ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ತಡರಾತ್ರಿ 1.50 ಸುಮಾರಿಗೆ ಜಿಲ್ಲೆಯ ತಿಕೋಟಾ ತಾಲೂಕಿನ ಕೆ.ಸಿದ್ದಾಪುರ, ಧನ್ನರ್ಗಿ ಗ್ರಾಮಗಳಲ್ಲಿ ಭೂಮಿ ನಡುಗಿದಂತೆ ಜೋರಾದ ಶಬ್ಧದ ಅನುಭವಾಗಿದೆ. ಇದರಿಂದ ಅಲ್ಲಿನ ಜನರು ಭಯಭೀತರಾಗಿದ್ದಾರೆ. ಬುಧವಾರ ರಾತ್ರಿ 8.26 ರ ಸುಮಾರಿಗೆ ಕಳ್ಳಟಕವಟಗಿ, ಟಕ್ಕಳಕಿ, ಸೋಮದೇವರಹಟ್ಟಿ ಭಾಗದಲ್ಲಿ ಭೂಮಿ ಕಂಪಿಸಿದ್ದ ಅನುಭವವಾಗಿದೆ. ಇದನ್ನೂ ಓದಿ: ವಿಜಯಪುರದ ಸಿಂದಗಿಯಲ್ಲಿ ಭೂಕಂಪನ ಅನುಭವ – ಜನರಲ್ಲಿ ಆತಂಕ
Advertisement
Advertisement
ಈ ಮುನ್ನ ಸೆಪ್ಟೆಂಬರ್ 4 ರಂದು ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ 3.9 ತೀವ್ರತೆಯಲ್ಲಿ ಭೂಕಂಪನ ಉಂಟಾಗಿತ್ತು. ಮಹಾರಾಷ್ಟ್ರದ ಕೊಲ್ಲಾಪುರ ಭೂಕಂಪನದ ಕೇಂದ್ರವಾಗಿತ್ತು. ಹೀಗಾಗಿ ಸಿಂದಗಿ ಪಟ್ಟಣದಲ್ಲಿ ಇದು ಭೂಕಂಪನ ಎನ್ನುವ ಆತಂಕ ಜನರಲ್ಲಿ ಮನೆ ಮಾಡಿತ್ತು. ಇದರ ಬಗ್ಗೆ ಜಿಲ್ಲಾಡಳಿತ ಪರಿಶೀಲಿಸಿ ಜನರಿಗೆ ಸತ್ಯ ತಿಳಿಸಿದರೆ, ಆತಂಕ ದೂರವಾಗುತ್ತದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದರು. ಇದೀಗ ಮತ್ತೆ ವಿಜಯಪುರದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದನ್ನೂ ಓದಿ: ಕೋವ್ಯಾಕ್ಸಿನ್ ಲಸಿಕೆ ಪಡೆದವರು ತಮ್ಮ ದೇಶಕ್ಕೆ ಪ್ರಯಾಣಿಸಬಹುದು: ಯುಎಸ್ ಅನುಮತಿ
Advertisement
Advertisement