ಬೆಂಗಳೂರು: ದೇಶದ ವಿಭಜನೆಯ ವೇಳೆ ಇದ್ದ ಅಂದಿನ ನಾಯಕತ್ವದ ದೌರ್ಬಲ್ಯದಿಂದ ಹಾಗೂ ದೇಶದ ಪ್ರಧಾನಿ ಆಗಬೇಕು ಎಂಬ ಉದ್ದೇಶದಿಂದ ದೇಶ ವಿಭಜನೆಗೆ ಸಹಿ ಹಾಕಿದ್ದಾರೆ ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಹೇಳಿದ್ದಾರೆ.
ನಗರದ ಡಿ.ವಿ.ಜಿ ರಸ್ತೆಯಲ್ಲಿರುವ ಅಬಲಾಶ್ರಮದಲ್ಲಿ ಜಾಗೃತ ಭಾರತಿ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅನಂತ್‍ಕುಮಾರ್ ಹೆಗ್ಡೆ ಭಾಗವಹಿಸಿ ಮಾತನಾಡಿದರು. ಸಭೆಯಲ್ಲಿ ವಿಭಜಿತ ಭಾರತ 1947 ಎಂಬ ವಿಚಾರವಾಗಿ ಉಪನ್ಯಾಸ ನೀಡಲಾಯಿತು. ಈ ವೇಳೆ ಮಾತನಾಡಿದ ಸಚಿವರು ಅಂದಿನ ರಾಜಕೀಯ ನಾಯಕತ್ವದ ಕುರಿತು ಟೀಕೆ ಮಾಡಿದರು. ಯಾರದ್ದೋ ಅವಶ್ಯಕತೆಗೆ, ಯಾರಿಗೋ ನಿದ್ದೆ ಬಂದಿಲ್ಲ ಎಂದು ಅಂದು ದೇಶ ವಿಭಜನೆ ಮಾಡಲಾಯಿತು. ಆದರೆ ದೇಶದ ಬಗ್ಗೆ ಯೋಚನೆ ಮಾಡುವ ಮನಸ್ಸುಗಳಿಗೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ ಎಂದರು.
Advertisement
Advertisement
ದೇಶ ವಿಭಜನೆ ಬಗ್ಗೆ ರಾಜಕೀಯವಾಗಿ ಒಪ್ಪಿದರು, ಯಾರು ಸಾಂಸ್ಕೃತಿಕವಾಗಿ ಒಪ್ಪಲು ಅದನ್ನು ಸಾಧ್ಯವಿಲ್ಲ. ಮುಂದೊಂದು ದಿನ ಒಡೆದು ಹೋದ ಜಾಗ ಮತ್ತೆ ನಮ್ಮ ತೆಕ್ಕೆಗೆ ಸೇರಿಲ್ಲವಾದರೆ ನಾವು ಭಾರತೀಯರೆ ಅಲ್ಲ. ಅದನ್ನು ಪ್ರೀತಿಯಿಂದ ಪಡೆಯುತ್ತಿರೋ ಅಥವಾ ರಾಜಕೀಯವಾಗಿ ಪಡೆಯುತ್ತೆವೊ ಅದು ಗೊತ್ತಿಲ್ಲ ಎಂದರು.
Advertisement
ಇವತ್ತಿನ ಬಹುತೇಕ ರಾಜಕಾರಣಿಗಳು, ಬರಹಗಾರರಿಗೆ ಇತಿಹಾಸ ಗೊತ್ತಿಲ್ಲ. ಅದ್ದರಿಂದಲೇ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಕೆಲವರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಯೋಗ್ಯತೆಯೇ ಇಲ್ಲದ ಜನರಿಂದ ಪ್ರಜಾಸತ್ತಾತ್ಮಕ ಹೋರಾಟಗಾರ ಒಕ್ಕೂಟ ಹುಟ್ಟಿದೆ. ಅಪ್ಪ ಅಮ್ಮನ ಪರಿಚಯ ಇಲ್ಲದವರ ಕುಲ ಒಂದು ದೇಶದಲ್ಲಿ ಬೆಳೆಯುತ್ತಿದೆ. ಅಪ್ಪ ಅಮ್ಮನ ಪರಿಚಯ ಇಲ್ಲದವರು ಜ್ಯಾತ್ಯಾತೀತರು. ಚಟಕ್ಕಾಗಿ ನನಗೆ ರಾಜಕೀಯ ಬೇಕಿಲ್ಲ. ನಾನು ಈ ಕುರಿತು ಮಾತನಾಡಿದರೆ ಮತ ಹಾಕಲ್ಲ ಎಂದು ಕೆಲವರು ಸಲಹೆ ನೀಡಿದರು. ಆದರೆ ಇಂತಹ ಮತಗಳು ನನಗೆ ಬೇಡ ಎಂದು ವಾಗ್ದಾಳಿ ನಡೆಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv