DistrictsKarnatakaLatestMain Post

ಮುರುಘಾ ಶ್ರೀ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಲಿದೆ: ಸಿ.ಟಿ ರವಿ

ಬೆಂಗಳೂರು: ಮುರುಘಾ ಶ್ರೀ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ತನಿಖೆಗೆ ಮೊದಲೇ ಅಪರಾಧಿ ಪಟ್ಟ ಕಟ್ಟಲು ಬರೋದಿಲ್ಲ. ಹಾಗೆಯೇ ನಿರಪರಾಧಿ ಅಂತ ಹೇಳೋಕು ಆಗಲ್ಲ ಅಂತ ತಿಳಿಸಿದರು.

3-4 ದಶಗಳಿಂದ ದುರ್ಬಲ ವರ್ಗಕ್ಕೆ ಶಕ್ತಿ ತುಂಬುವ ಕೆಲಸ ಶ್ರೀಗಳು ಮಾಡಿದ್ದಾರೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತದೆ. ಸಿಎಂ ಕೂಡಾ ಇದನ್ನೇ ಹೇಳಿದ್ದಾರೆ. ಆಳಿನಿಂದ ಹಿಡಿದು ಅರಸನವರೆಗೂ ಕಾನೂನು ಒಂದೇ ಆಗಿರುತ್ತದೆ ಎಂದರು.  ಇದನ್ನೂ ಓದಿ: ನಮಾಜ್‌ ಮಾಡಿ ಹೇಗೇ ಸಂಭ್ರಮಿಸುತ್ತಾರೋ ಗಣೇಶೋತ್ಸವ ಮಾಡಿ ಸಂಭ್ರಮಿಸಲು ನಮಗೂ ಅವಕಾಶವಿದೆ: ಸಿಟಿ ರವಿ

ತನಿಖೆ ಹಂತದಲ್ಲಿ ಇರೋವಾಗ ಮಾತನಾಡಿದ್ರೆ ತಪ್ಪಾಗುತ್ತೆ. ಯಡಿಯೂರಪ್ಪ ಸ್ವಾಮೀಜಿ ಪರ ಸಮರ್ಥನೆ ಮಾಡಿಕೊಂಡ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಏನಾದ್ರು ಹೇಳಿದ್ರೆ ಬೇರೆ ಬೇರೆ ರೀತಿ ಅರ್ಥೈಸುವಂತ ಸಾಧ್ಯತೆಗಳೇ ಜಾಸ್ತಿ ಇದೆ. ಇದನ್ನ ಕಾನೂನು ವ್ಯಾಪ್ತಿಗೆ ಬಿಟ್ಟು ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ ಎಂದು ಹೇಳಿದರು.

ಯಾವುದೇ ರೀತಿ ಹೇಳಿಕೆಯನ್ನ ಕೊಟ್ಟರೆ ತಪ್ಪು ಅರ್ಥ ಬರಲಿದೆ. ಹೀಗಾಗಿ ಈ ಬಗ್ಗೆ ಹೆಚ್ಚೇನು ಹೇಳೋದಿಲ್ಲ. ಒಂದು ಗಾದೆ ಮಾತಿದೆ, ನದಿ ಮೂಲ, ಖುಷಿ ಮೂಲ, ಡ್ಯಾಶ್ ಮೂಲ ಕೆದಕೋಕೆ ಹೋಗಬಾರದಂತೆ. ಹೀಗಾಗಿ ಇದರ ಬಗ್ಗೆ ಕೆದಕೋದಕ್ಕೆ ಹೋಗುವುದಿಲ್ಲ. ತನಿಖೆ ಹಂತದಲ್ಲಿ ನಾನು ಹೇಳಿದ್ರೆ ಅದೇನೋ ಅರ್ಥ ಆಗುತ್ತೆ. ಹೀಗಾಗಿ ನಾನು ಹೆಚ್ಚು ಮಾತಾಡೋದಿಲ್ಲ ಎಂದರು.

Live Tv

Leave a Reply

Your email address will not be published.

Back to top button