ಪಾಟ್ನಾ: ದೇಶದಲ್ಲಿ ಸದ್ಯ ಮರುನಾಮಕರಣದ್ದೇ ಬಹುಚರ್ಚಿತ ವಿಷಯವಾಗಿದೆ. ‘ಇಂಡಿಯಾ’ ಎಂಬ ಹೆಸರನ್ನು ‘ಭಾರತ್’ ಎಂಬುದಾಗಿ ಬದಲಾಯಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಪರ- ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ (Lalu Prasad Yadav) ಅವರ ಹಳೆಯ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು. ಲಾಲೂ ಅವರು ಈ ಹಿಂದೆ ಇಂಡಿಯಾ (India) ಹಾಗೂ ಭಾರತ್ (Bharat) ನಡುವಿನ ವ್ಯತ್ಯಾಸದ ಕುರಿತು ವಿವರಿಸಿದ್ದರು. ಸದ್ಯ ಹಲವು ವರ್ಷಗಳ ಹಿಂದಿನ ಲಾಲೂ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: ದೇಶಕ್ಕೆ ಭಾರತ ಎಂಬ ಹೆಸರೇಕೆ ಬಂತು? ಇಂಡಿಯಾ ಹೆಸರು ಹೇಗೆ ಬಂತು?
Please everyone listen carefully, now Lalu Prasad Yadav will explain. What is the difference between Bharat and India? ????????#Bharath #BharatVsIndia #PAKvBAN #G20Bharat #AsiaCup2023 #Fakenews #G20 #G20SummitDelhi #G20Summit2023 #G20India #KrishnaJanmashtami… pic.twitter.com/AOg9XjZ4rr
— Yogi Adityanath (Parody) (@2yogiadityanath) September 6, 2023
ವೀಡಿಯೋದಲ್ಲೇನಿದೆ..?: ಬಬೂಲ್ ಕಡ್ಡಿಯಲ್ಲಿ ಹಲ್ಲು ಸ್ವಚ್ಛಗೊಳಿಸುತ್ತಾ, ಇದು ನಮ್ಮ ಊರಿಗೆ ಬಂದರೆ ಮಾತ್ರ ಸಿಗಲಿದೆ, ದೆಹಲಿಯಲ್ಲಿ ಸಿಗದು. ಯಾಕೆಂದರೆ ದೆಹಲಿ ಇಂಡಿಯಾ ಅಲ್ವಾ, ನಮ್ಮದು ಭಾರತ. ಹೀಗಾಗಿ ಇದು ಇಲ್ಲಿ ಮಾತ್ರ ಇದು ಸಿಗುತ್ತದೆ ಎಂದಿರುವುದು ಈಗ ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿದೆ.
ಜಿ20 ಶೃಂಗದಲ್ಲಿ ಪಾಲ್ಗೊಳ್ಳಲಿರುವ ವಿಶ್ವದ ಪ್ರಮುಖ ನಾಯಕರಿಗೆ ರಾಷ್ಟ್ರಪತಿ ದೌಪದಿ ಮುರ್ಮು ಅವರು ಭೋಜನಕೂಟಕ್ಕೆ ಆಹ್ವಾನಿಸಿದ್ದಾರೆ. ಅವರ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ನಮೂದಿಸಿರುವುದು ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರ ವಾಕ್ ಸಮರಕ್ಕೆ ಕಾರಣವಾಗಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]