ವಾಷಿಂಗ್ಟನ್: ಭಾರತೀಯ (Indian) ಮೂಲದ ವಿದ್ಯಾರ್ಥಿಯೊಬ್ಬನ (Student) ಮೃತದೇಹ ಅಮೆರಿಕಾದಲ್ಲಿ (America) ಪತ್ತೆಯಾಗಿದೆ.
ಶ್ರೇಯಸ್ ರೆಡ್ಡಿ ಬೆನಿಗರ್ ಮೃತ ವಿದ್ಯಾರ್ಥಿ. ಓಹಿಯೋದ ಲಿಂಡರ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದನು. ರೆಡ್ಡಿಯ ಪೋಷಕರು ಹೈದರಾಬಾದ್‌ನಲ್ಲಿ ನೆಲೆಸಿದ್ದು, ಅವರು ಅಮೆರಿಕಾದ ಪಾಸ್‌ಪೋರ್ಟ್ ಹೊಂದಿದ್ದಾರೆ. ಇದನ್ನೂ ಓದಿ: ತಮಿಳುನಾಡು ಸಿಎಂ ಆಗಿ ಅಣ್ಣಾಮಲೈ ಪ್ರಮಾಣವಚನ ಸ್ವೀಕರಿಸ್ತಾರೆ: ವಿನಯ್ ಗುರೂಜಿ
Advertisement
ಈ ವಾರದ ಆರಂಭದಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನೀಲ್ ಆಚಾರ್ಯ ಶವವಾಗಿ ಪತ್ತೆಯಾಗಿದ್ದರು. ಮಗನ ನಾಪತ್ತೆ ಕುರಿತು ತಾಯಿ ದೂರು ನೀಡಿ, ಮಗನನ್ನು ಹುಡುಕಿ ಕೊಡುವಂತೆ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದರು. ಬಳಿಕ ಕಾಲೇಜಿನ ಕ್ಯಾಂಪಸ್‌ನಲ್ಲಿ ನೀಲ್ ಶವ ಪತ್ತೆಯಾಗಿತ್ತು. ಇದನ್ನೂ ಓದಿ:5 ದಿನ ಇಡಿ ಕಸ್ಟಡಿಗೆ ಹೇಮಂತ್ ಸೋರೆನ್
Advertisement
ಇದೇ ರೀತಿ ಹರಿಯಾಣ ಪಂಚಕುಲದ ನಿವಾಸಿ ವಿವೇಕ್ ಸೈನಿ. ಜಾರ್ಜಿಯಾದ ಲಿಥೋನಿಯಾದಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದರು. ಸೈನಿ ಕನ್ವೀನಿಯನ್ಸ್ ಸ್ಟೋರ್‌ನಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಸೈನಿ ಆ ವ್ಯಕ್ತಿಗೆ ಆಶ್ರಯ ನೀಡಿದ್ದರು. ನಂತರ ಅಲ್ಲಿಂದ ಹೋಗುವಂತೆ ಹೇಳಿದ್ದಾಗ ಆ ವ್ಯಕ್ತಿ 50 ಬಾರಿ ಹೊಡೆದು ಕೊಲೆ ಮಾಡಿದ್ದರು. ಇದನ್ನೂ ಓದಿ: ಕಲ್ಲು ಹೊಡೆದುಕೊಂಡು ಇದ್ದೋರನ್ನ ಲೋಕಸಭೆಗೆ ಕಳುಹಿಸಿದ್ರೆ ಇನ್ನೇನಾಗುತ್ತೆ: ಡಿ.ಕೆ.ಸುರೇಶ್‌ಗೆ ಹೆಚ್‌ಡಿಕೆ ತಿರುಗೇಟು
Advertisement
Advertisement
ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಅಕುಲ್ ಧವನ್ ಜನವರಿಯಲ್ಲಿ ಇಲಿನಾಯ್ಸ್ ಅರ್ಬಾನಾ-ಚಾಂಪೇನ್ ವಿಶ್ವವಿದ್ಯಾಲಯದ ಹೊರಗೆ ಶವವಾಗಿ ಪತ್ತೆಯಾಗಿದ್ದರು. ಶವಪರೀಕ್ಷೆಯಲ್ಲಿ ಅವರು ಹೈಪೋಥರ್ಮಿಯಾದಿಂದ ಸಾವನ್ನಪ್ಪಿದ್ದಾರೆ ಎಂದು ಸೂಚಿಸಿದರು. ಬಳಿಕ ಅಕುಲ್ ನಾಪತ್ತೆ ಬಗ್ಗೆ ವಿಶ್ವವಿದ್ಯಾಲಯದ ಪೊಲೀಸ್ ಇಲಾಖೆ ನಿರ್ಲಕಲ್ಷ್ಯವನ್ನು ಆರೋಪಿಸಿ ಪೋಷಕರು ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: 850 ಅಡಿಕೆ ಮರ ಕಡಿದ ಕೇಸ್‌ಗೆ ಟ್ವಿಸ್ಟ್ – ಮಗಳನ್ನ ಮದುವೆ ಮಾಡಿಕೊಡ್ತೀವಿ ಅಂತಾ 25 ಲಕ್ಷ ಪೀಕಿತ್ತು ಕುಟುಂಬ
ಶ್ರೇಯಸ್ ಹತ್ಯೆ ಸೇರಿ ಒಟ್ಟಾರೆಯಾಗಿ ಇವರೆಗೂ ಭಾರತ ಮೂಲದ ನಾಲ್ಕು ವಿದ್ಯಾರ್ಥಿಗಳ ಹತ್ಯೆಗಳಾಗಿವೆ. ಯುಎಸ್‌ನಲ್ಲಿ ಸುಮಾರು 300,000 ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ, 200,000 ವಿದ್ಯಾರ್ಥಿಗಳಿಗೆ ವೀಸಾಗಳನ್ನು ನೀಡಲಾಗಿದೆ. ಇದನ್ನೂ ಓದಿ: ಸ್ಕೂಟರ್‌ಗೆ ಬಿಎಂಟಿಸಿ ಬಸ್ ಡಿಕ್ಕಿ – ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು