ಮುಕೇಶ್ ಅಂಬಾನಿ (Mukesh Ambani) ಪುತ್ರ ಅನಂತ್ ಅಂಬಾನಿ (Anant Ambani) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಾಳೆ ಇಟಾಲಿಯಲ್ಲಿ ನಡೆಯಲಿರುವ (ಮೇ 28) 2ನೇ ಪ್ರಿ ವೆಡ್ಡಿಂಗ್ (Pre Wedding) ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ಆಗಿದೆ. ಇದೀಗ ಬಾಲಿವುಡ್ ಸ್ಟಾರ್‌ಗಳು ಅಂಬಾನಿ ಕುಟುಂಬದ ಫಂಕ್ಷನ್‌ನಲ್ಲಿ ಭಾಗಿಯಾಗುತ್ತಿದ್ದು, ಆಲಿಯಾ ಭಟ್ (Alia Bhatt) ಸೇರಿದಂತೆ ಅನೇಕರು ಇಟಲಿಗೆ ಹಾರಿದ್ದಾರೆ.
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್, ಮಗಳು ರಾಹಾ ಕಪೂರ್, ಹಾಗೆಯೇ ರಣವೀರ್ ಸಿಂಗ್, ಸಲ್ಮಾನ್ ಖಾನ್, ಮಾಜಿ ಕ್ರಿಕೆಟ್ ಎಂ.ಎಸ್ ಧೋನಿ, ಪತ್ನಿ ಸಾಕ್ಷಿ ಧೋನಿ ಮತ್ತು ಅವರ ಮಗಳು ಈಗಾಗಲೇ ಇಟಲಿಗೆ ತೆರಳಿದ್ದಾರೆ. ಇವರೆಲ್ಲರೂ ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್

ಅಂದಹಾಗೆ, ಇದೇ ವರ್ಷ ಮಾರ್ಚ್ನಲ್ಲಿ ಗುಜರಾತಿನ ಜಾಮ್‌ನಗರದಲ್ಲಿ ಅದ್ಧೂರಿಯಾಗಿ ಅನಂತ್ ಮತ್ತು ರಾಧಿಕಾ (Radhika Merchant) ಮೊದಲ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ನೆರವೇರಿತ್ತು. ಬಾಲಿವುಡ್‌ನ ಹಲವು ಸ್ಟಾರ್‌ಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


