ಬೆಂಗಳೂರಿನಲ್ಲಿ ವೃದ್ಧ ದಂಪತಿ ನೇಣಿಗೆ ಶರಣು

Public TV
1 Min Read
OLD AGED COUPLE SUICIDE

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೃದ್ಧ ದಂಪತಿ ನೇಣಿಗೆ ಶರಣಾದ ಘಟನೆ ನಡೆದಿದೆ.

ಕೃಷ್ಣ ನಾಯ್ಡು (88) ಮತ್ತು ಸರೋಜಮ್ಮ (72) ಆತ್ಮಹತ್ಯೆ ಮಾಡಿಕೊಂಡ ವೃದ್ದ ದಂಪತಿ. ಬೆಳಗ್ಗೆ 5.30ರ ಸುಮಾರಿಗೆ ಸ್ಥಳೀಯರು ಬಂದು ಬಾಗಿಲು ಬಡಿದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ರಷ್ಯಾದ ಡೇಂಜರ್‌ ಸೇನೆಯಲ್ಲಿದ್ದಾರೆ ಕಲಬುರಗಿಯ ಮೂವರು – ನಮ್ಮನ್ನು ರಕ್ಷಿಸಿ ಎಂದ ಯುವಕರು

ಮೂರು ಅಂತಸ್ತಿನ ಕಟ್ಟಡದಲ್ಲಿ ಮಗ ಮೊದಲ ಮಹಡಿಯಲ್ಲಿ ವಾಸವಿದ್ದು ಎರಡು ಮಹಡಿಯಲ್ಲಿರೋ ಮನೆಗಳು ಬಾಡಿಗೆ ಕೊಡಲಾಗಿದ್ದು, ಟೆರೇಸ್ ಮೇಲೆ ಸಣ್ಣ ಮನೆಯಲ್ಲಿ ವೃದ್ಧದಂಪತಿ ವಾಸವಾಗಿರುತ್ತಾರೆ. ಬುಧವಾರ ರಾತ್ರಿ ವೃದ್ಧದಂಪತಿ ಬಟ್ಟೆಗಳಿಂದ ಮನೆಯಲ್ಲಿರೋ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಂಪತಿ ಮಗ ಅಶೋಕ್ ಮುಂಜಾನೆ 5.30 ಸುಮಾರಿಗೆ ಹೋಗಿ ಬಾಗಿಲು ಬಡಿದಾಗ ಬಾಗಿಲು ತಂದೆ ತಾಯಿ ತೆಗೆದಿಲ್ಲ. ಅನುಮಾನ ಬಂದು ಬಾಗಿಲು ಮುರಿದು ಒಳಗಡೆ ನೋಡಿದಾಗ ತಂದೆ- ತಾಯಿ ಇಬ್ಬರೂ ನೇಣು ಹಾಕಿಕೊಂಡಿರೋ ವಿಚಾರ ಬೆಳಕಿಗೆ ಬಂದಿದೆ.

ಸದ್ಯ ಘಟನೆ ಬಗ್ಗೆ ದಂಪತಿ ಮಗ ಅಶೋಕ್ ಅವರಿಂದ ಪೊಲೀಸರು ಹೇಳಿಕೆ ಪಡೆದಿದ್ದು, ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಂಪತಿ ಆತ್ಮಹತ್ಯೆ ವಿಚಾರದಲ್ಲಿ ಒಂದಷ್ಟು ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆಸ್ತಿ ವಿಚಾರಕ್ಕೆ ವೃದ್ಧದಂಪತಿ ಹಾಗೂ ಮಗನ ನಡುವೆ ಏನಾದರೂ ವೈಷಮ್ಯ ಇತ್ತಾ ಅನ್ನೋದರ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

Share This Article