ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ಪತ್ನಿಯೇ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಸಿಲಿಕಾನ್ ಸಿಟಿಯ ಯಲಹಂಕದಲ್ಲಿ ನಡೆದಿದೆ.
ಮೃತನನ್ನು ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಚಂದ್ರಶೇಖರ್ ಪತ್ನಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಹಿಂದೂಪುರ (Hindupura) ದ ಸುರೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಚಂದ್ರಶೇಖರ್ (Chandrashekhar) ಮತ್ತು ಶ್ವೇತಾ (Shwetha) ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆ (Marriage) ಯಾಗಿದ್ದರು. ಇಬ್ಬರ ನಡುವೆ ಹದಿನಾರು ವರ್ಷದ ಅಂತರ ಇತ್ತು. ಆದರೂ ಅಕ್ಕನ ಮಗಳು ಅನ್ನೋ ಕಾರಣಕ್ಕೆ ಮನೆಯವರು ಬಲವಂತದಿಂದ ಮದುವೆ ಮಾಡಿಸಿದ್ದರು. ಇದನ್ನೂ ಓದಿ: ಪ್ಲ್ಯಾನ್ ಮಾಡಿಯೇ ಮಳವಳ್ಳಿಯ ಬಾಲಕಿಯನ್ನು ರೇಪ್ ಮಾಡಿದ್ದ ಆರೋಪಿ ಕಾಂತರಾಜು
Advertisement
Advertisement
ಮದುವೆಯಾದ ಬಳಿಕ ಇಬ್ಬರ ಸಂಸಾರ ಸರಿ ಇರಲಿಲ್ಲ. ಶ್ವೇತಾಗೆ ಕಾಲೇಜು ಗೆಳೆಯರು ಹಾಗೂ ಬೇರೆ ಸ್ನೇಹಿತರ ವಿಚಾರಕ್ಕೆ ಹಲವಾರು ಬಾರಿ ಜಗಳ ಆಗಿದೆ. ಇತ್ತ ಸುರೇಶ್ ಎಂಬಾತನ ಜೊತೆಗೂ ಶ್ವೇತಾ ಸಂಪರ್ಕದಲ್ಲಿದ್ದಳು. ಇಷ್ಟು ಮಾತ್ರವಲ್ಲದೇ ಪತಿ ಇಲ್ಲದ ಸಮಯದಲ್ಲಿ ಇಬ್ಬರು ಸೇರುತ್ತಿದ್ದರು. ಈ ನಡುವೆ ಪತಿ ಇದ್ದರೆ ಇದೆಲ್ಲಾ ಕಷ್ಟ ಅಂದುಕೊಂಡ ಶ್ವೇತಾಳಿಗೆ ಆತನನ್ನೆ ಇಲ್ಲದಂತೆ ಮಾಡು ಎಂದು ಸುರೇಶ್ ಐಡಿಯಾ ಕೊಟ್ಟಿದ್ದಾನೆ.
ಐಡಿಯಾದಂತೆ ಚಂದ್ರಶೇಖರ್ ನನ್ನು ಕೊಲ್ಲುವ ಪ್ಲಾನ್ ಮಾಡಿಕೊಂಡು ಸುರೇಶ್ ಬೆಂಗಳೂರಿಗೆ ಬಂದಿದ್ದ. ಚಂದ್ರಶೇಖರ್ ವಾಸ ಮಾಡ್ತಿದ್ದ ಮನೆಯ ಮೇಲೆಯೇ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಬಳಿಕ ಅಂದರೆ ಅಕ್ಟೋಬರ್ 22ರ ರಾತ್ರಿ ಎಸ್ಕೇಪ್ ಆಗಿದ್ದ. ಆದರೆ ಯಾರು ಕೊಲೆ ಮಾಡಿದ್ದಾರೆ ಎಂದು ಗೊತ್ತೇ ಇಲ್ಲ ಎಂದು ಪೊಲೀಸರ ಮುಂದೆ ಹೇಳಿದ್ದ. ಇದೀಗ ವಿಚಾರಣೆ ಬಳಿಕ ಶ್ವೇತಾ ಹಾಗೂ ಸುರೇಶ್ ಸೇರಿ ಕೊಲೆ ಮಾಡಿರುವುದು ಬಯಲಿಗೆ ಬಂದಿದೆ.