ಬೆಂಗಳೂರು: ಬಳ್ಳಾರಿಯನ್ನು ವಿಭಜಿಸಿ ವಿಜಯನಗರ ಹೊಸ ಜಿಲ್ಲೆಯನ್ನಾಗಿಸುವ ಸಂಬಂಧ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ ಅಪೂರ್ಣವಾಗಿದೆ. ಸಭೆಯಿಂದ ಹೊರ ಹೋಗುವಾಗ ವಿಜಯನಗರದ ಶಾಸಕ ಆನಂದ್ ಸಿಂಗ್ ಸಿಎಂಗೆ ಎಚ್ಚರಿಕೆ ಸಂದೇಶ ನೀಡಿ ತೆರಳಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ರಾಜೀನಾಮೆಗೂ ಮುನ್ನ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಿಕೊಡ್ತೀನಿ ಎಂದು ಮಾತು ಕೊಟ್ಟಿದ್ದೀರಿ. ಈಗ ಅಧಿಕಾರಕ್ಕೆ ಬಂದಿದ್ದು, ನನಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಿ. ಒಂದು ವೇಳೆ ಮಾತು ತಪ್ಪಿದ್ರೆ, ನನ್ನೊಂದಿಗೆ ಇನ್ನು 16 ಜನ ಇದ್ದಾರೆ. ಅದು ನಿಮಗೂ ಗೊತ್ತಿದೆ. ಉಪ ಚುನಾವಣೆ ಬಳಿಕವಾದರೂ ವಿಜಯನಗರವನ್ನು ಪ್ರತ್ಯೇಕವಾಗಿ ಮಾಡಿಕೊಡಿ. ಇಲ್ಲವಾದ್ರೆ 16 ಜನರ ಪವರ್ ತೋರಿಸಬೇಕಾಗುತ್ತದೆ ಎಂಬ ಸಂದೇಶವನ್ನು ರವಾನಿಸಿ ನೀಡಿ ತೆರಳಿದ್ದಾರೆ ಎನ್ನಲಾಗಿದೆ.
Advertisement
ಮುಖ್ಯಮಂತ್ರಿ @BSYBJP ಅವರು ಬಳ್ಳಾರಿ ಜಿಲ್ಲೆಯ ಶಾಸಕರು ಮತ್ತು ಸಂಸದರನ್ನು ಭೇಟಿಯಾಗಿ ನೂತನವಾಗಿ ವಿಜಯನಗರ ಜಿಲ್ಲೆಯ ಘೋಷಣೆ ಕುರಿತು ಚರ್ಚಿಸಿದರು. ಉಪಮುಖ್ಯಮಂತ್ರಿ @LaxmanSavadi, ಆರೋಗ್ಯ ಸಚಿವ @sriramulubjp, ಕಂದಾಯ ಸಚಿವ @RAshokaBJP ಉಪಸ್ಥಿತರಿದ್ದರು. pic.twitter.com/e55MzBrPEP
— CM of Karnataka (@CMofKarnataka) October 2, 2019
Advertisement
ಕಂಪ್ಲಿ ಗಣೇಶ್, ಮಾಜಿ ಸಚಿವ ತುಕಾರಾಂ ಬಿಟ್ಟು ಬಳ್ಳಾರಿಯ ಬಹುತೇಕ ಎಲ್ಲಾ ಜನಪ್ರತಿನಿಧಿಗಳು ಸಭೆಗೆ ಹಾಜರಾಗಿದ್ದರು. ಆನಂದ್ ಸಿಂಗ್ ಪ್ರಸ್ತಾವಕ್ಕೆ ಬಿಜೆಪಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀರಾಮುಲು, ಸೋಮಶೇಖರ್ ರೆಡ್ಡಿ, ಕರುಣಾಕರ ರೆಡ್ಡಿ ಪ್ರಬಲ ವಿರೋಧ ವ್ಯಕ್ತಪಡಿಸಿದ್ದು, ವಿಭಜನೆ ಮಾಡಿದ್ರೆ ರಾಜೀನಾಮೆ ಕೊಡೋದಾಗಿ ಎಚ್ಚರಿಸಿದ್ದಾರೆ. ಇತ್ತ ನೀವು ಒಬ್ಬರೇ ಬಳ್ಳಾರಿಯನ್ನ ವಿಭಜನೆ ಮಾಡ್ತೀರಾ ಅಂತ ಆನಂದ್ ಸಿಂಗ್ ಮೇಲೆ ರೆಡ್ಡಿ ಬ್ರದರ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಂದಾಯ ಸಚಿವ ಅಶೋಕ್ ಮಧ್ಯಪ್ರವೇಶಿಸಿ ಸಮಾಧಾನ ಮಾಡಿದ್ದಾರೆ ತಿಳಿದು ಬಂದಿದೆ.
Advertisement
ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ ಕುರಿತಂತೆ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಭೆ ನಡೆಸಲಾಯಿತು. ವಿಧಾನಸಭೆ ಉಪ ಚುನಾವಣೆ ಬಳಿಕ ಮತ್ತೊಂದು ಸುತ್ತಿನ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ತೀರ್ಮಾನಿಸಲಾಯಿತು. 1/2 pic.twitter.com/cqQ1jAcOpi
— B Sriramulu (@sriramulubjp) October 2, 2019
Advertisement
ಬಳ್ಳಾರಿ ಜಿಲ್ಲೆ ಒಂದೇ ಜಿಲ್ಲೆಯಾಗಿ ಇರಬೇಕು. ಯಾವುದೇ ಕಾರಣಕ್ಕೂ ಇಬ್ಭಾಗ ಮಾಡೋದು ಸರಿಯಲ್ಲ. ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡುವ ಪ್ರಸ್ತಾಪ ಕೈ ಬಿಡಿ ಅಂತ ಸಿಎಂಗೆ ರೆಡ್ಡಿ ಬ್ರದರ್ಸ್ ಜೊತೆಗೆ ಕಾಂಗ್ರೆಸ್‍ನ ಪರಮೇಶ್ವರ ನಾಯ್ಕ್ ಸಹ ಒತ್ತಡ ಹಾಕಿದ್ದಾರೆ. ಬಳ್ಳಾರಿ ಬದಲು ವಿಜಯನಗರ ಅಂತಲೇ ಮರುನಾಮಕರಣ ಮಾಡಿ ಬಳ್ಳಾರಿ ಭಾಗದ ಶಾಸಕರು ಹೇಳಿದಾಗ ಆನಂದ್ ಸಿಂಗ್ ಒಪ್ಪಿಲ್ಲ. ಈ ಮಧ್ಯೆ, ಹಗರಿಬೊಮ್ಮನಳ್ಳಿಯನ್ನೂ ಜಿಲ್ಲೆ ಮಾಡಿಬಿಡಿ ಅಂತ ಭೀಮಾನಾಯ್ಕ್ ಪ್ರಸ್ತಾಪ ಇಟ್ಟಿದ್ದಾರಂತೆ. ಆದರೆ ಎಲ್ಲವನ್ನೂ ಪರಿಗಣಿಸಿದ ಸಿಎಂ, ಅರ್ಜೆಂಟ್‍ನಲ್ಲಿ ತೀರ್ಮಾನ ಬೇಡ. ಬೈ ಎಲೆಕ್ಷನ್ ಬಳಿಕ ಮತ್ತೊಮ್ಮೆ ಸಭೆ ಮಾಡೋಣ ಅಂತ ಸದ್ಯಕ್ಕೆ ಸಾಗಾಕಿದ್ದಾರೆ ಎನ್ನಲಾಗಿದೆ.