ರಾಮನಗರ: ಕಾಡಾನೆಗಳು ಕಾಡಿನಿಂದ ಹೊರಬರದಂತೆ ತಡೆಗಾಗಿ ಅರಣ್ಯ ಇಲಾಖೆ ನಿರ್ಮಿಸಿರುವ ಕಂಬಿ ತಡೆಗೋಡೆ ದಾಟುವ ಮೂಲಕ ಕಾಡಾನೆಯೊಂದು(Elephant) ಅರಣ್ಯ ಇಲಾಖೆಗೆ ಸೆಡ್ಡು ಹೊಡೆದಿದೆ.
ಕನಕಪುರ(Kanakapura) ತಾಲೂಕು ಸಾತನೂರು ಹೋಬಳಿಯ ಹರಿಹರ ಚೆಕ್ ಪೋಸ್ಟ್ ಬಳಿ ಕಾಡಾನೆ ತಡೆಗೋಡೆ ದಾಟಿದೆ. ಬೂಹಳ್ಳಿ ಸರಹದ್ದಿನ ಅರಣ್ಯ(Forest) ಪ್ರದೇಶದ ಉದ್ದಕ್ಕೂ ಕಾಡಾನೆ ಹಾವಳಿ ತಡೆಗೆ ಕಂಬಿ ಅಳವಡಿಸಲಾಗಿದೆ. ಆದರೆ ಈ ಕಾಡಾನೆಯೊಂದು ಕಂಬಿ ದಾಟುವ ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: ಬಾವಿಗೆ ಬಿದ್ದ ಒಂಟಿ ಸಲಗ – ಮೇಲಕ್ಕೆತ್ತಲು ಅರಣ್ಯಾಧಿಕಾರಿಗಳಿಂದ ಬಿಗ್ ಸರ್ಕಸ್
Advertisement
Advertisement
ಕಾಡಾನೆ ಹೊರ ದಾಟುತ್ತಿರುವ ದೃಶ್ಯ ದನಗಳನ್ನು ಮೇಯಿಸುತ್ತಿದ್ದವರ ಮೊಬೈಲಿನಲ್ಲಿ ಸೆರೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡುತ್ತಿದೆ.