ಗಾಂಧೀನಗರ: ಅಂಧ ವ್ಯಕ್ತಿಯೊಬ್ಬರ ಸಮಸ್ಯೆಯನ್ನು ಕೇಳಿ ಪ್ರಧಾನಿ ನರೇಂದ್ರ ಮೋದಿ ಅವರು ಭಾವುಕರಾಗಿದ್ದಾರೆ.
ಗುಜರಾತ್‍ನ ಭರೂಚ್‍ನಲ್ಲಿ ಸರ್ಕಾರಿ ಯೋಜನೆಗಳ ಕುರಿತಂತೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಕಾರ್ಯಕ್ರಮವೊಂದರಲ್ಲಿ ಯಾಕೂಬ್ ಪಟೇಲ್ ತಮ್ಮ ಸಮಸ್ಯೆಯನ್ನು ಹೇಳಿಕೊಂಡು ತಮ್ಮ ಮಗಳು ವೈದ್ಯೆಯಾಗಬೇಕೆಂಬ ಕನಸ್ಸು ಹೊಂದಿದ್ದಾಳೆ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿ ಮೋದಿ ಅವರು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ಜೊತೆಗೆ ಅವರ ಮಗಳ ಕನಸ್ಸನ್ನು ನನಸು ಮಾಡಲು ಮೋದಿ ಮುಂದಾಗಿದ್ದು, ನಿಮ್ಮ ಹೆಣ್ಣು ಮಗಳ ಕನಸನ್ನು ನನಸಾಗಿಸಲು ಏನಾದರೂ ಸಹಾಯ ಬೇಕಿದ್ದರೆ ತಿಳಿಸಿ ಎಂದಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
Advertisement
ನಾಲ್ಕು ನಿಮಿಷವಿರುವ ವೀಡಿಯೋದಲ್ಲಿ, ದೃಷ್ಟಿಹೀನ ಸಮಸ್ಯೆಯಿಂದ ಬಳಲುತ್ತಿರುವ ಯಾಕೂಬ್ ಪಟೇಲ್ ಅವರು, ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರಲ್ಲಿ ನನ್ನ ಹಿರಿಯ ಮಗಳು ವೈದ್ಯೆಯಾಗಬೇಕೆಂಬ ಆಸೆಯನ್ನು ಹೊಂದಿದ್ದಾಳೆ ಎನ್ನುತ್ತಾರೆ. ಈ ವೇಳೆ ವೈದ್ಯೆಯಾಗಲು ಪ್ರೇರಣೆ ಏನು ಎಂದು ಮೋದಿ ಅವರು ಕೇಳಿದಾಗ, ಹುಡುಗಿ ಭಾವುಕಳಾಗಿ, ತನ್ನ ತಂದೆಯ ಅನಾರೋಗ್ಯ ಸಮಸ್ಯೆಗಳಿಂದ ವೈದ್ಯೆಯಾಗಬೇಕೆಂದು ನಿರ್ಧರಿಸಿದೆ ಎಂದಿದ್ದಾರೆ. ಹುಡುಗಿಯ ಮಾತನ್ನು ಕೇಳಿ ಒಂದು ಕ್ಷಣ ಮೂಕರಾದ ಮೋದಿ ಅವರು, ಆಕೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನಗೆ ಅವಕಾಶ ಕೊಟ್ಟಿದ್ದು, ಬೆನ್ನಲುಬಾಗಿ ನಿಂತಿದ್ದು ರಾಹುಲ್‍ಗಾಂಧಿ: ರಮ್ಯಾ ಟ್ವೀಟ್
Advertisement
#WATCH | While talking to Ayub Patel, one of the beneficiaries of govt schemes in Gujarat during an event, PM Modi gets emotional after hearing about his daughter’s dream of becoming a doctor & said, “Let me know if you need any help to fulfill the dream of your daughters” pic.twitter.com/YuuVpcXPiy
— ANI (@ANI) May 12, 2022
Advertisement
ಇದೇ ವೇಳೆ ಈದ್ ಹಬ್ಬವನ್ನು ಹೇಗೆ ಆಚರಿಸಿದ್ರಿ ಎಂದು ಕೇಳುತ್ತಾ, ನಿಮ್ಮ ಮಗಳ ವೈದ್ಯಕೀಯ ಶಿಕ್ಷಣಕ್ಕೆ ಏನಾದರೂ ಸಹಾಯದ ಅಗತ್ಯವಿದ್ದರೆ ತಿಳಿಸಿ. ನೀವು ನಿಮ್ಮ ಮಗಳ ಕನಸನ್ನು ನನಸಾಗಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯಾವಾಗ ಸಿಎಂ ಸ್ಥಾನಕ್ಕೆ ಕೂರ್ತೀವಿ ಎಂದು ಕನಸು ಕಾಣ್ತಿದ್ದಾರೆ: ಡಿಕೆಶಿಗೆ ಟಾಂಗ್ ಕೊಟ್ಟ ಬಿ.ವೈ.ವಿಜಯೇಂದ್ರ