ಒಂದು ಯುಗ ಈಗಷ್ಟೇ ಊರುಳಿತು: ರತನ್ ಟಾಟಾ ನಿಧನಕ್ಕೆ ಅಮಿತಾಬ್ ಬಚ್ಚನ್ ಸಂತಾಪ

Public TV
2 Min Read
Amitabh Bachchan with ratan tata

ಮುಂಬೈ: ಭಾರತದ ಖ್ಯಾತ ಉದ್ಯಮಿ, ಟಾಟಾಸನ್ಸ್‌ನ (Tata Sons) ಗೌರವ ಅಧ್ಯಕ್ಷ ರತನ್ ಟಾಟಾ (Ratan Tata) ಅವರ ನಿಧನಕ್ಕೆ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ (Amitabh Bachchan) ಸಂತಾಪ ಸೂಚಿಸಿದ್ದಾರೆ.

ರತನ್ ಟಾಟಾ ಅವರೊಂದಿಗೆ ಏತ್‌ಬಾರ್ ಎಂಬ ಸಿನಿಮಾದಲ್ಲಿ ಸಹ ನಿರ್ಮಾಪಕನಾಗಿ ಕೆಲಸ ಮಾಡಿದ್ದೆ. ಖ್ಯಾತ ಉದ್ಯಮಿಯೊಂದಿಗಿನ ನೆನಪು ಅಮರವಾದದ್ದು ಎಂದು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ರತನ್ ಟಾಟಾ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಮಿತಾಬ್ ಬಚ್ಚನ್ ಸಂತಾಪ ಸೂಚಿಸಿದ್ದಾರೆ. ಒಂದು ಯುಗ ಈಗಷ್ಟೇ ಊರುಳಿತು. ಅವರ ನಮ್ರತೆ, ಅವರ ಮಹಾನ್ ಸಂಕಲ್ಪ, ಅವರ ದೂರದೃಷ್ಟಿ ಹಾಗೂ ರಾಷ್ಟ್ರಕ್ಕೆ ಅತ್ಯುತ್ತಮವಾದದ್ದನ್ನು ಸಾಧಿಸುವ ಅವರ ಸಂಕಲ್ಪ, ಎಂದಿಗೂ ಹೆಮ್ಮೆ ತರುವಂತದ್ದು. ಸಾಮಾನ್ಯ ಮಾನವೀಯ ಕಾರಣಗಳಿಗಾಗಿ ರತನ್ ಟಾಟಾ ಅವರೊಂದಿಗೆ ನನಗೆ ಕೆಲಸ ಮಾಡಲು ಅವಕಾಶ ಸಿಕ್ಕದ್ದು ನನಗೆ ಅದೊಂದು ದೊಡ್ಡ ಗೌರವವಾಗಿದೆ. ಈ ದಿನ ತುಂಬಾ ದು:ಖವಾದ ದಿನ. ನನ್ನ ನಮನಗಳು ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: ನಿಮ್ಮ ಆತ್ಮ ನಕ್ಷತ್ರಗಳಾಗಿ ಭೂಮಿಗೆ ಬರಲಿ: ರತನ್ ಟಾಟಾ ನಿಧನಕ್ಕೆ ನಿತ್ಯಾ ಮೆನನ್ ಭಾವುಕ

ಜೊತೆಗೆ ಕಮಲ್ ಹಾಸನ್ ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ರತನ್ ಟಾಟಾ ಜಿ ನನ್ನ ಪರ್ಸನಲ್ ಹೀರೋ. ನನ್ನ ಜೀವನದುದ್ದಕ್ಕೂ ನಾನು ಅವರನ್ನು ಅನುಕರಿಸಲು ಪ್ರಯತ್ನಿಸಿದ್ದೇನೆ. ರಾಷ್ಟ್ರ ನಿರ್ಮಾಣದಲ್ಲಿ ಅವರು ತಮ್ಮ ಕೊಡುಗೆಗಳನ್ನು ಶಾಶ್ವತವಾಗಿ ಕೆತ್ತನೆ ಮಾಡಿದ್ದಾರೆ. ಅವರ ನಿಜವಾದ ಶ್ರೀಮಂತಿಕೆ ಭೌತಿಕ ಸಂಪತ್ತಿನಲ್ಲಿ ಅಲ್ಲ. ಆದರೆ ಅವರ ನೈತಿಕತೆ, ಸಮಗ್ರತೆ, ನಮ್ರತೆ ಮತ್ತು ದೇಶಭಕ್ತಿಯಲ್ಲಿದೆ ಎಂದು ಬರೆದುಕೊಂಡಿದ್ದಾರೆ.

ಅಮಿತಾಬ್ ಬಚ್ಚನ್ ಸೇರಿದಂತೆ ಅನುಷ್ಕಾ ಶರ್ಮಾ, ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್, ಸಲ್ಮಾನ್ ಖಾನ್, ವರುಣ್ ಧವನ್ ಮುಂತಾದ ನಟ-ನಟಿಯರು ಸಂತಾಪ ಸೂಚಿಸಿದ್ದು, ಕಮಲ್ ಹಾಸನ್, ಜೂನಿಯರ್ ಎನ್‌ಟಿಆರ್, ರಾಣಾ ದಗ್ಗುಬಾಟಿ ಕೂಡ ಪೋಸ್ಟ್‌ನ್ನು  ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಉರಿನತ್ತ ಜನ | ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌

Share This Article