ಯಾದಗಿರಿ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವುದಕ್ಕಾಗಿ ರಾಜ್ಯ ಸರ್ಕಾರ ಶಕ್ತಿ ಯೋಜನೆ (Shakti Seheme) ಜಾರಿಗೆ ತಂದಿದೆ. ಶಕ್ತಿಯೋಜನೆ ಜಾರಿಯಾದ ಬಳಿಕ ಹಲವು ಅವಾಂತರಗಳು ರಾಜ್ಯದ ಅಲ್ಲಲ್ಲಿ ಸೃಷ್ಟಿಯಾಗಿವೆ. ಯಾದಗಿರಿ (Yadagiri) ಜಿಲ್ಲೆಯಲ್ಲಿ ಅಂತದ್ದೇ ಅವಾಂತರ ಸೃಷ್ಟಿಯಾಗಿದ್ದು, ಬಸ್‌ನಲ್ಲಿ ಸೀಟ್‌ಗಾಗಿ ವಯೋವೃದ್ಧನ ಮೇಲೆ ನಾಲ್ವರು ಮಹಿಳೆಯರು ಮನಸೋ ಇಚ್ಛೆ ಥಳಿಸಿರುವ ಆರೋಪ ಕೇಳಿ ಬಂದಿದೆ.
ಯಾದಗಿರಿಯಿಂದ ಸೇಡಂಗೆ ಹೊರಟ್ಟಿದ್ದ ಬಸ್‌ನಲ್ಲಿ ಘಟನೆ ನಡೆದಿದೆ. ಬಸ್‌ನಲ್ಲಿ ಕುಳಿತಿದ್ದ ವೃದ್ಧನಿಗೆ ಬಸ್ ಏರಿದ ನಾಲ್ವರು ಮಹಿಳೆಯರು ಸೀಟ್ ಬಿಡುವಂತೆ ಕೇಳಿದ್ದಾರೆ. ಆಗ ಮುಂದಿನ ಸೀಟ್‌ಗಳು ಖಾಲಿ ಇವೆ, ಅಲ್ಲಿ ಕುಳಿತುಕೊಳ್ಳಿ ಎಂದಿದ್ದಾರೆ. ಅಷ್ಟಕ್ಕೆ ನಾಲ್ವರು ಮಹಿಳೆಯರು ವಯೋವೃದ್ಧನ ಮೇಲೆ ಮುಗಿಬಿದ್ದು, ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಹಸುಗಳ ಮಾಂಸ ಬಳಕೆ ಆರೋಪ- ಸಾಕುಪ್ರಾಣಿಗಳ ಆಹಾರ ತಯಾರಿಕಾ ಕಾರ್ಖಾನೆ ಮೇಲೆ ದಾಳಿ
ಘಟನೆ ಬಗ್ಗೆ ಇತರ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಯಾದಗಿರಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು, ವೃದ್ಧನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರು ಮಹಿಳೆಯರನ್ನು ವಿಚಾರಣೆಗೆಂದು ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: Operation Ajay: ಭಾರತ ಸರ್ಕಾರಕ್ಕೆ ಸಲಾಂ – ಇಸ್ರೇಲ್ ಯುದ್ಧ ಭೂಮಿಯ ಅನುಭವ ಬಿಚ್ಚಿಟ್ಟ ಕನ್ನಡಿಗರು
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]