ನವರಾತ್ರಿಗೆ ಗಡಿಯಲ್ಲಿ ಸೈನಿಕರು ಗರ್ಬಾ ಡ್ಯಾನ್ಸ್ ಮಾಡಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ಅಲ್ಲದೆ ಮಹೀಂದ್ರ ಮೋಟಾರ್ ಮಾಲೀಕ ಆನಂದ್ ಮಹೀಂದ್ರಾ ಅವರು ಕೂಡ ಈ ವಿಡಿಯೋವನ್ನು ತಮ್ಮ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿಕೊಂಡಿದ್ದು, ನೆಟ್ಟಿಗರು ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರಿನಲ್ಲಿ, “ಡಾಂಡಿಯಾ ಡ್ಯಾಡ್ ಸ್ಪರ್ಧೆಗೆ ನನಗೆ ಯಾವುದೇ ಎಂಟ್ರಿ ಸಿಗಲಿಲ್ಲ. ಆದರೆ ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸುನಾಮಿ ತರಿಸುವಂತಿದೆ. ಅದರಲ್ಲಿ ಈ ವಿಡಿಯೋ ಕೂಡ ಒಂದಾಗಿದ್ದು, ನಾನು ಸೆಲ್ಯೂಟ್ ಮಾಡುತ್ತೇನೆ. ಈ ವಿಡಿಯೋ ನೋಡಿ ನನಗೆ ಈಗ ‘ಹೌ ಈಸ್ ದಿ ಜೋಶ್’ ಎಂದು ಕೇಳುವ ಅವಶ್ಯಕತೆ ಇಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
Advertisement
Advertisement
ವಿಡಿಯೋದಲ್ಲಿ 13 ಸೈನಿಕರು ಟೋಲಿ ಗುಜರಾತಿ ಹಾಡಿಗೆ ಗರ್ಬಾ ಡ್ಯಾನ್ಸ್(ಗುಜರಾತಿ ಶೈಲಿಯ ನೃತ್ಯ) ಮಾಡಿದ್ದಾರೆ. ಈ ವಿಡಿಯೋವನ್ನು ಮೊದಲು ದೀಪ್ತಿ ಚಾರೋಲ್ಕರ್ ಎಂಬವರು ಟ್ವೀಟ್ ಮಾಡಿಕೊಂಡಿದ್ದರು. ಬಳಿಕ ಆನಂದ್ ಅವರು ಈ ಟ್ವೀಟ್ಗೆ ರೀ-ಟ್ವೀಟ್ ಮಾಡಿದ್ದಾರೆ. ಆನಂದ್ ಅವರು ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಈ ವಿಡಿಯೋಗೆ ಸಾವಿರ ಲೈಕ್ಸ್ ಹಾಗೂ ಕಮೆಂಟ್ಗಳು ಬಂದಿದೆ.
Advertisement
Haven’t got any outstanding entries yet to my ‘Dandiya Dad’ competition, but getting a tsunami of related videos. Here’s one that gets my salute…No need to ask how the Josh is! Where is this from, Deepti? https://t.co/qwFu76ZyIX
— anand mahindra (@anandmahindra) October 6, 2019
Advertisement
ಅಲ್ಲದೆ ಆನಂದ್, ದೀಪ್ತಿ ಅವರಿಗೆ ಟ್ವೀಟ್ ಮಾಡುವ ಮೂಲಕ ಸೈನಿಕರು ನೃತ್ಯ ಮಾಡಿದ ಸ್ಥಳದ ಹೆಸರನ್ನು ಕೇಳಿದ್ದಾರೆ. ಈ ವೇಳೆ ನೆಟ್ಟಿಗರು ಸೈನಿಕರು ಇರುವ ಸ್ಥಳದ ಬಗ್ಗೆ ಪ್ರಶ್ನಿಸಬೇಡಿ. ಏಕೆಂದರೆ ಸೈನಿಕರು ಇರುವ ಸ್ಥಳದ ಹೆಸರನ್ನು ಹೇಳಿದರೆ ಅವರಿಗೆ ತೊಂದರೆ ಆಗುವ ಸಾಧ್ಯತೆ ಇದೆ ಎಂದು ಮನವಿ ಮಾಡಿಕೊಂಡಿದ್ದಾರೆ. ಬಳಿಕ ದೀಪ್ತಿ ಅವರು ರಿಪ್ಲೈ ಮಾಡುವ ಮೂಲಕ ನನಗೆ ಈ ವಿಡಿಯೋ ವಾಟ್ಸಾಪ್ನಲ್ಲಿ ಕಳುಹಿಸಲಾಗಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.