ಗುರುಪ್ರಸಾದ್ ಕೈ ಹಿಡಿದು ಭಾವುಕರಾದ ನಟಿ ಚೈತ್ರಾ ಕೊಟೂರು

Public TV
1 Min Read
Chaitra Kotoor 2

ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ಚೈತ್ರಾ ಕೊಟೂರು (Chaitra Kotoor) ಖಾಸಗಿ ಬದುಕಿನ ನೋವು ಮರೆತು ಮತ್ತೆ ಚಿತ್ರೋದ್ಯಮದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅವರು ಗುರು ಪ್ರಸಾದ್ (Guruprasad) ಮತ್ತು ಜಗ್ಗೇಶ್ ಕಾಂಬಿನೇಷನ್ ನ ‘ರಂಗನಾಯಕ’ ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾದಲ್ಲಿ ಅವರದ್ದು ವಿಶೇಷ ಪಾತ್ರ.

Ranganayaka 4

ಚೈತ್ರಾ ಕೊಟೂರು ಖಾಸಗಿ ಬದುಕಿನಲ್ಲಿ ಬಿರುಗಾಳಿ ಎದ್ದಿರುವ ವಿಚಾರ ಗೊತ್ತೇ ಇದೆ. ಪ್ರೀತಿಸಿ, ಮದುವೆಯಾದ ಹುಡುಗ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಚೈತ್ರಾ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದರು. ಆ ನೋವಿನಲ್ಲಿ ಇದ್ದಾಗಲೇ ಚೈತ್ರಾಗೆ ಗುರುಪ್ರಸಾದ್ ಅವಕಾಶ ನೀಡಿದ್ದಾರಂತೆ. ಹಾಗಾಗಿ ರಂಗನಾಯಕ ಸಿನಿಮಾದ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಆ ಘಟನೆಯನ್ನು ನೆನಪಿಸಿಕೊಂಡರು.

Chaitra Kotoor 1

ನಾನು ತುಂಬಾ ನೊಂದುಕೊಂಡಿದ್ದ ಸಂದರ್ಭದಲ್ಲಿ ಗುರು ಪ್ರಸಾದ್ ಕರೆದು ಸಿನಿಮಾದಲ್ಲಿ ನಟಿಸುವಂತೆ ಅವಕಾಶ ನೀಡಿದರು ಎಂದು ಚೈತ್ರಾ ವೇದಿಕೆಯ ಮೇಲೆ ಭಾವುಕರಾದರು. ಪಕ್ಕದಲ್ಲೇ ನಿಂತಿದ್ದ ನಿರ್ದೇಶಕ ಗುರುಪ್ರಸಾದ್ ಕೈ ಹಿಡಿದುಕೊಂಡು ಕಣ್ಣೀರಿಟ್ಟರು. ಜಗ್ಗೇಶ್ (Jaggesh) ಮತ್ತು ಗುರುಪ್ರಸಾದ್ ಒಟ್ಟಿಗೆ ನಟಿಯನ್ನು ಸಮಾಧಾನಿಸಿದರು.

 

ಅಂದಹಾಗೆ ಈ ಸಿನಿಮಾದಲ್ಲಿ ಜಗ್ಗೇಶ್ ಅವರ ತಾಯಿಯ ಪಾತ್ರದಲ್ಲಿ ಚೈತ್ರಾ ನಟಿಸಿದ್ದಾರಂತೆ. ಜಗ್ಗೇಶ್ ಮತ್ತು ಚೈತ್ರಾಗೆ ವಯಸ್ಸಿನ ಭಾರೀ ವ್ಯತ್ಯಾಸವಿದ್ದರೂ, ಚೈತ್ರಾಗೆ ಅದು ಸವಾಲಿನ ರೀತಿಯ ಪಾತ್ರವಾಗಿತ್ತಂತೆ. ಅದನ್ನು ತೆರೆಯ ಮೇಲೆ ನೋಡಲು ಸ್ವತಃ ಚೈತ್ರಾ ಅವರೇ ಕಾಯುತ್ತಿದ್ದಾರಂತೆ.

Share This Article