ಕೊಪ್ಪಳ: ನನ್ನ ವಿಜಯನಗರ ಜನ ದುಃಖದಲ್ಲಿದ್ದಾರೆ ಎಂದು ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆನಂದ್ ಸಿಂಗ್ ಹೇಳಿದರು.
ಕೊಪ್ಪಳ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕೊಪ್ಪಳದವರು ಸಂತೋಷದಲ್ಲಿ ಇದ್ದರೆ ನನ್ನ ವಿಜಯನಗರದ ಜನ ದುಃಖದಲ್ಲಿದ್ದಾರೆ. ಒಂದು ಸಂತೋಷ ಅಂದರೆ ಪಕ್ಕದಲ್ಲೇ ಇದ್ದೀನಿ, ಸುಮ್ಮನೆ ನಗಿ ಅನ್ನುವುದು. ಶಶಿಕಲಾ ಜೊಲ್ಲೆ ಅವರು ಕೋವಿಡ್ ಪಾಸಿಟಿವ್ ಇರುವ ಕಾರಣ ಕಾರ್ಯಕ್ರಮಕ್ಕೆ ಬಂದಿಲ್ಲ. ವಿಜಯನಗರದಲ್ಲಿ ಕೆಲ ಕಟ್ಟಡ ಉದ್ಘಾಟನೆ ಮಾಡಬೇಕೆಂದಿದ್ದೇನೆ. ನನಗೆ ಸಂತೋಷ ಇದೆ ಎಂದು ಭಾಷಣ ಮಾಡಿದರು. ಇದನ್ನೂ ಓದಿ: ಪ್ರೀತಿ ಇದ್ದಲ್ಲಿಗೆ ಹೋಗುತ್ತೇನೆ: ರಮೇಶ್ ಜಾರಕಿಹೊಳಿ
Advertisement
Advertisement
ಇಡೀ ರಾಜ್ಯದಲ್ಲಿ ಉಸ್ತುವಾರಿ ಬದಲಾವಣೆಯಾಗಿದೆ. ಬಹಳಷ್ಟು ಜನರಲ್ಲಿ ಉಸ್ತುವಾರಿ ಬದಲಾವಣೆ ಪ್ರಶ್ನೆ ಇದ್ದು, ನಮ್ಮಲ್ಲೂ ಈ ಬಗ್ಗೆ ಪ್ರಶ್ನೆ ಇದೆ. ತವರು ಜಿಲ್ಲೆ ಉಸ್ತುವಾರಿಗಳನ್ನು ಬೇರೆ ಬೇರೆ ಜಿಲ್ಲೆಗೆ ಹಾಕಿದ್ದು, ಇದು ನನ್ನ ರಾಜಕೀಯ ಜೀವನದ ಅನುಭವದಲ್ಲೇ ಮೊದಲು. ಈ ಹಿಂದೆ ನಾನು ನನಗೆ ಮಂತ್ರಿ ಬೇಡ ಜಿಲ್ಲೆ ಕೊಡಿ ಅಂತ ಯಡಿಯೂರಪ್ಪ ಬಳಿ ನಾನು ಕೇಳಿದ್ದೆ. ಯಡಿಯೂರಪ್ಪ ಬಹಳ ಬೇಗ ಆವೇಶಕ್ಕೆ ಬಂದು ಬಿಡುತ್ತಾರೆ ಎಂದರು. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳನ್ನ ಬಸ್ಸಿನಲ್ಲಿ ತಾವೇ ಡ್ರೈವ್ ಮಾಡಿ ರೌಂಡ್ ಹಾಕಿಸಿದ ಶಿವಣ್ಣ
Advertisement
Advertisement
ನಾನು ಧೈರ್ಯ ಮಾಡಿ ವಿಜಯನಗರ ಜಿಲ್ಲೆ ಮಾಡಿಕೊಡಿ ಎಂದು ಕೇಳಿದ್ದೆ. ಸಿಟ್ಟಿನಿಂದ ಯಡಿಯೂರಪ್ಪ ಮಾಡುತ್ತೇವೆ ನಿಲ್ಲಿ ಅಂತ ಗದರಿದ್ದರು. ಜಿಲ್ಲೆ ಆಗದೇ ಹೋಗಿದ್ದರೆ ನಾನು ಮತ್ತೆ ರಾಜೀನಾಮೆ ಕೊಡುತ್ತೇನೆ ಅಂತ ಯಡಿಯೂರಪ್ಪನವರಿಗೆ ಹೇಳಿದ್ದೆ ಎಂದು ಭಾಷಣದಲ್ಲಿ ವಿಜಯನಗರ ಜಿಲ್ಲೆ ರಚನೆಯಾದ ನೆನಪು ಮೆಲಕು ಹಾಕಿದರು.