ಕಾರವಾರ: ಕೇಂದ್ರ ಕೌಶಾಲ್ಯಾಭಿವೃದ್ಧಿ ಸಚಿವ ಅನಂತ್‍ಕುಮಾರ್ ಹೆಗ್ಡೆ ನಾಲಿಗೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಕಿಡಿಕಾರಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನಂತ್‍ಕುಮಾರ್ ಅವರ ತಂದೆಯೇ ಅವರ ಮೇಲೆ ವಿಶ್ವಾಸ ಇಡುವುದಿಲ್ಲ, ರಾಜಕೀಯಕ್ಕೆ ತಂದೆಯ ಭಾವನೆಯನ್ನೇ ಬಳಸಿಕೊಳ್ಳುತಿದ್ದಾರೆ. ಅವರು ನಾಲಿಗೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಅನಂತಕುಮಾರ್ ಅವರು ಹಿಂದೂ ಮುಸ್ಲಿಂ ಅಂತ ಬೇದ ಭಾವ ಮಾಡುತಿದ್ದಾರೆ. ಅವರು ರಾಜಕಾರಣಕ್ಕೆ ಬಂದಿದ್ದು ರಾಜಕೀಯ ಮಾಡಲು. ಸಮಾಜ ಸೇವೆ ಮಾಡಲು ಅಲ್ಲ. ಈ ಬಾರಿ ಅಭಿವೃದ್ಧಿ ಪರ ಚುನಾವಣೆ ನಡೆಯುತ್ತದೆ. ಈ ಚುನಾವಣೆಯನ್ನು ಆರ್.ವಿ ದೇಶಪಾಂಡೆ ನೇತೃತ್ವದಲ್ಲಿ ಎದುರಿಸುತ್ತೇವೆ. ಮನೆಯಲ್ಲಿ ಜಗಳ ಇದ್ದೇ ಇರುತ್ತದೆ, ಅದು ಸಾಮಾನ್ಯ. ಆದ್ರೆ ಚುನಾವಣೆಯನ್ನು ಒಟ್ಟಿಗೇ ಎದುರಿಸುತ್ತೇವೆ ಎಂದು ಅಸ್ನೋಟಿಕರ್ ತಿಳಿಸಿದ್ದಾರೆ.