ಹಾವೇರಿ: ಭಗವಂತನ ಆಶೀರ್ವಾದ, ಶಿಗ್ಗಾಂವಿ ಜನರ ಹಾಗೂ ದೇವಿಯ ಅನುಗೃಹದಿಂದ ಮತ್ತೆ ಬದುಕಿ ನಿಮ್ಮ ಮುಂದೆ ಬಂದಿದ್ದೇನೆ. ನಿಮ್ಮಲ್ಲರ ಪುಣ್ಯದಫಲ ಮತ್ತು ಪುನಃಜನ್ಮ ನೀಡಿ ಹೆಚ್ಚಿನ ಕೆಲಸವನ್ನ ಮಾಡಲು ಅವಕಾಶವನ್ನು ಭಗವಂತ ನೀಡಿದ್ದಾನೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಕ್ಷೇತ್ರದ ಜನರ ಮುಂದೆ ಭಾವುಕರಾದರು.
ಹಾವೇರಿ (Haveri) ಜಿಲ್ಲೆ ಶಿಗ್ಗಾಂವಿ ಸವಣೂರು ರಸ್ತೆಯಲ್ಲಿರೋ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಕಾರ್ಯಕ್ರಮ ಮಾತನಾಡಿದ ಅವರು, ಕ್ಷೇತ್ರದ ಜನರು ಸಹ ಬೊಮ್ಮಾಯಿ ಯೋಗಕ್ಷೇಮ ವಿಚಾರಣೆ ಮಾಡಿದರು. ನಮ್ಮ ಕ್ಷೇತ್ರದ ಜನರ ಜೊತೆಗೆ ಅನ್ಯೋನ್ಯ ಸಂಬಂಧ ಇದೆ. ಕ್ಷೇತ್ರದಲ್ಲಿ ಹಲವು ಅಭಿವೃದ್ದಿ ಕೆಲಸ ಕಾರ್ಯ ಮಾಡಿದ್ದಾವೆ. ಎರಡೂವರೆ ತಿಂಗಳ ನಂತರ ಕ್ಷೇತ್ರದ ಜನರನ್ನ ಭೇಟಿ ಮಾಡಿದರು. ಎರಡೂವರೆ ತಿಂಗಳ ಹಿಂದೆ ಹೃದಯದ ಶಸ್ತ್ರಚಿಕಿತ್ಸೆ ಆಗಿದೆ. ಮಂಡಿನೋವಿನ ಸಮಸ್ಯೆಯಿಂದ ಆಪರೇಷನ್ ಮಾಡಿಸಬೇಕಿತ್ತು. ಆದರೆ ಮೊದಲು ಹೃದಯದ ಚೆಕ್ ಮಾಡಿದಾಗ ಸ್ವಲ್ಪ ಹೃದಯಕ್ಕೆ ತೊಂದರೆ ಆಗದಂತೆ ಸ್ಟಂಟ್ ಅಳವಡಿಸಲಾಗಿದೆ.
Advertisement
Advertisement
ಹೃದಯ ಸಮಸ್ಯೆ ಇರುವ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಮಂಡಿ ಆಪರೇಷನ್ ಮಾಡಿಸಲು ಹೋದಾಗ ಸಮಸ್ಯೆ ಇರೋದು ಗೊತ್ತಾಗಿತ್ತು. ಆಪರೇಷನ್ ಯಶಸ್ವಿಯಾಗಿದ್ದು, ಶಿಗ್ಗಾಂವಿ ಜನಸ್ತೋಮದ ಆಶೀರ್ವಾದದಿಂದ ಬದುಕಿ ಬಂದಿದ್ದೇನೆ. ಎಲ್ಲಾದರೂ ಹೋದಾಗ ಹೃದಯಾಘಾತ ಆಗಿದ್ದರೆ ಇರುತ್ತಿದ್ದನೋ ಅಥವಾ ಮೇಲೆ ಹೋಗುತ್ತಿದ್ದೋ ಗೊತ್ತಿಲ್ಲ. ನಿಮ್ಮಲ್ಲರ ಆಶೀರ್ವಾದದಿಂದ ಬದುಕಿ ಬಂದಿದ್ದೇನೆ. ಒಂದೇ ಕುಟುಂಬ ಸದಸ್ಯರಾಗಿ ಜೀವನ ಮಾಡುತ್ತಿದ್ದೇವೆ. ಕೊನೆಯ ಉಸಿರು ಇರುವವರಿಗೆ ಹೀಗೆ ಮುಂದುವರಿಯುತ್ತದೆ. ಇದನ್ನೂ ಓದಿ: ವನ್ಯಜೀವಿ ಅಂಗಾಂಗ ವಾಪಸ್ ಮಾಡಲು 3 ತಿಂಗಳು ಅವಕಾಶ: ಈಶ್ವರ್ ಖಂಡ್ರೆ
Advertisement
Advertisement
ಮುಂದಿನ ಜನ್ಮ ಅಂತಾ ಏನಾದರೂ, ಇದ್ದರೆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಶಿಗ್ಗಾಂವಿ ಮತ್ತು ಸವಣೂರು ಮಣ್ಣಿನಲ್ಲಿ ಹುಟ್ಟುವ ಭಾಗ್ಯ ನೀಡಲಿ. ಈ ಜನರ ನಡುವೆ ಬೆರೆತು ಬದುಕು ಕಟ್ಟಿಕೊಳ್ಳುವ ಅವಕಾಶ ಮಾಡಲಿ. ನನ್ಮ ಕೊನೆಯ ಉಸಿರು ಇರೋವರೆಗೂ ಈಕ್ಷೇತ್ರದ ಜನರ ಸೇವೆಯ ಹಾಗೂ ಹಲವು ಅಭಿವೃದ್ಧಿ ಮಾಡುತ್ತೇನೆ. ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನ ಮಾಡಿದ್ದೇವೆ. ನಾವು ಮಾತನಾಡಬಾರದು, ನಮ್ಮ ಕೆಲಸಗಳು ಮಾತನಾಡಬೇಕು ಎಂದು ಬೊಮ್ಮಾಯಿ ಸ್ವಕ್ಷೇತ್ರದಲ್ಲಿ ಭಾವುಕರಾದರು.