ಬಳ್ಳಾರಿ: ವಿಜಯನಗರ (ಹೊಸಪೇಟೆ) ಕ್ಷೇತ್ರದ ಅನರ್ಹ ಶಾಸಕ ಆನಂದ್ ಸಿಂಗ್ ಇದೀಗ ಏಕಾಂಗಿಯಾಗಿದ್ದಾರೆ. ಆನಂದಸಿಂಗ್ ವಿರುದ್ಧ ಇದೀಗ ಬಿಜೆಪಿ ಶಾಸಕರೇ ತಿರುಗಿಬಿದ್ದಿದ್ದಾರೆ.
ಅನರ್ಹ ಶಾಸಕರು ರಾಜೀನಾಮೆ ನೀಡಿದಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹರಾಗಿರುವ ಆನಂದ್ ಸಿಂಗ್ ಇದೀಗ ವಿರುದ್ದ ಬಿಜೆಪಿ ಶಾಸಕರು ತಿರುಗಿಬಿದ್ದಿದ್ದಾರೆ. ಆನಂದಸಿಂಗ್ ವಿಜಯನಗರ ಕ್ಷೇತ್ರವನ್ನ ಜಿಲ್ಲಾ ಕೇಂದ್ರವಾಗಿ ಮಾಡಲು ಹೊರಟಿರುವುದಕ್ಕೆ ಬಳ್ಳಾರಿ ಜಿಲ್ಲೆಯ ಬಿಜೆಪಿ ಶಾಸಕರಿಂದಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ವಿಜಯನಗರ ಜಿಲ್ಲೆ ಮಾಡಲೇಬಾರದು. ಅಖಂಡ ಬಳ್ಳಾರಿಯನ್ನ ಒಡೆಯಲೇಬಾರದು ಅಂತಾ ಬಿಜೆಪಿ ಶಾಸಕರು ಸರ್ಕಾರವೇ ಸಿಡಿದೇಳುವ ಮೂಲಕ ಆನಂದ್ ಸಿಂಗ್ ಆಸೆಗೆ ತಣ್ಣೀರರೆಚಲು ಮುಂದಾಗಿದ್ದಾರೆ. ಅಲ್ಲದೇ ಜಿಲ್ಲೆ ಮಾಡಲು ರಾಜೀನಾಮೆ ನೀಡೋದಾದ್ರೆ ಜಿಲ್ಲೆ ವಿಭಜನೆ ಮಾಡೋದು ಬೇಡವೆಂದು ಬಿಜೆಪಿ ಶಾಸಕರು ರಾಜೀನಾಮೆ ನೀಡಲು ಸಿದ್ದವೆನ್ನುತ್ತಿದ್ದಾರೆ.
Advertisement
Advertisement
ಸಿಎಂಗೆ ಬಿಸಿತುಪ್ಪವಾದ ಆನಂದ್ ಸಿಂಗ್:
ಆನಂದ್ ಸಿಂಗ್‍ಗೆ ವಿಜಯನಗರವನ್ನ ಜಿಲ್ಲೆಯನ್ನಾಗಿ ಮಾಡಲೇಬೇಕೆಂಬ ಕಾರಣಕ್ಕಾಗಿಯೇ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಹರಪನಹಳ್ಳಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕಂಪ್ಲಿ, ಕೊಟ್ಟೂರು, ಕೂಡ್ಲಗಿ ಕ್ಷೇತ್ರಗಳನ್ನ ಒಳಗೊಂಡಂತೆ ವಿಜಯನಗರವನ್ನ ಜಿಲ್ಲೆಯನ್ನಾಗಿ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಆನಂದ್ ಸಿಂಗ್ ಬೇಡಿಕೆಗೆ ಸಿಎಂ ಬಿಎಸ್‍ವೈ ಮನ್ನಣೆ ನೀಡಿ ಜಿಲ್ಲೆಯನ್ನಾಗಿ ಮಾಡುವ ಪ್ರಸ್ತಾಪಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಇದೀಗ ಸ್ವ:ತ ಬಿಜೆಪಿ ಶಾಸಕರೇ ಸಿಡಿದೆದ್ದಿದ್ದಾರೆ. ಅಖಂಡ ಬಳ್ಳಾರಿ ಜಿಲ್ಲೆಯನ್ನ ಯಾವ ಪುರಷಾರ್ಥಕ್ಕೆ ವಿಭಜನೆ ಮಾಡಬೇಕು. ಜಿಲ್ಲೆಯಲ್ಲಿ 4 ಬಿಜೆಪಿ ಶಾಸಕರಿದ್ದರೂ ಅವರ ಅಭಿಪ್ರಾಯ ತಗೆದುಕೊಳ್ಳದೇ ಹೊಸ ಜಿಲ್ಲೆ ಮಾಡಲು ಮುಂದಾಗಿರೋದ್ಯಾಕೆ ಅಂತಾ ಬಿಜೆಪಿ ಶಾಸಕರು ಬಹಿರಂಗವಾಗಿಯೇ ಸರ್ಕಾರದ ವಿರುದ್ಧ ಅಸಮಧಾನ ಹೊರಹಾಕುತ್ತಿದ್ದಾರೆ.
Advertisement
Advertisement
ಈಗಾಗಲೇ ಬಿಜೆಪಿ ಶಾಸಕರು ಸೇರಿದಂತೆ ಹೂವಿನಹಡಗಲಿ ಹಾಗೂ ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕರು ಸಹ ಜಿಲ್ಲೆ ಮಾಡೋದಾದ್ರೆ ನಮ್ಮ ಕ್ಷೇತ್ರಗಳನ್ನ ಜಿಲ್ಲೆಯನ್ನಾಗಿ ಮಾಡಿ ಅಂತಾ ಆನಂದಸಿಂಗ್ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಮಧ್ಯೆ ಇದೀಗ ಸ್ವ:ತ ಬಿಜೆಪಿ ಶಾಸಕರೇ ಅನರ್ಹ ಶಾಸಕನ ಬೇಡಿಕೆಗೆ ಅಡ್ಡಗಾಲು ಹಾಕಿದ್ದಾರೆ.
ವಿವಿಧ ಸಂಘ ಸಂಸ್ಥೆಗಳು ಅಖಂಡ ಜಿಲ್ಲೆಯನ್ನ ವಿಭಜನೆ ಮಾಡೋದು ಬೇಡವೆಂದು ಅಕ್ಟೋಬರ್ 1ಕ್ಕೆ ಬಳ್ಳಾರಿ ಬಂದ್ ಕರೆ ನೀಡಿದ್ದಾರೆ. ಹೀಗಾಗಿ ಅನರ್ಹ ಶಾಸಕ ಆನಂದ್ ಸಿಂಗ್ ಇದೀಗ ಅಕ್ಷರಶ ಏಕಾಂಗಿಯಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಂತಾಗಿದೆ. ಅಲ್ಲದೇ ವಿಜಯನಗರ ಜಿಲ್ಲೆಯನ್ನ ಘೋಷಣೆ ಮಾಡಿದಿದ್ದರೆ ಸಿಂಗ್ ಮುಂದೆ ಯಾವ ನಿರ್ಧಾರ ಕೈಗೊಳ್ಳತ್ತಾರೆ ಅನ್ನೋದು ಸಹ ಕುತೊಹಲ ಮೂಡಿಸಿದೆ.