‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಗ್ಗೆ ದೇಶದಾದ್ಯಂತ ಭಾರೀ ಚರ್ಚೆಯಾಗುತ್ತಿದ್ದು, ಪರ ವಿರೋಧದ ನಡುವೆಯೂ ಈ ಚಿತ್ರವನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಶುರುವಾಗಿದೆ. 32 ವರ್ಷಗಳ ನಂತರ ಸತ್ಯವನ್ನು ಈ ಸಿನಿಮಾ ಹೊರಹಾಕಿದೆ. ಹಾಗಾಗಿ ಈ ಚಿತ್ರವನ್ನು ಒಪ್ಪಿಕೊಳ್ಳಲೇಬೇಕು ಎಂದು ಅನೇಕ ನಟ ನಟಿಯರು ಸಿನಿಮಾದ ಪರವಾಗಿ ನಿಂತಿದ್ದಾರೆ. ಈ ಕುರಿತು ಕನ್ನಡದ ಹಿರಿಯ ನಟ ಅನಂತ್ ನಾಗ್ ಕೂಡ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹತ್ತು ಹಲವು ಸಂಗತಿಗಳನ್ನು ನೆನಪು ಮಾಡಿಕೊಂಡಿದ್ದಾರೆ.
Advertisement
ಸಿನಿಮಾ ನೋಡಿ ವಿಚಲಿತನಾದೆ
ನಿನ್ನೆ ‘ದಿ ಕಾಶ್ಮೀರ್ ಫೈಲ್’ ಸಿನಿಮಾವನ್ನು ಪಬ್ಲಿಕ್ ಟಿವಿ ರಂಗನಾಥ್ ಅವರ ಜೊತೆಗೆ ನೋಡಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸಿನಿಮಾವನ್ನು ನೋಡಿ ವಿಚಲಿತನಾಗಿ ನಾನೂ ಸಹ ಬಂದಿದ್ದೇನೆ. ಆದರೆ ಈ ಹಿನ್ನೆಲೆ ನಾನೊಂದು ವಿಚಾರವನ್ನು ಶೇರ್ ಮಾಡಿಕೊಳ್ಳಲು ಇಷ್ಟಪಡುತ್ತೇನೆ. ಸಿನಿಮಾ ನೋಡಿದ ಸಮಯದಲ್ಲಿ ಏನನ್ನೂ ಹೇಳುವ ಪರಿಸ್ಥಿತಿಯಲ್ಲಿ ನಾನು ಇರಲಿಲ್ಲ. ರಂಗನಾಥ್ ಅವರ ಜೊತೆ ಈ ಕುರಿತು ಮಾತನಾಡಿದ್ದೆ. ಇವತ್ತೆ ಪಬ್ಲಿಕ್ ಟಿವಿ ಜೊತೆ ಈ ಕುರಿತು ಮಾತನಾಡಬಹುದು ಎಂದು ತಿಳಿದುಕೊಂಡಿರಲಿಲ್ಲ. ಅದಕ್ಕೆ ತುಂಬಾ ಧನ್ಯವಾದಗಳು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್
Advertisement
Advertisement
ನಮ್ಮ ಪೂರ್ವಜರು ಅದೆಷ್ಟು ಸಂಕಟ ಪಟ್ಟರೋ
1989-90 ಜನವರಿ 20 ರಂದು ಈ ಘಟನೆ ನಡೆದಿತ್ತು. ಕೇರಳ ಕಾಂಗ್ರೆಸ್ ಈ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದೆ. ಅಲ್ಲದೆ ನನಗೂ ಸಹ ಇದರಲ್ಲಿ ಅನುಭವವಿದೆ. 1575ರಲ್ಲಿ ನಮ್ಮ ಸುಮಾರು 200ಕ್ಕೂ ಹೆಚ್ಚು ಪೂರ್ವಜರು ಕಾಶ್ಮೀರದಿಂದ ಹೊರಗೆ ಬಂದಿದ್ದಾರೆ. 1526ರಲ್ಲಿ ಬಾಬರ್ ಬಂದ ಮೇಲೆ ಶ್ರೀರಾಮಮಂದಿರ ಕೆಡವಿ ಅಲ್ಲಿ ಮಸೀದಿ ಕಟ್ಟಿದ ಮೇಲೆ ಕಾಶ್ಮೀರದಲ್ಲಿ ಮತಾಂತರ ಶುರುವಾಗಿತ್ತು. ಅದಕ್ಕೆ ನನ್ನ 200 ಕುಟುಂಬಗಳು ಅಲ್ಲಿಂದ ಹೇಗೆ ಪ್ರಯಾಣ ಮಾಡಿದ್ದಾರೆ ಎಂಬುದು ದೇವರಿಗೆ ಗೊತ್ತು. ಅಲ್ಲಿಂದ ನದಿ, ಗುಡ್ಡ, ಕಾಡು ಎಲ್ಲವನ್ನೂ ದಾಟಿಕೊಂಡು ಗೋವಾಗೆ ಬಂದಿದ್ದಾರೆ. ಗೋವಾಗೆ ಬಂದ್ರೆ ಅಲ್ಲಿ ಪೋರ್ಚಗೀಸರು ಕ್ರೈಸ್ತ ಧರ್ಮಕ್ಕೆ ಮತಾಂತರ ನಡೆಸುತ್ತಿದ್ದರು. ಆಗ ಅಲ್ಲಿಂದ ಶೃಂಗೇರಿಗೆ ನಮ್ಮ ಕುಟುಂಬ ಬಂದಿದೆ. ಅಲ್ಲಿನ ಗುರುಗಳು ಕೆಳದಿ ಶಿವಪ್ಪನವರ ಮನೆತನದ ಆಡಳಿತ ನಮ್ಮ ಪೂರ್ವಜರಿಗೆ ಆಶ್ರಯ ಕೊಟ್ಟಿತ್ತು. ಇದು ನಮ್ಮ ಇತಿಹಾಸ. ನಮ್ಮ ಮಠಗಳು ಉತ್ತರ ಮತ್ತು ದಕ್ಷಿಣ ಕನ್ನಡದಲ್ಲಿ ಇವೆ.
Advertisement
ನನ್ನಲ್ಲಿ ಬೇಸರ ಇನ್ನೂ ಇದೆ
ನಾನು ಮುಂಬೈನಲ್ಲಿ ನಾಟಕ, ನಟನೆಯಲ್ಲಿ ಇದ್ದಾಗ ಕಾಶ್ಮೀರದ ಅನೇಕ ಮಿತ್ರರು ನನ್ನ ಜೊತೆಯಲ್ಲಿ ಇದ್ದರು. ಅವರಲ್ಲಿ ಅನುಪಮ್ ಖಾಬಕ್.ಕೆ ಕೂಡ ಒಬ್ಬರು. ಜನವರಿ 1990ರಲ್ಲಿ ಅವರು ನನಗೆ ದೂರವಾಣಿ ಕರೆ ಮಾಡಿದರು. ಆಗ ಇನ್ನೂ ಫೋನ್ ಬಂದಿರಲಿಲ್ಲ. ಆಗ ಅವರು, ‘ನನ್ನ ಬಗ್ಗೆ ನಿನಗೆ ಗೊತ್ತಿದೆ. ನಿನ್ನ ಬಗ್ಗೆ ನನಗೆ ಗೊತ್ತಿದೆ. ಆದರೆ ನಾವು ಭೇಟಿಯಾಗಿಲ್ಲ. ಅಂದು ಕಾಶ್ಮೀರದಿಂದ ಹೋದವರು ಅಲ್ಲೇ ನೆಲೆಯಾಗಿದ್ದೀರಿ. ನಮ್ಮನ್ನು ಸಹ ಇಲ್ಲಿಂದ ಹೊರಹಾಕಿದ್ದಾರೆ. ನಮ್ಮ ಹಿರಿಯರು, ಮಹಿಳೆಯರು, ಮಕ್ಕಳು ಎಲ್ಲರೂ ಬೀದಿಗೆ ಬಂದಿದ್ದಾರೆ. ದಯವಿಟ್ಟು ನೀವು ಇರುವ ಕಡೆ ನೆಲೆಸಲು ಅವಕಾಶವಿದೆಯಾ ನೋಡಿ ಎಂದಿದ್ದರು.
ಅಂದು ನಾನು ಎಂಎಲ್‌ಸಿ ಆಗಿದ್ದೆ. ಅದಕ್ಕೆ ನೀವು ಸಿನಿಮಾರಂಗದಲ್ಲಿ ಮಾತ್ರವಲ್ಲ, ರಾಜಕೀಯದಲ್ಲೂ ಇದ್ದೀರಿ ಎಂದು ಮನವಿ ಮಾಡಿದರು. ಅವರ ಜೊತೆ ನನ್ನ ಅನೇಕ ಸ್ನೇಹಿತರು ಕರೆ ಮಾಡಿ ಇದಕ್ಕೆ ಏನಾದರೂ ಮಾಡಬೇಕು ಎಂದು ಕೇಳಿಕೊಂಡರು. ಏನಿದು ಮತ್ತೆ ಈ ರೀತಿ ಆಯಿತಲ್ಲ ಎಂದು ಬೇಸರವಾಯಿತು. ಆಗ ಜನತಾ ಸರ್ಕಾರ 1983 ರಿಂದ 88ರವರೆಗೂ ಇತ್ತು. ನಂತರ ಕಾಂಗ್ರೆಸ್ ಸರ್ಕಾರ ಬಂತು. ಆಗ ಬಂಗಾರಪ್ಪ ಅವರು ಸಿಎಂ ಆಗಿದ್ದರು. ವೈ.ಎನ್.ಕೃಷ್ಣಮೂರ್ತಿ(ಕನ್ನಡಪ್ರಭ ಮತ್ತು ಪ್ರಜಾವಾಣಿ ಸಂಪಾದಕರು) ಅವರನ್ನು ಸಂದಿಸಿ ಸಿಎಂ ಅವರನ್ನು ಭೇಟಿ ಮಾಡಿದೆ. ಕಾಶ್ಮೀರದಿಂದ ಕರೆ ಮಾಡಿದ ನನ್ನ ಸ್ನೇಹಿತರ ಪರಿಸ್ಥಿತಿ ವಿವರಿಸಿದೆ. ನನ್ನ ಮೂಲಕ ನಿಮ್ಮನ್ನು ಸಹಾಯ ಕೇಳಿದ್ದಾರೆ ಎಂದು ವಿವರಿಸಿದೆ. ಆಗ ಬಂಗಾರಪ್ಪ ಅವರು ಬಹಳ ಆತ್ಮೀಯವಾಗಿ ನನ್ನನ್ನು ಸ್ವಾಗತಿಸಿ ಏನು ಮಾಡಬಹುದು ಎಂಬುದರ ಬಗ್ಗೆ ಚರ್ಚೆ ಮಾಡಲಾಯಿತು.
ನೀಲಿ ನಕ್ಷೆ ಮಾಡುತ್ತೇವೆ. ನಿಮ್ಮ ಸಮಾಜದವರನ್ನು ನೀವು ಮಾತನಾಡಿಸಿ ಎಂದು ಕೇಳಿಕೊಂಡರು. ಅವರು ಸಹ ನಮ್ಮ ಕೈಯಲ್ಲಿ ಆದ ಎಲ್ಲ ಕೆಲಸಗಳನ್ನು ಮಾಡಿದ್ದಾರೆ. ಅವರು ಎಲ್ಲವನ್ನು ವಿಚಾರಿಸುತ್ತಿದ್ದರು. ಕೆನರಾ, ವಿಜಯಾ ಬ್ಯಾಂಕ್ ಮೂಲಕ ನಾನು ಮಾತನಾಡಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೆ. ನಂತರ ನನ್ನ ಸ್ನೇಹಿತರು ನನ್ನನ್ನು ಸಂಪರ್ಕ ಮಾಡುವುದೇ ನಿಂತು ಹೋಗಿತ್ತು. ಆಗ ಯಾವುದೇ ಫೋನ್ ಸೌಕರ್ಯಗಳು ಇರಲಿಲ್ಲ. ಅವರನ್ನು ಹೇಗೆ ಸಂಪರ್ಕ ಮಾಡುವುದು ಎಂಬುದೇ ನನಗೆ ತಿಳಿಯಲಿಲ್ಲ. ಈ ಗೊಂದಲದಲ್ಲಿ 6 ತಿಂಗಳೂ ಕಳೆದುಹೋಯ್ತು. ನನ್ನ ಸ್ನೇಹಿತರಿಗೆ ಅಂದು ಏನನ್ನು ಮಾಡಲು ಆಗಲಿಲ್ಲ ಎಂಬ ಬೇಸರ ಈಗಲೂ ನನ್ನಲ್ಲಿ ಇದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!
ನಿನ್ನೆ ಈ ಸಿನಿಮಾ ನೋಡುವಾಗ ನಾನು ತಲೆ ತಗ್ಗಿಸಿಕೊಂಡು ಕುಳಿತುಕೊಂಡಿದ್ದೆ. ಆ ಕೌರ್ಯವನ್ನು, ಭಯಾನಕ ರಕ್ತಪಾತವನ್ನು ನೋಡಿ ನನಗೆ ಸಿನಿಮಾ ನೋಡಲೂ ಹಿಂಸೆಯಾಗುತ್ತಿತ್ತು. ಈ ವಿಷಯ ನಮ್ಮ ಜನರಿಗೆ ತಿಳಿಯಬೇಕಾದರೆ 32 ವರ್ಷ ತೆಗೆದುಕೊಂಡಿದೆ ಎಂದರೆ ಅದು ದೊಡ್ಡ ದುರಂತ. ಆದರೆ ಈ ಮೂಲಕ ಜನರಿಗೆ ಜಾಗೃತಿ ಉಂಟಾಗುತ್ತಿದೆ ಎಂಬುದು ಸಮಾಧಾನದ ಸಂಗತಿ.