-ಆಡಿಟ್ ರಿಪೋರ್ಟ್ ಸಲ್ಲಿಕೆಗೆ ಗಡುವು
ತಿರುವನಂತಪುರ: ಕೇರಳದ ಪ್ರಸಿದ್ಧ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಟ್ರಸ್ಟ್ 25 ವರ್ಷಗಳ ಆಡಿಟ್ ರಿಪೋರ್ಟ್ ಕೋರ್ಟ್‍ಗೆ ಸಲ್ಲಿಕೆಯಿಂದ ವಿನಾಯಿತಿ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ ಸುಪ್ರೀಂಕೋರ್ಟ್‍ನಲ್ಲಿ ಟ್ರಸ್ಟ್‌ಗೆ ಹಿನ್ನಡೆ ಉಂಟಾಗಿದೆ. ಕೋರ್ಟ್ ಆಡಿಟ್ ರಿಪೋರ್ಟ್ ಸಲ್ಲಿಕೆಗೆ ಗಡುವು ನೀಡಿದೆ.
Advertisement
ಕೆಲದಿನಗಳ ಹಿಂದೆ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಟ್ರಸ್ಟ್ 25 ವರ್ಷಗಳ ಆಡಿಟ್ ರಿಪೋರ್ಟ್‍ನ್ನು ಕೋರ್ಟ್‍ಗೆ ಸಲ್ಲಿಸುವಂತೆ ಆದೇಶವಿತ್ತು, ಇದನ್ನು ಇದೀಗ ಕೊಡಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಈ ಆಡಿಟ್ ರಿಪೋರ್ಟ್‍ನಿಂದ ನಮಗೆ ವಿನಾಯಿತಿ ಕೊಡಿ ಎಂದು ದೇವಸ್ಥಾನದ ಟ್ರಸ್ಟ್ ಸುಪ್ರೀಂಕೋಟ್‍ಗೆ ಅರ್ಜಿ ಸಲ್ಲಿಸಿತು. ಈ ಅರ್ಜಿಯನ್ನು ವಿಚಾರಿಸಿದ ಸುಪ್ರೀಂಕೋರ್ಟ್ ಅರ್ಜಿ ವಜಾ ಮಾಡಿ, ವಿನಾಯಿತಿ ನೀಡಲು ಸಾಧ್ಯವಿಲ್ಲ ಎನ್ನುವ ಮೂಲಕ ಟ್ರಸ್ಟ್‌ಗೆ ಹಿನ್ನಡೆ ಉಂಟುಮಾಡಿದೆ. ಇದನ್ನೂ ಓದಿ: ನೆಚ್ಚಿನ ನಟನನ್ನು ಮಾತಾಡಿಸುತ್ತಾ ವೀಡಿಯೋ ಕಾಲ್‍ನಲ್ಲೇ ಗಳಗಳನೇ ಅತ್ತ ವೃದ್ಧೆ!
Advertisement
Advertisement
ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ದೇವಸ್ಥಾನ ಸೇರಿದಂತೆ ಟ್ರಸ್ಟ್‌ನ ವ್ಯವಹಾರಗಳ ಆಡಿಟ್ ರಿಪೋರ್ಟ್ ಸಲ್ಲಿಕೆಗೆ ಸೂಚನೆ ನೀಡಿದ್ದು, ಮೂರು ತಿಂಗಳ ಅವಧಿಯಲ್ಲಿ 25 ವರ್ಷಗಳ ಆಡಿಟ್ ರಿಪೋರ್ಟ್ ಸಲ್ಲಿಸುವಂತೆ ಸೂಚಿಸಿದೆ. ಕೇರಳದಲ್ಲಿ ಕೊರೊನಾದಿಂದಾಗಿ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ ಬಾಗಿಲು ಮುಚ್ಚಿತ್ತು. ಬಳಿಕ ಆಗಸ್ಟ್‌ನಲ್ಲಿ ಭಕ್ತರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇದನ್ನೂ ಓದಿ: ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಕನ್ನಡಿಗ ನ್ಯಾ.ಅರವಿಂದ್ ಕುಮಾರ್ ಹೆಸರು ಶಿಫಾರಸು
Advertisement