ತುಮಕೂರು: ವಾಹನ ಖರೀದಿಗೆ ಮಹೀಂದ್ರಾ ಶೋ ರೂಂಗೆ ಬಂದು ಅವಮಾನಕ್ಕೊಳಗಾದ ರೈತನ ಮನೆಗೆ ಇದೀಗ ಮಹೀಂದ್ರ ಗೂಡ್ಸ್ ವಾಹನ ಬಂದಿದೆ. ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹಿಂದ್ರಾ ಅವರು ಟ್ವೀಟ್ ಮಾಡಿ ರೈತನಿಗೆ ಶುಭ ಕೋರಿದ್ದಾರೆ.
ರೈತ ಕೆಂಪೇಗೌಡಗೆ ಕಂಪನಿ ವಾಹನ ಡೆಲಿವರಿ ಮಾಡಿದೆ. ಈ ಕುರಿತು ಸ್ವತಃ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ರೈತ ಕೆಂಪೇಗೌಡರು ಮಹಿಂದ್ರಾ ಗೂಡ್ಸ್ ವಾಹನ ಖರೀದಿ ಮಾಡಿದ್ದಾರೆ. ಇಂದು ಮಹೀಂದ್ರಾ ಆಟೋಮೋಟಿವ್, ಕೆಂಪೇಗೌಡರಿಗೆ ವಾಹನ ಡೆಲಿವರಿ ನೀಡಿದೆ. ಈ ಬಗ್ಗೆ ರೈತ ಕೆಂಪೇಗೌಡರ ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 165 ಕೋಟಿ ಡೋಸ್ ವ್ಯಾಕ್ಸಿನ್ ನೀಡಿದ ಭಾರತ
Advertisement
ಟ್ವೀಟ್‍ನಲ್ಲಿ ಏನಿದೆ?: ಜನವರಿ 21ರಂದು ನಮ್ಮ ಡೀಲರ್ ಬಳಿ ಕೆಂಪೇಗೌಡ ಮತ್ತು ಆತನ ಸ್ನೇಹಿತರು ಬಂದಾಗ ನಡೆದ ಘಟನೆಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ನಾವು ಭರವಸೆ ನೀಡಿದಂತೆ ಘಟನೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಮಹೀಂದ್ರಾ ಆಯ್ಕೆ ಮಾಡಿದ್ದಕ್ಕಾಗಿ ನಾವು ಕೆಂಪೇಗೌಡರಿಗೆ ಧನ್ಯವಾದ ಅರ್ಪಿಸುತ್ತೇವೆ. ನಾವು ಅವರನ್ನು ಮಹೀಂದ್ರಾ ಕುಟುಂಬಕ್ಕೆ ಸ್ವಾಗತಿಸುತ್ತೇವೆ ಎಂದು ಟ್ವೀಟ್ ಮಾಡಲಾಗಿದೆ.
Advertisement
And let me add my welcome to Mr. Kempegowda…???????? https://t.co/BuKnTNov42
— anand mahindra (@anandmahindra) January 28, 2022
Advertisement
ನಡೆದಿದ್ದೇನು?: ಹೆಬ್ಬೂರು ಹೋಬಳಿಯ ರಾಮನಪಾಳ್ಯ ನಿವಾಸಿ ಯುವರೈತ ಕೆಂಪೇಗೌಡ, ತುಮಕೂರಿನ ರಾಮನಪಾಳ್ಯದಲ್ಲಿ ಮಹೀಂದ್ರಾ ಶೋ ರೂಂಗೆ ವಾಹನ ಖರೀದಿಗೆ ಹೋಗಿದ್ದರು. ಯುವಕನ ವೇಷಭೂಷಣ ನೋಡಿ ಶೋರೂಂನಲ್ಲಿ ಅವಮಾನ ಮಾಡಿದ್ದರು. ಬೊಲೆರೋ ಗೂಡ್ಸ್ ವಾಹನ ಖರೀದಿಸಲು ಶೋರೂಂಗೆ ಬಂದಿದ್ದ ರೈತನಿಗೆ ಅವಮಾನ ಮಾಡಲಾಗಿತ್ತು.
Advertisement
Here is our official statement with reference to an incident that happened at one of our dealers’ showrooms in Tumukur, Karnataka. pic.twitter.com/VMwSEoP8Ov
— Mahindra Automotive (@Mahindra_Auto) January 25, 2022
ಹತ್ತು ರೂಪಾಯಿ ದುಡ್ಡು ಕೊಡುವ ಯೋಗ್ಯತೆ ಇಲ್ಲ ಎಂದು ಸೇಲ್ಸ್ ಏಜೆಂಟ್, ಕೆಂಪೇಗೌಡರನ್ನು ಅವಮಾನಿಸಿದ್ದರು. ಅವಮಾನಿಸಿದ್ದನ್ನೇ ಸವಾಲಾಗಿ ಸ್ವೀಕರಿಸಿದ ಕೆಂಪೇಗೌಡ ಒಂದು ಗಂಟೆಯಲ್ಲಿ ಹತ್ತು ಲಕ್ಷ ರೂಪಾಯಿ ದುಡ್ಡು ತಂದು ವಾಹನ ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ ಶೋರೂಂ ಸೇಲ್ಸ್ ಏಜೆಂಟ್ ಮಾತ್ರ ವಾಹನ ನೀಡದೇ, ಎರಡು ಮೂರು ದಿನದಲ್ಲಿ ವಾಹನ ನೀಡುತ್ತೇವೆ ಎಂದು ಹೇಳಿದ್ದರು. ಇದೀಗ ಆನಂದ್ ಮಹೀಂದ್ರಾ ಅವರು ಗೋಡ್ಸ್ ಗಾಡಿಯನ್ನು ರೈತನ ಮನೆಗೆ ತಲುಪಿಸಿದ್ದಾರೆ.