ಶಾಲಾ ಮಕ್ಕಳ ದುರ್ಗಾ ಮಾತೆ ಅವತಾರಕ್ಕೆ ಆನಂದ್ ಮಹೀಂದ್ರಾ ಫಿದಾ

Public TV
1 Min Read
Anandh mahindra

ನವದೆಹಲಿ: ಶಾಲಾ ಮಕ್ಕಳು ದುರ್ಗಾ ಮಾತೆಯ ಅವತಾರದಲ್ಲಿ ಪೋಸ್ ನೀಡಿರುವ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈ ಫೋಟೋವನ್ನು ರೀ ಟ್ವೀಟ್ ಮಾಡಿರುವ ಮಹೀಂದ್ರ ಮೋಟರ್ ಮಾಲೀಕ ಆನಂದ್ ಮಹೀಂದ್ರಾ ಅವರು ಫೋಟೋಗೆ ಫಿದಾ ಆಗಿದ್ದಾರೆ.

ದೇಶದೆಲ್ಲೆಡೆ ನವರಾತ್ರಿಯ ಸಂಭ್ರಮವನ್ನು ಆಚರಿಸಲಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಹವಲರು ತಮ್ಮ ಸಂಭ್ರಮಾಚರಣೆಯ ಹಲವು ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಇದೇ ವೇಳೆ ಮನೋಜ್ ಕುಮಾರ್ ಎಂಬ ಟ್ವಿಟ್ಟಿಗರು ಮಕ್ಕಳ ಫೋಟೋವನ್ನು ಟ್ವೀಟ್ ಮಾಡಿ ಇದು ಅತ್ಯುತ್ತಮ ಫೋಟೋ ಎಂದು ಬರೆದುಕೊಂಡಿದ್ದರು. ಈ ಟ್ವಿಟ್ಟನ್ನು ಆನಂದ್ ಮಹೀಂದ್ರಾ ರೀ ಟ್ವೀಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

ಫೋಟೋ ಶೇರ್ ಮಾಡುವುದರೊಂದಿಗೆ ಮಹಾ ಅಷ್ಟಮಿಯ (ನವರಾತ್ರಿ) ಶುಭಾಶಯ ಕೋರಿರುವ ಅವರು, ನಾನು ನೋಡಿದ ಅತಿದೊಡ್ಡ ಮತ್ತು ನಾಟಕೀಯ ಪಾಂಡಲ್‍ಗಳಿಂದ ಇದು ಉತ್ತಮವಾಗಿದೆ. ಮಾನವನ ಚೇತನಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಮಕ್ಕಳು ಯಾವಾಗಲು ಜಯಗಳಿಸುತ್ತಾರೆ ಎಂದು ಬರೆದಿದ್ದಾರೆ.

ಸದಾ ಸಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಆನಂದ್ ಮಹೀಂದ್ರಾ ಅವರು, ಟ್ವಿಟ್ಟರ್ ಮೂಲಕ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಟ್ವಿಟ್ಟರಿನಲ್ಲಿ ಆನಂದ್ ಮಹೀಂದ್ರಾ ಅವರು 70 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಸದ್ಯ ಅವರ ಟ್ವೀಟ್ ಸರಿಸುಮಾರು 900ಕ್ಕೂ ಹೆಚ್ಚು ಬಾರಿ ರೀ ಟ್ವೀಟ್ ಆಗಿದ್ದು, 8 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿ, ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *