ಇಂದು ಹೊಸ ಜೀವನಕ್ಕೆ ಕಾಲಿಟ್ಟ ತರುಣ್ ಸುಧೀರ್ (Tarun Sudhir) ಮತ್ತು ಸೋನಲ್(Sonal) ಲುಕ್ ಎಲ್ಲರ ಗಮನ ಸೆಳೆಯಿತು. ಗೋಲ್ಡನ್ ಸೀರೆಯಲ್ಲಿ ಸೋನಲ್ ಗೊಂಬೆಯಂತೆ ಕಂಡರೆ, ಮೈಸೂರು ಪೇಟ ತೊಟ್ಟು ತರುಣ್ ಸಖತ್ತಾಗಿಯೇ ಪೋಸ್ ಕೊಟ್ಟರು. ಸೋನಲ್ ಧರಿಸಿದ್ದ ಜ್ಯುವೆಲರಿ ಕೂಡ ಎಲ್ಲರ ಗಮನ ಸೆಳೆದವು.
ಗೋಲ್ಡನ್ ಕಲರ್ ಕುರ್ತಾ ಮತ್ತು ಅದೇ ಬಣ್ಣ ಪಂಚೆ ತೊಟ್ಟಿದ್ದ ತರುಣ್, ತಲೆ ಮೇಲಿನ ಮೈಸೂರು ಪೇಟೆ ಮಾತ್ರ ಅವರಿಗೆ ಮತ್ತಷ್ಟು ಕಳೆ ತಂದಿತ್ತು. ಈ ಜೋಡಿಯ ಮದುವೆ (marriage) ಎರಡು ಥೀಮ್ ನಲ್ಲಿ ನಡೆದಿದೆ. ಆರತಕ್ಷತೆಯು ಸಿನಿಮಾ ಪ್ರಶಸ್ತಿ ಪ್ರದಾನ ಸಮಾಂಭದ ಥೀಮ್ ನಲ್ಲಿ ನಡೆದಿದ್ದರೆ, ಮದುವೆ ಸಂಪ್ರದಾಯಿಕ ಶೈಲಿಯಲ್ಲಿತ್ತು.
- Advertisement
- Advertisement
ಇಂದು ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಪೂರ್ಣಿಮಾ ಪಾಲೇಸ್ ನಲ್ಲಿ ನಡೆದ ಮದುವೆಯ ಸಮಾರಂಭದಲ್ಲಿ ಚಿತ್ರರಂಗದ ಅನೇಕ ಗಣ್ಯರ ಮತ್ತು ಕುಟುಂಬದ ಸದಸ್ಯರು ಹಾಜರಿದ್ದರು. ತಾಳಿ ಕಟ್ಟೋ ವೇಳೆ ನಟಿ ಸೋನಲ್ ಭಾವುಕರಾಗಿದ್ದರು.
ನಟರಾದ ಶಿವರಾಜ್ ಕುಮಾರ್, ಗಣೇಶ್, ಶರಣ್, ಜಗಪತಿ ಬಾಬು, ನೆನಪಿರಲಿ ಪ್ರೇಮ್, ಅವಿನಾಶ, ಗಾಯಕ ವಿಜಯ ಪ್ರಕಾಶ್, ನಟಿಯರಾದ ತಾರಾ , ಗಿರಿಜಾ ಲೋಕೇಶ್, ಶ್ರುತಿ, ಮೇಘನಾ ರಾಜ್, ಮೇಘಾ ಶೆಟ್ಟಿ, ರಚಿತಾ ರಾಮ್, ಸುಧಾರಾಣಿ, ನಿಶ್ವಿಕಾ ನಾಯ್ಡು, ಪದ್ಮರಾಜ್ ರಾವ್ ಸಂಗೀತ ನಿರ್ದೇಶಕರಾದ ಹಂಸಲೇಖ, ಹರಿಕೃಷ್ಣ, ಸಾಧು ಕೋಕಿಲಾ ಸೇರಿದಂತೆ ಸಾಕಷ್ಟು ತಾರಾಯರು ಈ ಮದುವೆಗೆ ಸಾಕ್ಷಿಯಾಗಿದ್ದರು