ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿ ಮುಖೇಶ್ ಅಂಬಾನಿ (Mukesh Ambani) ಪುತ್ರ ಅನಂತ್ ಅಂಬಾನಿ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಬಾಲಿವುಡ್‌ನ ಸ್ಟಾರ್ ನಟ, ನಟಿಯರಿಗೆ ಆಮಂತ್ರಣ ಕೊಡೋದ್ರಲ್ಲಿ ಅನಂತ್ ಬ್ಯುಸಿಯಾಗಿದ್ದಾರೆ. ಇದೀಗ ಅಕ್ಷಯ್ ಕುಮಾರ್ (Akshay Kumar) ಮನೆಗೆ ತೆರಳಿ ಅಂಬಾನಿ ಪುತ್ರ ಮದುವೆ ಆಮಂತ್ರಣ ನೀಡಿದ್ದಾರೆ.
ನಟ ಅಕ್ಷಯ್ ಮನೆಗೆ ಅನಂತ್ (Anant Ambani) ಭೇಟಿ ನೀಡಿ ಮದುವೆ ಆಹ್ವಾನ ನೀಡಿದ್ದಾರೆ. ಇದಕ್ಕೂ ಕಾಜೋಲ್ ಮತ್ತು ಅಜಯ್ ದೇವಗನ್ ದಂಪತಿಗೂ ಕೂಡ ಆಮಂತ್ರಣ ನೀಡಲಾಗಿದೆ. ಹೀಗೆ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳಿಗೆ ಮದುವೆ ಆಹ್ವಾನ ನೀಡುತ್ತಿದ್ದಾರೆ. ಇದನ್ನೂ ಓದಿ:ಮದುವೆ ಬಳಿಕ 25 ಕೋಟಿ ಬೆಲೆ ಬಾಳುವ ಮನೆಗೆ ಸೋನಾಕ್ಷಿ ಸಿನ್ಹಾ ಶಿಫ್ಟ್
ಜುಲೈ 12ರಂದು ಮುಂಬೈನ ಜೀಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ನಡೆಯಲಿದೆ. ಅದಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಬಾಲ್ಯದಿಂದ ಸ್ನೇಹಿತರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುನ್ನುಡಿ ಬರೆಯಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಇಟಲಿಯಲ್ಲಿ ಅದ್ಧೂರಿಯಾಗಿ ವಿವಾಹ ಪೂರ್ವ ಕಾರ್ಯಕ್ರಮ ಮಾಡಲಾಯಿತು. ಈ ಸಮಾರಂಭದಲ್ಲಿ ಬಾಲಿವುಡ್ ಕಲಾವಿದರ ದಂಡೇ ಭಾಗಿಯಾಗಿತ್ತು.