ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್’ ಸಿನಿಮಾ (Cinema) ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಲೇ ಸಾಗುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಡಿಸೆಂಬರ್ ಒಳಗೆ ಬಿಡುಗಡೆ ಆಗಬೇಕಿತ್ತು. ಸಿನಿಮಾದ ಕೆಲ ಕೆಲಸಗಳು ಬಾಕಿ ಇರುವುದರಿಂದ ನಿಗದಿತ ದಿನಾಂಕದಂದು ರಿಲೀಸ್ ಆಗುವುದು ಕಷ್ಟ ಎಂದು ಹೇಳಲಾಗುತ್ತಿದೆ. ಕೆಲ ತಿಂಗಳಿಂದ ಚಿತ್ರ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಕಾಯುವ ಅಭಿಮಾನಿಗಳಿಗಾಗಿಯೇ ಭರ್ಜರಿ ಸುದ್ದಿಯೊಂದು ಸಿಕ್ಕಿದೆ.
Advertisement
ಮಾರ್ಟಿನ್ (Martin) ಸಿನಿಮಾದಲ್ಲಿ ಅದ್ದೂರಿ ಕ್ಲೈಮ್ಯಾಕ್ಸ್ (Climax) ದೃಶ್ಯವೊಂದನ್ನು ಸಂಯೋಜನೆ ಮಾಡಲಾಗಿದ್ದು, ಈ ದೃಶ್ಯವನ್ನು ಚಿತ್ರೀಕರಿಸಲು 50ಕ್ಕೂ ಹೆಚ್ಚು ದಿನಗಳನ್ನು ತಗೆದುಕೊಳ್ಳಲಾಗಿದೆಯಂತೆ. ಭಾರತೀಯ ಸಿನಿಮಾ ರಂಗದಲ್ಲೇ ಈ ಪ್ರಮಾಣದಲ್ಲಿ ದಿನಗಳನ್ನು ತಗೆದುಕೊಂಡು ಕ್ಲೈಮ್ಯಾಕ್ಸ್ ಶೂಟ್ ಮಾಡಿಲ್ಲ ಎನ್ನಲಾಗುತ್ತಿದೆ. ಈ ದೃಶ್ಯವನ್ನು ಸೆರೆ ಹಿಡಿಯುವುದಕ್ಕಾಗಿ ಹಲವು ದುಬಾರಿ ಕ್ಯಾಮೆರಾಗಳನ್ನೂ ಬಳಸಲಾಗಿದೆಯಂತೆ. ಇದನ್ನೂ ಓದಿ:`ಬನಾರಸ್’ ಚಿತ್ರದ ಬೆನ್ನಲ್ಲೇ ಝೈದ್ ಖಾನ್‌ಗೆ ಬಂತು ಬಿಗ್ ಆಫರ್
Advertisement
Advertisement
ಈ ದೃಶ್ಯದಲ್ಲಿ 40ಕ್ಕೂ ಹೆಚ್ಚು ಟ್ರಕ್, 80ಕ್ಕೂ ಹೆಚ್ಚು ಜೀಪುಗಳನ್ನು ಬಳಕೆ ಮಾಡಲಾಗಿದೆಯಂತೆ. ಅಷ್ಟೇ ಅಲ್ಲದೇ ಯುದ್ಧ ವಿಮಾನ ಕೂಡ ಬಳಕೆಯಾಗಿರುವುದು ಮತ್ತೊಂದು ವಿಶೇಷ. ಸಾಕಷ್ಟು ಕಲಾವಿದರು ಕೂಡ ಈ ದೃಶ್ಯದಲ್ಲಿ ಭಾಗಿಯಾಗಿದ್ದಾರಂತೆ. ಹಾಗಾಗಿ ಇದು ಅತೀ ದುಬಾರಿ ವೆಚ್ಚದಲ್ಲಿ ತಯಾರಾದ ದೃಶ್ಯವೆಂದೇ ಬಣ್ಣಿಸಲಾಗುತ್ತಿದೆ. ಅಂಥದ್ದು ಈ ದೃಶ್ಯದಲ್ಲಿ ಏನಿದೆ ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಬೇಕು.