ಮಂಗಳೂರು: ಮಂಗಳೂರನ್ನು ಪ್ರೀತಿಸುತ್ತಿದ್ದ ಅನಂತ್ ಕುಮಾರ್ ಅವರು ಇಂದು ನಮ್ಮೊಂದಿಗಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕಂಬನಿ ಮಿಡಿದಿದ್ದಾರೆ.
ಅನಂತ್ ಕುಮಾರ್ ಅವರು ನಮ್ಮಂತಹ ಹತ್ತಾರು ಕಾರ್ಯಕರ್ತರಿಗೆ ಗುರುಸ್ವರೂಪಿಯಾಗಿದ್ದರು. ಸಂಘಟನಾ ಕಾರ್ಯದರ್ಶಿಯಾಗಿದ್ದ ಅವರು ನಿರಂತರವಾಗಿ ಸಂಪರ್ಕದಲ್ಲಿದ್ದರು. ಯಾವುದೇ ಸಂದರ್ಭದಲ್ಲಿ ಅವರು ನಮಗೆ ಧೈರ್ಯ ತುಂಬುತ್ತಿದ್ದರು. ಸಂಘಟನೆ ಹೇಗೆ ಮಾಡುವುದು ಅಂತ ತಿಳಿಸುವಂತಹ ಕಾರ್ಯ ಮಾಡುತ್ತಿದ್ದರು. 2009ರಲ್ಲಿ ಪ್ರಥಮ ಬಾರಿಗೆ ಲೋಕಸಭಾ ಸದಸ್ಯನಾಗಿದ್ದೆ. ಆ ಸಂದರ್ಭದಲ್ಲಿ ಅನಂತ್ ಜೀ ನನ್ನನ್ನು ಕರೆದು ಒಬ್ಬ ಲೋಕಸಭಾ ಸದಸ್ಯ ಹೇಗಿರಬೇಕು, ಏನ್ ಕೆಲಸ ಮಾಡಬೇಕು ಅನ್ನೋದರ ಬಗ್ಗೆ ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿದ್ದರು ಅಂತ ವಿಡಿಯೋ ಮೂಲಕ ಸಚಿವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
Advertisement
Advertisement
ಯಾವುದೇ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳನ್ನು ತೆಗೆದುಕೊಂಡು ಅವರ ಬಳಿ ಹೋದರೆ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಶಕ್ತಿ ಅವರಲ್ಲಿತ್ತು. 2014ರಲ್ಲಿ ಬಿಜೆಪಿ ಸರ್ಕಾರ ದೇಶದಲ್ಲಿ ಬಂದು ಸಚಿವರಾಗಿ ಜವಾಬ್ದಾರಿ ತೆಗೆದುಕೊಂಡ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಸಮಸ್ಯೆಗಳನ್ನು ಹೇಳಿದರೂ, ಅದಕ್ಕೆ ಸಂಬಂಧಿಸಿದ ಸಚಿವರುಗಳಿಗೆ ಹೇಳಿ ಈತ ನಮ್ಮ ಶಿಷ್ಯ ಮಾಡಿಕೊಡಿ ಅಂತ ಹೇಳುತ್ತಿದ್ದರು ಅಂದ್ರು.
Advertisement
ಜಿಲ್ಲೆಗೆ ಅನುದಾನ, ಎಂಸಿಎಫ್‍ನಂತಹ ಕಾರ್ಖಾನೆಗಳು ಮುಚ್ಚುವ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಅವರ ಇಲಾಖೆಯಡಿಯಲ್ಲಿ ಬರುತ್ತೆ ಅನ್ನೋ ಕಾರಣಕ್ಕಾಗಿ ಪೂರಕವಾದಂತಹ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಕಾರ್ಖಾನೆ ಬಂದ್ ಆಗದ ರೀತಿಯಲ್ಲಿ ನೋಡಿಕೊಂಡರು. ಕಾರ್ಖಾನೆಗೆ ವ್ಯವಸ್ಥಿತವಾಗುವಂತಹ ಶಾಶ್ವತ ಪರಿಹಾರವನ್ನು ಕಂಡುಕೊಟ್ಟರು. ಒಟ್ಟಿನಲ್ಲಿ ಜಿಲ್ಲೆಗೆ ಅದ್ಭುತ ಕೊಡುಗೆಯನ್ನು ನೀಡಿದ್ದಾರೆ ಅಂತ ಹೇಳಿದ್ರು.
Advertisement
ಮಂಗಳೂರಿನಲ್ಲಿ ಹೊಸದಾಗಿ ಇರುವ ವಿಮಾನ ನಿಲ್ದಾಣ ಆಗೋದಕ್ಕೆ ಅವರು ಎನ್ ಡಿಎ ಸರ್ಕಾರದಲ್ಲಿ ವಿಮಾನಯಾನ ಸಚಿವರಾಗಿದ್ದ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರವೇ ಕಾರಣವಾಗಿದೆ. ನಗರದಲ್ಲಿ ಎಲೆಕ್ಟ್ರಾನಿಕ್ಸ್ ಗೆ ಸಂಬಂಧಿಸಿದ ಇಲಾಖೆ ಬರಲು ಕಾರಣ ಅನಂತ ಕುಮಾರ್. ಆಗ ಇದ್ದಂತಹ ಪ್ರಮೋದ್ ಮಹಾಜನ್ ಅವರನ್ನು ಹಿಡಿದು ಮಂಗಳೂರಿನಲ್ಲಿ ಅತೀ ಹೆಚ್ಚು ಎಂಜಿನಿಯರಿಂಗ್ ಕಾಲೇಜ್ ಇರುವುದರಿಂದ ಅಲ್ಲಿಗೆ ಎಲೆಕ್ಟ್ರಾನಿಕ್ಸ್ ಇಲಾಖೆ ಬರುವಲ್ಲಿ ಕಾರಣರಾಗಿದ್ದಾರೆ ಅವರು ಅಂತ ಹೇಳಿದ್ರು.
ಅನಂತ ಕುಮಾರ್ ಅವರಿಗೆ ಮಂಗಳೂರಿನ ಮೇಲೆ ಬಹಳಷ್ಟು ಪ್ರೀತಿಯಿತ್ತು. ವಿಶೇಷವಾಗಿ ಕಳೆದ 4-5 ವರ್ಷಗಳಲ್ಲಿ ನಾನು ಲೋಕಸಭಾ ಸದಸ್ಯನಾಗಿ ಅವರ ಜೊತೆ ಹೋದಂತಹ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಮಸ್ಯೆಗಳನ್ನು ತೆಗೆದುಕೊಂಡು ಅವರ ಬಳಿ ಹೋದರೂ ಅವರು ಅದಕ್ಕೆ ಪರಿಹಾರ ಕೊಡುತ್ತಿದ್ದರು. ಅಲ್ಲದೇ ಸಮಸ್ಯೆ ಬಗ್ಗೆ ಕುಳಿತು ಚರ್ಚೆ ಮಾಡುತ್ತಿದ್ದರು ಅಂತ ತಿಳಿಸಿದ್ರು.
ಅಡಿಕೆಗೆ ಬೆಂಬಲ ಬೆಲೆ ಬೇಕು ಅಂತ ಅನಂತ್ ಕುಮಾರ್ ಬಳಿ ಹೋದಾಗ ಅದಕ್ಕೆ ಸಂಬಂಧಿಸಿದ ಎಲ್ಲಾ ಸಚಿವರನ್ನು ಅವರ ಮನೆಗೆ ಕರೆದು ಬೆಂಬಲ ಬೆಲೆ ಮತ್ತು ಆಮದಾಗುವಂತಹ ಅಡಿಕೆಗೆ ತೆರಿಗೆ ಹಾಕುವ ಕೆಲಸವನ್ನು ಅನಂತ್ ಕುಮಾರ್ ಅವರ ಮುಖಾಂತರವೇ ಮಾಡಿಸಿರುವುದಾಗಿ ತಿಳಿಸಿದ್ರು.
ಒಟ್ಟಿನಲ್ಲಿ ಮಂಗಳೂರನ್ನು ಪ್ರೀತಿಸುತ್ತಿದ್ದ ಅನಂತ ಕುಮಾರ್ ಅವರು ಇಮದು ನಮ್ಮೊಂದಿಗಿಲ್ಲ. ಇದು ಕರ್ನಾಟಕಕ್ಕೆ ಮಾತ್ರವಲ್ಲದೇ ದೇಶಕ್ಕೂ ಕೂಡ ನಷ್ಟವಾಗಿದೆ. ವಿಶೇಷವಾಗಿ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ. ರಾಷ್ಟ್ರದಲ್ಲಿ ಪಕ್ಷ ಕಟ್ಟಿದ ಅಡ್ವಾಣಿ ಹಾಗೂ ವಾಜಪೇಯಿ ಜೋಡಿ ಹೇಗೆ ಇತ್ತೋ ಹಾಗೆಯೇ ಈ ರಾಜ್ಯದಲ್ಲಿ ಅನಂತ್ ಕುಮಾರ್ ಹಾಗೂ ಯಡಿಯೂರಪ್ಪ ಜೋಡಿ ಪಕ್ಷ ಕಟ್ಟಿತ್ತು ಅಂದ್ರು.
ಅನಂತ್ ಕುಮಾರ್ ಅವರು ಇಂದು ನಮ್ಮೊಂದಿಗಿಲ್ಲ ಅನ್ನೋದು ನಂಬಲಾರದ ವಿಷಯವಾಗಿದೆ. ನಮ್ಮನ್ನು ಬಿಟ್ಟು ಅಗಲಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಸಂತಾಪ ಸೂಚಿಸಿದ್ರು.
https://www.youtube.com/watch?v=m5F3_SqiA14
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews