ಕಾರವಾರ: ಇಷ್ಟು ದಿನ ರಾಜಕಾರಣದಲ್ಲಿ ಇದ್ದದ್ದೇ ನಮ್ಮ ಪುಣ್ಯ, ಮುಂದಿನ ದಿನಗಳಲ್ಲಿ ರಾಜಕಾರಣದ ಬಗ್ಗೆ ನಾವು ಆಸೆಯನ್ನು ಇಟ್ಟುಕೊಂಡಿಲ್ಲ ಎಂದು ರಾಜಕೀಯ ವೈರಾಗ್ಯದ ಮಾತುಗಳನ್ನು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಆಡಿದ್ದಾರೆ.
Advertisement
ಕುಮಟಾ ತಾಲೂಕಿನ ಕಂದವಳ್ಳಿ ಗ್ರಾಮದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ವಿವಿಧ ರಸ್ತೆ ಕಾಮಗಾರಿಗಳ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಹಾಗೆ ಇರಬೇಕು, ಹೀಗೆ ಆಗಬೇಕು ಎಂಬ ಕನಸು ನನಗಿಲ್ಲ. ಇಷ್ಟು ವರ್ಷ ಪ್ರೀತಿ ವಿಶ್ವಾಸ ತೋರಿಸಿದ್ದೀರಿ, ಅದೇ ದೊಡ್ಡ ಸಂತೋಷ. ನಿಮ್ಮ ಪ್ರೀತಿಗೆ ನಾನು ಇಲ್ಲಿಂದಲೇ ನಿಮ್ಮ ಕಾಲಿಗೆ ನಮಸ್ಕಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳು ಜನಮಾನಸದಲ್ಲಿ ಶಾಶ್ವತವಾಗಿದ್ದಾರೆ: ಕೆ.ಗೋಪಾಲಯ್ಯ
Advertisement
ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗೆ ವಿರೋಧ ಎದುರಾದರೂ ಪರವಾಗಿಲ್ಲ. ಜಿಲ್ಲೆಗೆ ಬಂದರು, ನ್ಯಾಷನಲ್ ಹೈವೇ, ಏರ್ಪೋರ್ಟ್, ರೈಲ್ವೆ ಅಭಿವೃದ್ಧಿ ಕೆಲಸಗಳು ಆಗಬೇಕಿವೆ. ಜಿಲ್ಲೆ ಇನ್ನು ನೂರು ವರ್ಷ ಅಭಿವೃದ್ಧಿ ಕಡೆಗೆ ತಿರುಗಿಯೂ ನೋಡಬಾರದು. ಆ ರೀತಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
Advertisement
Advertisement
ನಾವೇನು ರಾಜಕಾರಣದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇಷ್ಟು ದಿನ ರಾಜರಾಣದಲ್ಲಿ ಇದ್ದದ್ದೇ ಪುಣ್ಯ. ಮುಂದೆ ಈ ಯಾವ ಆಸೆಯೂ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೃತ ಕೋವಿಡ್ ಕುಟುಂಬಗಳಿಗೆ ಸರ್ಕಾರ ಕೊಟ್ಟ ಚೆಕ್ ಬೌನ್ಸ್ – ಬ್ಯಾಂಕುಗಳಲ್ಲಿ ನಗದು ಆಗ್ತಿಲ್ಲ ಚೆಕ್