ಚಿತ್ರದುರ್ಗ: ದೇಶದಲ್ಲಿ ಅಂತರ್ಜಾತಿಯ ವಿವಾಹಗಳು ಹೆಚ್ಚಾಗಿ ಆಗುವುದರಿಂದ ಜಾತೀಯತೆ ವ್ಯವಸ್ಥೆ ತೊಲಗಿಸಬಹುದು ಎಂದು ಹಿರಿಯರು ಮಾತನಾಡುತ್ತಾರೆ. ಆದರೆ ಈ ಆಧುನಿಕ ಯುಗದಲ್ಲಿ ಅಂತರ್ಜಾತಿ ವಿವಾಹವಾದ ವಿಕಲಚೇತನ ಜೋಡಿಗೆ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್ ದೇವರಹಳ್ಳಿಯಲ್ಲಿ (Devarahalli) ಬೆಳಕಿಗೆ ಬಂದಿದೆ.
ವಾಕ್, ಶ್ರವಣ ಇಲ್ಲದ ಎನ್ ದೇವರಹಳ್ಳಿ ಗ್ರಾಮದ ಸಾವಿತ್ರಮ್ಮ ಹಾಗೂ ಆಂಧ್ರ ಮೂಲದ ಮಣಿಕಂಠ ಕಳೆದ 3 ವರ್ಷದ ಹಿಂದೆ ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆ ಆಗಿದ್ದರು. 3 ವರ್ಷದ ಬಳಿಕ ಸಾವಿತ್ರಮ್ಮ ತವರು ಮನೆ ಎನ್ ದೇವರಹಳ್ಳಿಗೆ ಬಂದಿದ್ದ ಜೋಡಿಗೆ ಆ ಗ್ರಾಮದ ಜೋಗಿ ಜನಾಂಗದ ಮಹಾನ್ ಪುರುಷರು ಅಂತರ್ ಜಾತಿ ವಿವಾಹ ಆಗಿದ್ದೀರಿ ಅಂತ ಅವರನ್ನು ನಿಂದಿಸಿ, 30,000 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೇ ಗ್ರಾಮದಿಂದ ಬಹಿಷ್ಕಾರ ಹಾಕಿ ಅಮಾನವೀಯತೆ ಮೆರೆದಿದ್ದಾರೆ.
Advertisement
Advertisement
ಆಕೆ ಬಾಣಂತಿ ಎಂಬುದನ್ನು ಲೆಕ್ಕಸದೇ ಗ್ರಾಮದಲ್ಲಿ ಜನರು ಈ ರೀತಿ ಮಾನವೀಯತೆ ಮರೆತು ಅನಾಗರೀಕತೆ ತೋರಿರೋದು ನಿಜಕ್ಕೂ ತುಂಬಾ ನೋವಿನ ಸಂಗತಿ. ಈ ಮುದ್ದಾದ ಜೋಡಿಗೆ ಗ್ರಾಮದಿಂದ ಬಹಿಷ್ಕಾರ ಹಾಕಿದ್ರು ಯಾವುದೇ ಪೊಲೀಸ್ ಠಾಣೆ ಮೆಟ್ಟಿಲೇರದೇ ಮತ್ತೆ ಬೆಂಗಳೂರಿಗೆ ತೆರಳಿದ್ದರು. ಬಳಿಕ ಚಳ್ಳಕೆರೆ ತಾಲೂಕಿನಲ್ಲಿ ನಡೆದ ಪ್ರಸಿದ್ಧ ಗೌರಸಂದ್ರ ಮಾರಮ್ಮ ಜಾತ್ರೆಗೆಂದು ಆಗಮಿಸಿದ್ದಾಗಲೂ ಗ್ರಾಮದ ಅನೇಕ ಮುಖಂಡರು ಅವರಿಗೆ ಕಿರುಕುಳ ಕೊಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಕರ್ನಾಟಕ ಬಂದ್ : ಸಿನಿಮಾ ಬಿಡುಗಡೆ ಮುಂದೂಡಲು ಮನವಿ
Advertisement
Advertisement
ಪುಟ್ಟ ಮಗುವಿನೊಂದಿಗೆ ದಂಪತಿ ಆಗಮಿಸಿದ್ದನ್ನೂ ಲೆಕ್ಕಿಸದ ಗ್ರಾಮಸ್ಥರು ಮನೆ ಬಿಟ್ಟು ಹೋಗುವಂತೆ ಒತ್ತಡ ಹಾಕಿದ್ದಲ್ಲದೇ ಮತ್ತೆಯೂ ದಂಡ ವಿಧಿಸಲು, ಬಹಿಷ್ಕಾರ ಹಾಕಲು ಮುಂದಾಗಿದ್ದಾರೆ. ಇದರಿಂದಾಗಿ ಬೇಸರಗೊಂಡ ಜೋಡಿ ತಮ್ಮ ಪುಟ್ಟ ಮಗುವಿನೊಂದಿಗೆ ಚಳ್ಳಕೆರೆ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಸದ್ಯ ಸಂತ್ರಸ್ತ ಜೋಡಿಯ ಪರ ನಿಂತಿರುವ ಸಾಮಾಜಿಕ ಹೋರಾಟಗಾರರಿಂದ ಬಹಿಷ್ಕಾರ ಹಾಕಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ಇದನ್ನೂ ಓದಿ: ಶುಕ್ರವಾರ ಕರ್ನಾಟಕ ಬಂದ್- ಇಂದು ರಾತ್ರಿಯಿಂದ್ಲೇ ತಮಿಳುನಾಡಿಗೆ ಬಸ್ ಸಂಚಾರ ಬಂದ್
Web Stories