ಮಂಗಳೂರು: ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮಕ್ಕೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಬೆಲೆ ನಾಶ ಮಾಡಿದ್ದ ಆನೆಗಳು, ಈಗ ಮತ್ತೆ ನಗರವನ್ನು ಪ್ರವೇಶಿಸಿದೆ.
ಸುಳ್ಯ ನಗರದ ಬಸ್ಮಡ್ಕ ನದಿ ತೀರದಲ್ಲಿ ಕಾಣಿಸಿಕೊಂಡ ಕಾಡಾನೆಗಳು ನಗರದ ನಿವಾಸಿಗಳನ್ನು ಭಯಭೀತರನ್ನಾಗಿಸಿದೆ. ಈ ಹಿಂದೆ ಇಲ್ಲಿನ ಅನೇಕ ಬಾರಿ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
Advertisement
ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನರು ಭಯದಿಂದ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ನಗರಕ್ಕೆ ಕಾಡಾನೆಗಳ ಪ್ರವೇಶಿಸಿದ್ದರಿಂದ ನಗರ ಸಮೀಪ ಕೃಷಿ ತೋಟಗಳಿಗೆ ನುಗ್ಗುವ ಸಾಧ್ಯತೆ ಇದ್ದು, ಇದು ಕೃಷಿಕರನ್ನು ನಿದ್ದೆಗೆಡಿಸುವಂತೆ ಮಾಡಿದೆ.
Advertisement
https://www.youtube.com/watch?v=RLgXvjS4Ins&feature=youtu.be