ಬಳ್ಳಾರಿ (ವಿಜಯನಗರ): ಬಿಜೆಪಿ, ಕಾಂಗ್ರೆಸ್, ಹೆಣ್ಣು-ಗಂಡೆಂಬ ಭೇದ ಕೊರೊನಾಗೆ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ವ್ಯಂಗ್ಯವಾಡಿದರು.
Advertisement
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಏನಾದರೂ ಹೇಳಿ ಕೇಳಿ ಬರುತ್ತಾ? ಕಾಂಗ್ರೆಸ್ ಪಾದಯಾತ್ರೆ ಇದೆ, ಆ ಮೇಲೆ ಬರುತ್ತೇನೆ ಅಂತ ಏನಾದರೂ ಹೇಳಿ ಬರುತ್ತಾ. ಎಲುಬಿಲ್ಲದ ನಾಲಿಗೆ ಏನೇನೋ ಮಾತನಾಡುತ್ತದೆ. ಕಾಂಗ್ರೆಸ್ ನಾಯಕರು ಪಾದಯಾತ್ರೆ ತಡೆಯಲು ಬಿಜೆಪಿ ಸರ್ಕಾರ ವೀಕೆಂಡ್ ಕಫ್ರ್ಯೂ ಹೇರಿದೆ ಅಂತ ಆರೋಪ ಮಾಡುತ್ತಿದ್ದಾರೆ. ಆದರೆ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಈಗಾಗಲೇ ಲಾಕ್ಡೌನ್ ಆಗಿದೆ ಎಂದರು. ಇದನ್ನೂ ಓದಿ: ಡಿಕೆ ದಾಟಲಿಲ್ಲ, ಮೇಕೆಯಾದರೂ ದಾಟಲಿ: ಬಿಜೆಪಿ ವ್ಯಂಗ್ಯ
Advertisement
Advertisement
ಕೊರೊನಾ ಪ್ರಕರಣಗಳನ್ನು ನೋಡಿಕೊಂಡು ಸರ್ಕಾರ ಆದೇಶ ಮಾಡಿದೆ. ವಿನಾ: ಕಾರಣ ನಮ್ಮ ಮೇಲೆ ಆರೋಪ ಮಾಡೋದು ಸರಿಯಲ್ಲ. ಸುತ್ತಮುತ್ತಲೀನ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೇಗಿವೆ ಅಂತ ನೋಡಿ. ಕೈ ಪಕ್ಷದವರು ಮೇಕೆದಾಟು ಪಾದಯಾತ್ರೆಗೆ ಮೊದಲೇ ನಾವು ದಿನಾಂಕ ನಿಗದಿ ಮಾಡಿದ್ದು, ಆ ನಂತರ ಬಿಜೆಪಿ ಪಕ್ಷ ವೀಕೆಂಡ್ ಕಫ್ರ್ಯೂ ಹಾಕಿದೆ ಅಂತ ಆರೋಪ ಮಾಡುತ್ತಾರೆ. ನಾವು ನಿಯಮ ಪಾಲನೆ ಮಾಡುತ್ತಿದ್ದೇವೆ ಅನ್ನುತ್ತಿದ್ದಾರೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಆಯಾ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸರ್ಕಾರ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ: ಸಿದ್ದರಾಮಯ್ಯ ಕಿಡಿ
Advertisement
ಸರ್ಕಾರದ ಆದೇಶ ಉಲ್ಲಂಘನೆ ಮಾಡಿದರೆ ಕ್ರಮ ಗ್ಯಾರಂಟಿ ಕೈ ಗೊಳ್ಳುತ್ತೇವೆ. ಕಾಂಗ್ರೆಸ್ನಲ್ಲಿ (ಸಿಎಲ್ಪಿ) ನಾಯಕರಿದ್ದು, ಹಿರಿಯರೂ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.