಂದಲೇ ಪರಿಚಯ. ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸೋನಿಯಾಗಾಂಧಿ ವಿರುದ್ಧ ಸ್ಪರ್ಧಿಸಿವಂತೆ ಮಾಡಿದ್ದರಲ್ಲಿ ಅನಂತಕುಮಾರ್‌ದು ಬಹು ದೊಡ್ಡ ಪಾತ್ರ. ಅವರಿಗೆ ಕನ್ನಡದಲ್ಲಿ ಭಾಷಣ ಬರೆದು ಕೊಡುತ್ತಿದ್ದರು, ಪ್ರತಿ ವರಮಹಾಲಕ್ಷ್ಮಿಗೆ ನಮ್ಮ ಮನೆಗೆ ಬಂದು ನಂತರ ಬಳ್ಳಾರಿಗೆ ಹೋಗುತ್ತಿದ್ದರು. pic.twitter.com/S069SQytAl
— Tejaswini AnanthKumar (@Tej_AnanthKumar) August 6, 2019
Advertisement
ಸುಷ್ಮಾ ಸ್ವರಾಜ್ ಅವರ ಆರೋಗ್ಯದಲ್ಲಿ ಮಂಗಳವಾರ ರಾತ್ರಿ ಏರುಪೇರು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ತಕ್ಷಣವೇ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
प्रधान मंत्री जी – आपका हार्दिक अभिनन्दन. मैं अपने जीवन में इस दिन को देखने की प्रतीक्षा कर रही थी. @narendramodi ji – Thank you Prime Minister. Thank you very much. I was waiting to see this day in my lifetime.
— Sushma Swaraj (@SushmaSwaraj) August 6, 2019