ನವದೆಹಲಿ: ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮದ ಒಂದೊಳ್ಳೆ ಬಳಕೆದಾರರಾಗಿದ್ದು, ಅವರು ಮಾಡುವ ಟ್ವೀಟ್‌ಗಳು ಯಾವಾಗಲೂ ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚೆಗೆ ಆನಂದ್ ಮಹೀಂದ್ರಾ ಅವರು ಒಂದು ವೀಡಿಯೋವನ್ನು ಹಂಚಿಕೊಂಡಿದ್ದು, ನಮ್ಮ ದೇಶದಲ್ಲೂ ಇಂತಹ ಯೋಜನೆಗಳನ್ನು ಕೈಗೊಳ್ಳುವಂತೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಹೊಸ ಮನವಿಯನ್ನು ಮಾಡಿದ್ದಾರೆ.
ವೀಡಿಯೋದಲ್ಲೇನಿದೆ?
ಆನಂದ್ ಮಹೀಂದ್ರಾ ಹಂಚಿಕೊಂಡಿರುವ ವೀಡಿಯೋ ಒಂದು ರಸ್ತೆಯಲ್ಲಿ ಸಾಗುವುದನ್ನು ತೋರಿಸುತ್ತದೆ. ಅದೊಂದು ಹಚ್ಚ ಹಸಿರಾದ ರಸ್ತೆಯ ಬದಿಗಳಲ್ಲಿ ಮರಗಳಿಂದ ಸುತ್ತುವರಿದ ಸುರಂಗದೊಳಗೆ ಕರೆದುಕೊಂಡು ಹೋಗುತ್ತದೆ.
Advertisement
I like tunnels, but frankly, I’d much rather go through this kind of ‘Trunnel’ …@nitin_gadkari ji, can we plan to purposefully plant some of these trunnels on the new rural roads you are building? https://t.co/6cE4njjGGi
— anand mahindra (@anandmahindra) August 27, 2022
Advertisement
ವೀಡಿಯೋದೊಂದಿಗೆ ಬರೆದುಕೊಂಡಿರುವ ಮಹೀಂದ್ರಾ, ನನಗೆ ಸುರಂಗಗಳೆಂದರೆ ಇಷ್ಟ. ಆದರೆ ಈ ರೀತಿಯ ಸುರಂಗಗಳ ಮೂಲಕ ಹೋಗುವುದೆಂದರೆ ಇನ್ನೂ ಇಷ್ಟಪಡುತ್ತೇನೆ. ನಿತಿನ್ ಗಡ್ಕರಿ ಅವರೇ, ನೀವು ನಿರ್ಮಿಸುವ ಹೊಸ ಗ್ರಾಮಿಣ ರಸ್ತೆಗಳಲ್ಲಿ ಕೆಲವು ಸುರಂಗಗಳನ್ನು ಈ ರೀತಿಯಾಗಿ ನಿರ್ಮಿಸಲು ಯೋಜಿಸಬಹುದಾ? ಎಂದು ಮಹೀಂದ್ರಾ ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ಹೊಸ ಗ್ರಾಮಿಣ ರಸ್ತೆಗಳ ಬದಿಗಳಲ್ಲಿ ಮರಗಳನ್ನು ನೆಡಲು ಉತ್ತೇಜನ ನೀಡಿದ್ದಾರೆ. ಇದನ್ನೂ ಓದಿ: ಅಮೆರಿಕಾದ ಸಿಯಾಟಲ್‍ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂಭ್ರಮ
Advertisement
Advertisement
ಆನಂದ್ ಮಹೀಂದ್ರಾ ಅವರು ಈ ವೀಡಿಯೋವನ್ನು ಹಂಚಿಕೊಂಡಾಗಿನಿಂದ ಭಾರೀ ವೈರಲ್ ಆಗಿದೆ. 2 ಕೋಟಿಗೂ ಹೆಚ್ಚು ಜನರು ಈ ವೀಡಿಯೋವನ್ನು ವೀಕ್ಷಿಸಿದ್ದು, 39 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ.
ಮಹೀಂದ್ರಾ ಅವರ ಟ್ವೀಟ್‌ಗೆ ಹಲವರು ರೀಟ್ವೀಟ್ ಮಾಡಿ, ಇದು ಪ್ರಕೃತಿಯ ನೈಸರ್ಗಿಕ ಸುರಂಗ, ಇದು ರಸ್ತೆಯ ಉಷ್ಣತೆಯನ್ನು ನಿಯಂತ್ರಿಸುತ್ತದೆ ಎಂದು ತಿಳಿಸಿದ್ದಾರೆ. ಹಲವರು ಇಂತಹ ಅನೇಕ ಸುರಂಗಗಳು ನಮ್ಮ ದೇಶದ ಹಲವು ರಸ್ತೆಗಳಲ್ಲಿ ಕಾಣಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪಕ್ಷ ಇನ್ನಷ್ಟು ಬಲಗೊಳ್ಳಲಿದೆ: ಸಿಎಂ