ಬಿಲಿಯನೇರ್ ಉದ್ಯಮಿ ಆನಂದ್ ಮಹೀಂದ್ರಾ ಸಕ್ಸಸ್‍ಫುಲ್ ಉದ್ಯಮಿಗಳಲ್ಲಿ ಆಗ್ರಗಣ್ಯರು. ಅವರಂತೆ ಯಶಸ್ಸು ಗಳಿಸಲು ಅನೇಕರು ಕಷ್ಟಪಡುತ್ತಿದ್ದಾರೆ. ಈ ಹಿನ್ನೆಲೆ ಮಹೀಂದ್ರಾ ಅವರು ಸಕ್ಸಸ್ ಕುರಿತು ಇಟ್ರಸ್ಟಿಂಗ್ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಬರೆದುಕೊಳ್ಳುತ್ತಿರುತ್ತಾರೆ. ಅದೇ ರೀತಿ ಅವರು ಚಿಕ್ಕ ಹುಡುಗನ ವೀಡಿಯೋವೊಂದನ್ನು ಶೇರ್ ಮಾಡಿದ್ದು, ಅದ್ಭುತವಾದ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
9 ಮಿಲಿಯನ್(90 ಲಕ್ಷ) ಫಾಲೋವರ್‌ಗಳನ್ನು ಹೊಂದಿರುವ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್‌ನಲ್ಲಿ ಫುಲ್ ಆ್ಯಕ್ಟಿವ್ ಆಗಿರುತ್ತಾರೆ. ದಿನಕ್ಕೂಂದು ಇನ್ಟ್ರೆಸ್ಟಿಂಗ್ ವೀಡಿಯೋಗಳನ್ನು ಶೇರ್ ಮಾಡುವ ಮೂಲಕ ಯುವಕರಿಗೆ, ಉದ್ಯಮಿಗಳಿಗೆ ಸ್ಫೂರ್ತಿ ಕೊಡುತ್ತಿರುತ್ತಾರೆ. ಅದೇ ರೀತಿ ಟ್ವಟ್ಟರ್‌ನಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿರುವ ಅವರು ಹುಡುಗನ ಜಾಣ್ಮೆ ಬಗ್ಗೆ ಬರೆದುಕೊಂಡಿದ್ದಾರೆ.
ಈ ವೀಡಿಯೋದಲ್ಲಿ, ಹುಡುಗ ನದಿ ಬಳಿ ಬಂದು ಪಕ್ಕದಲ್ಲಿ ರಾಟೆಯಂತಹ ಉಪಕರಣವನ್ನು ತಂದು ಇಡುತ್ತಾನೆ. ನಂತರ ಮೀನು ಹಿಡಿಯಲು ಹಿಟ್ಟನ್ನು ತಯಾರಿಸಿ ಕುಣಿಕೆಗೆ ಹಾಕಿ ನೀರಿಗೆ ಹಾಕುತ್ತಾನೆ. ಆಗ ಕೆಲವೇ ಸೆಕೆಂಡುಗಳಲ್ಲಿ ಎರಡು ದೊಡ್ಡ ಮೀನುಗಳು ಹುಡುಗನ ಕುಣಿಕೆಗೆ ಸಿಲುಕಿಕೊಳ್ಳುತ್ತೆ. ಅದನ್ನು ತೆಗೆದುಕೊಂಡು ಹುಡುಗ ಅಲ್ಲಿಂದ ಹೋಗುತ್ತಾನೆ. ಇದನ್ನೂ ಓದಿ: 20ಕ್ಕೂ ಹೆಚ್ಚು ಕೆಜಿ ತೂಕದ ಕಾಸ್ಟ್ಯೂಮ್ ಹಾಕಿಕೊಂಡು ಶೂಟ್ ಮಾಡಿದ್ದು ಕಷ್ಟವಾಗಿತ್ತು ಎಂದ ಮುನ್ನಾಭಾಯಿ
This showed up in my inbox without commentary. It is strangely calming to watch in an increasingly complex world. A ‘short story’ that proves: Determination + Ingenuity + Patience = Success pic.twitter.com/fuIcrMUOIN
— anand mahindra (@anandmahindra) April 1, 2022
ಈ ವೀಡಿಯೋ ಚಿಕ್ಕದಾಗಿದ್ದರೂ ಅರ್ಥ ತುಂಬಾ ಇದೆ ಎಂದು ಆನಂದ್ ಮಹೀಂದ್ರಾ ಅವರು ವಿವರಿಸಿದ್ದಾರೆ. ವೀಡಿಯೋ ಶೇರ್ ಮಾಡಿದ ಅವರು, ಹೆಚ್ಚುತ್ತಿರುವ ಸಂಕೀರ್ಣ ಜಗತ್ತಿನಲ್ಲಿ ಈ ವೀಡಿಯೋ ಅರ್ಥ ತುಂಬಾ ದೊಡ್ಡದಿದೆ. ದೃಢಸಂಕಲ್ಪ + ಜಾಣ್ಮೆ + ತಾಳ್ಮೆ = ಯಶಸ್ಸು ಎಂದು ಸಾಬೀತುಪಡಿಸುವ ಸಣ್ಣ ಕಥೆ ಈ ವೀಡಿಯೋದಲ್ಲಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ವೀಡಿಯೋ ಮೂಲಕ ಯುವಕರಿಗೆ ಸಂದೇಶ ಸಾರುವ ಆನಂದ್ ಮಹೀಂದ್ರಾ ಅವರು, ತಮ್ಮ ಸಕ್ಸಸ್ ಗುಟ್ಟನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದರಿಂದ ಅನೇಕರು ಸ್ಫೂರ್ತಿಪಡೆಯುತ್ತಿದ್ದಾರೆ. ಇದನ್ನು ಅವರ ಟ್ವೀಟ್, ರೀ-ಟ್ವೀಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಕೆಲಸ ಮಾಡುತ್ತಿದ್ದ ವೇಳೆ ಮೆಷಿನ್‍ಗೆ ವೇಲ್ ಸಿಲುಕಿ ಯುವತಿ ಸಾವು